ನವದೆಹಲಿ: ರೈಲ್ವೇ ಇಲಾಖೆಯಲ್ಲಿ ರೈಲ್ವೇ ಪ್ರೊಟೆಕ್ಷನ್ ಫೋರ್ಸ್(ಆರ್‌ಪಿಎಫ್) ಕಾನ್ಸ್ಟೇಬಲ್ ನೇಮಕಾತಿ ಬಗ್ಗೆ ಕೆಲವು ವೆಬ್ಸೈಟ್ಗಳಲ್ಲಿ ಸುದ್ದಿ ಪ್ರಕಟಗೊಂಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಭಾರತೀಯ ರೈಲ್ವೇ ಸ್ಪಷ್ಟನೆ ನೀಡಿದ್ದು, ಪ್ರಕಟಗೊಂಡಿರುವ ಸುದ್ದಿ ಸುಳ್ಳು ಎಂದು ತಿಳಿಸಿದೆ.
ಕೆಲವು ವೆಬ್ಸೈಟ್ಗಳು, ರೈಲ್ವೇ ಪ್ರೊಟೆಕ್ಷನ್ ಫೋರ್ಸ್ ಕಾನ್ಸ್ಟೇಬಲ್ ಹುದ್ದೆಗೆ ನೇಮಕಾತಿ ನಡೆಯುತ್ತಿದೆ ಎಂಬ ಸುದ್ದಿ ಪ್ರಕಟಗೊಳಿಸಿವೆ. ಆದರೆ ಅಂತಹ ಯಾವುದೇ ನೇಮಕಾತಿಯ ಬಗ್ಗೆ ಭಾರತೀಯ ರೈಲ್ವೇ ಪ್ರಕಟಣೆ ಹೊರಡಿಸಿಲ್ಲ ಎಂದು ತಿಳಿಸಿದೆ.