ಕರ್ನಾಟಕ

karnataka

ETV Bharat / bharat

ಕಾಂಗ್ರೆಸ್‌ ಇಲ್ಲದೆ ಬಿಜೆಪಿ ವಿರುದ್ಧದ ಮೈತ್ರಿ ಸಾಧ್ಯವಿಲ್ಲ: ದಿಗ್ವಿಜಯ್‌ ಸಿಂಗ್‌

ಯುಪಿಎಗೆ ಅಸ್ಥಿತ್ವದಲ್ಲಿ ಇಲ್ಲ ಎಂಬ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ನಾಯಕ ದಿಗ್ವಿಜಯ್‌ ಸಿಂಗ್‌, ಕಾಂಗ್ರೆಸ್‌ ಇಲ್ಲದೇ ಬಿಜೆಪಿ ವಿರುದ್ಧ ಯಾವುದೇ ರಾಜಕೀಯ ಮೈತ್ರಿ ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

By

Published : Dec 2, 2021, 2:51 PM IST

No alliance possible against BJP without Congress, claims Digvijaya Singh
ಕಾಂಗ್ರೆಸ್‌ ಇಲ್ಲದೆ ಬಿಜೆಪಿ ವಿರುದ್ಧದ ಮೈತ್ರಿ ಸಾಧ್ಯವಿಲ್ಲ; ದಿಗ್ವಿಜಯ್‌ ಸಿಂಗ್‌

ನವದೆಹಲಿ:ಟಿಎಂಸಿ ನಾಯಕಿ, ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ 'ಯುಪಿಎಗೆ ಅಸ್ಥಿತ್ವದಲ್ಲಿ ಇಲ್ಲ' ಎಂಬ ಹೇಳಿಕೆಗೆ ಕಾಂಗ್ರೆಸ್‌ ನಾಯಕರು ತಿರುಗೇಟು ನೀಡಿದ್ದಾರೆ. ಈ ಬಗ್ಗೆ ದೆಹಲಿಯಲ್ಲಿ ಇಂದು ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ನಾಯಕ ದಿಗ್ವಿಜಯ್‌ ಸಿಂಗ್‌, ಕಾಂಗ್ರೆಸ್‌ ಇಲ್ಲದೇ ಬಿಜೆಪಿ ವಿರುದ್ಧ ಯಾವುದೇ ರಾಜಕೀಯ ಮೈತ್ರಿ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ನಮ್ಮೊಂದಿಗೆ ಸೇರಲು ಬಯಸುವವರು ನಮ್ಮೊಂದಿಗೆ ಬರಬೇಕು. ನಮ್ಮೊಂದಿಗೆ ಸೇರಲು ಬಯಸದವರು ಹಾಗೆ ಮುಕ್ತರಾಗಿದ್ದಾರೆ. ನಮ್ಮ ಹೋರಾಟ ಆಡಳಿತ ಪಕ್ಷದ ಬಿಜೆಪಿ ವಿರುದ್ಧ ಮಾತ್ರ ಎಂದಿದ್ದಾರೆ.

ಕಾಂಗ್ರೆಸ್ ಹೊರತುಪಡಿಸಿ ಬಹುತೇಕ ಎಲ್ಲ ಪಕ್ಷಗಳು ಬಿಜೆಪಿಯೊಂದಿಗೆ ಸರ್ಕಾರ ರಚಿಸಿವೆ. ಅಧಿಕಾರದಲ್ಲಿರುವ ಪಕ್ಷದ ವಿರುದ್ಧ ಹೋರಾಡುವುದು ಕಾಂಗ್ರೆಸ್ ಪಕ್ಷ ಮಾತ್ರ. ನಾವು ಇಲ್ಲದೇ ಬಿಜೆಪಿ ವಿರುದ್ಧ ಈ ದೇಶದಲ್ಲಿ ಯಾವುದೇ ರಾಜಕೀಯ ಮೈತ್ರಿ ಸಾಧ್ಯವಿಲ್ಲ ಎಂದು ಸಿಂಗ್‌ ಅಭಿಪ್ರಾಯಪಟ್ಟಿದ್ದಾರೆ.

ಈ ದೇಶದ ರಾಜಕೀಯ ಹೋರಾಟಗಳಿಗೆ ಸಿದ್ಧಾಂತವೇ ಮುಖ್ಯ ಕಾರಣ. ಭಾರತದಲ್ಲಿ ಎರಡು ರೀತಿಯ ಸಿದ್ಧಾಂತಗಳಿವೆ, ಒಂದು 'ಗಾಂಧಿ ಮತ್ತು ನೆಹರು', ಇನ್ನೊಂದು 'ಸಂಘ'. ಇವರು ರಾಜಕೀಯದಲ್ಲಿ ಧರ್ಮವನ್ನು ಅಸ್ತ್ರವಾಗಿ ಬಳಸುತ್ತಾರೆ ಎಂದು ಪ್ರತಿಪಾದಿಸಿದರು.

ಕಾಂಗ್ರೆಸ್ ಎಂದಿಗೂ ಧರ್ಮವನ್ನು ರಾಜಕೀಯಕ್ಕೆ ಬಳಸಿಕೊಂಡಿಲ್ಲ. ಎಲ್ಲ ವಿರೋಧ ಪಕ್ಷಗಳು ಒಗ್ಗೂಡಿದ ನಂತರವೇ ಬಿಜೆಪಿಯನ್ನು ಸೋಲಿಸಲು ಸಾಧ್ಯ ಎಂಬುದನ್ನು ವಿಪಕ್ಷಗಳು ಅರ್ಥಮಾಡಿಕೊಳ್ಳಬೇಕು. ನಾವೆಲ್ಲರೂ ಒಗ್ಗೂಡಿ ಬಿಜೆಪಿ ವಿರುದ್ಧ ಹೋರಾಡಬೇಕಾಗಿದೆ. ಉತ್ತರ ಪ್ರದೇಶದಲ್ಲೂ ಬಿಜೆಪಿ ವಿರುದ್ಧ ಪ್ರಿಯಾಂಕಾ ಗಾಂಧಿ ಮಾತ್ರ ಹೋರಾಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ನ್ಯಾಷನಲ್‌ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಅವರನ್ನು ಭೇಟಿಯಾದ ಬಳಿಕ ನಿನ್ನೆ ಯುಪಿಎ ಎಂದರೇನು? ಯುಪಿಎ ಇಲ್ಲ ಎಂದು ಪ್ರತಿಕ್ರಿಯಿಸಿದ್ದರು. ಮುಂಬೈನ ಮೂರು ದಿನಗಳ ಪ್ರವಾಸದಲ್ಲಿ ದೀದಿ ಎನ್‌ಸಿಪಿ ಹಾಗೂ ಶಿವಸೇನೆ ನಾಯಕರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.

ಇದನ್ನೂ ಓದಿ:ಶರದ್ ಪವಾರ್ ಭೇಟಿ ಮಾಡಿದ ಮಮತಾ ಬ್ಯಾನರ್ಜಿ: ಅಲಯನ್ಸ್​ ಸಂಬಂಧ ಹೇಳಿದ್ದೇನು?

ABOUT THE AUTHOR

...view details