ಹೈದರಾಬಾದ್:ಇಲ್ಲಿನ ಕೋಟಿಯಲ್ಲಿರುವ ತೆಲಂಗಾಣ ಸಹಕಾರಿ ಬ್ಯಾಂಕಿನಲ್ಲಿ 1.94 ಕೋಟಿ ರೂಪಾಯಿ ದರೋಡೆ ಹಿಂದಿನ ಖದೀಮನನ್ನು ಪೊಲೀಸರು ಗುರುತಿಸಿದ್ದಾರೆ. ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಹೈದರಾಬಾದ್ಗೆ ಬಂದಿದ್ದ ನೈಜೀರಿಯಾದ ವಿಲ್ಸನ್ ಸೇರಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬ್ಯಾಂಕ್ನಲ್ಲಿ ಸರ್ವರ್ ಡೌನ್ ಆಗಿದೆ ಎಂದು ತಿಳಿದ ಆರೋಪಿ ವಿಲ್ಸನ್, ತನ್ನ ಬುದ್ಧಿವಂತಿಕೆಯಿಂದ ಹಣ ದೋಚಿದ್ದಾನೆ ಎನ್ನಲಾಗಿದೆ.
ಇತ್ತೀಚೆಗೆ ತೆಲಂಗಾಣದಲ್ಲಿ ನೈಜೀರಿಯಾ ಪ್ರಜೆಗಳ ಹಾವಳಿ ಹೆಚ್ಚಾಗಿದೆ. ರಾಜ್ಯದಲ್ಲಿ ನಡೆಯುತ್ತಿರುವ ಬಹುತೇಕ ಅಪರಾಧ ಕೃತ್ಯಗಳಲ್ಲಿ ಇವರೇ ಭಾಗಿಯಾಗಿರುತ್ತಾರೆ ಎನ್ನಲಾಗಿದೆ. ಈ ಹಿಂದೆ ಕೇವಲ ಡ್ರಗ್ಸ್ ಜಾಲದಲ್ಲಿ ಮಾತ್ರ ನೈಜೀರಿಯನ್ನರ ಹೆಸರು ಕೇಳಿ ಬರುತ್ತಿತ್ತು. ಆದರೆ, ಈಗ ಎಲ್ಲಾ ಕ್ಷೇತ್ರಗಳಲ್ಲಿಯೂ ಅಪರಾಧ ಕೃತ್ಯಗಳಲ್ಲಿ ತೊಡಗಿದ್ದಾರೆ. ಆಮಿಷವೊಡ್ಡಿ ಜನರನ್ನು ಆಕರ್ಷಿಸಿ, ಹಣ ದರೋಡೆ ಮಾಡುತ್ತಾರೆ.