ಕರ್ನಾಟಕ

karnataka

ETV Bharat / bharat

ನೂತನ ಕೇಂದ್ರ ಸಚಿವರಿಂದ 'ಜನ ಆಶೀರ್ವಾದ ಯಾತ್ರೆ'... ಜನರ ವಿಶ್ವಾಸಗಳಿಸಲು ನಮೋ ಪ್ಲಾನ್​!

ಕೇಂದ್ರ ಸಚಿವ ಸಂಪುಟ ಸೇರ್ಪಡೆಗೊಂಡಿರುವ ನೂತನ ಸಚಿವರ ಜನ ಆಶೀರ್ವಾದ ಯಾತ್ರೆಯಲ್ಲಿ ಭಾಗಿಯಾಗಲಿದ್ದು, ಕರ್ನಾಟಕದಲ್ಲೂ ಇದು ನಡೆಯಲಿದೆ.

By

Published : Aug 10, 2021, 4:53 PM IST

Newly-inducted cabinet ministers
Newly-inducted cabinet ministers

ನವದೆಹಲಿ:ಸಂಸತ್​​ನ ಮಾನ್ಸೂನ್​ ಅಧಿವೇಶನ ಕೆಲವೇ ದಿನಗಳಲ್ಲಿ ಮುಕ್ತಾಯಗೊಳ್ಳಲಿದ್ದು, ಇದರ ಬೆನ್ನಲ್ಲೇ ಮೋದಿ ಸಚಿವ ಸಂಪುಟ ಸೇರ್ಪಡೆಯಾಗಿರುವ ನೂತನ ಸಚಿವರು 'ಜನ ಆಶೀರ್ವಾದ ಯಾತ್ರೆ'ಯಲ್ಲಿ ಭಾಗಿಯಾಗಲಿದ್ದು, ಆಗಸ್ಟ್​ 16ರಿಂದ ದೇಶಾದ್ಯಂತ ಇದು ಆರಂಭಗೊಳ್ಳಲಿದೆ.

ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ಹೊಸದಾಗಿ 43 ಸಚಿವರಿದ್ದು, ಇದರಲ್ಲಿ ಏಳು ಮಂದಿ ಉತ್ತರ ಪ್ರದೇಶದವರಿದ್ದಾರೆ. ಮುಂದಿನ ವರ್ಷ ಉತ್ತರ ಪ್ರದೇಶ, ಪಂಜಾಬ್​, ಗೋವಾ ಸೇರಿದಂತೆ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು 43 ಸಚಿವರು ಸುಮಾರು 300 ರಿಂದ 400 ಕಿಲೋ ಮೀಟರ್​ ದೂರ ಪ್ರಯಾಣ ಮಾಡಿ, ಮೋದಿ ಸರ್ಕಾರದ ಅಭಿವೃದ್ಧಿ ಪರ ಯೋಜನೆಗಳ ಬಗ್ಗೆ ಜನರಿಗೆ ಮನದಟ್ಟು ಮಾಡುವ ಸಾಧ್ಯತೆ ಇದೆ.

ಪ್ರಧಾನಿ ಮೋದಿ ನೇತೃತ್ವದ ಸಚಿವ ಸಂಪುಟ

ಸಂಸತ್​ ಅಧಿವೇಶನದಲ್ಲಿ ನೂತನ ಸಚಿವರ ಪರಿಚಯ ಮಾಡಿಕೊಡಲು ವಿಪಕ್ಷಗಳು ಅವಕಾಶ ನೀಡಿಲ್ಲ. ಹೀಗಾಗಿ ದೇಶದ ಜನರಿಗೆ ಮೋದಿ ಸಂಪುಟದ ಸಚಿವರ ಪರಿಚಯ ಮಾಡಿಕೊಡಲು ಮೋದಿ ಹಾಕಿಕೊಂಡಿರುವ ನೂತನ ಯೋಜನೆ ಇದಾಗಿದೆ ಎನ್ನಲಾಗುತ್ತಿದೆ. ಆಗಸ್ಟ್​ 13ರಂದು ಮಾನ್ಸೂನ್​​ ಅಧಿವೇಶನ ಮುಕ್ತಾಯಗಳ್ಳಲಿದ್ದು, ಆಗಸ್ಟ್​ 15ರಂದು ಧ್ವಜಾರೋಹಣ ಇದಾದ ಬಳಿಕ ಜನ ಆಶೀರ್ವಾದ ಯಾತ್ರೆ ಆರಂಭಗೊಳ್ಳಲಿದೆ.

ಹೊಸದಾಗಿ ಕೇಂದ್ರ ಸಚಿವರಾಗಿರುವವರು ಮೂರರಿಂದ ನಾಲ್ಕು ಲೋಕಸಭಾ ಕ್ಷೇತ್ರಗಳಲ್ಲಿ ತೆರೆದ ವಾಹನದಲ್ಲಿ ಸಂಚಾರ ಮಾಡಿ, ಜನರ ಅಹವಾಲು ಸ್ವೀಕರಿಸುವ ಜೊತೆಗೆ ಕೇಂದ್ರ ಸರ್ಕಾರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮನದಟ್ಟು ಮಾಡಿಕೊಡಬೇಕು. ಜೊತೆಗೆ ಸಭೆಗಳನ್ನುದ್ದೇಶಿಸಿ ಭಾಷಣ ಮಾಡಬೇಕು. ಈ ವೇಳೆ, ಕೇಂದ್ರ ಸರ್ಕಾರದ ಯೋಜನೆ, ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಬೇಕು.

ಇದನ್ನೂ ಓದಿರಿ: ಓದುವ ವಿಚಾರಕ್ಕೆ ಜಗಳ: ಕರಾಟೆ ಬೆಲ್ಟ್​ನಿಂದ ತಾಯಿ ಕತ್ತು ಹಿಸುಕಿ ಕೊಲೆ ಮಾಡಿದ ಮಗಳು

ಆಗಸ್ಟ್​ 16ರಿಂದ ಆರಂಭಗೊಳ್ಳಲಿರುವ ಜನ ಆಶೀರ್ವಾದ ಸಭೆ ದೇಶದ 19 ರಾಜ್ಯಗಳ 150 ಲೋಕಸಭೆಗಳಲ್ಲಿ ನಡೆಯಲಿದ್ದು, ಕರ್ನಾಟಕದಲ್ಲೂ ಯಾತ್ರೆ ನಡೆಯಲಿದೆ. ಕರ್ನಾಟಕದಲ್ಲಿ ನೂತನವಾಗಿ ಸಚಿವರಾಗಿರುವ ರಾಜೀವ್​ ಚಂದ್ರಶೇಖರ್​, ಭಗವಂತ್ ಬೂಖಾ, ನಾರಾಯಣಸ್ವಾಮಿ ಹಾಗೂ ಶೋಭಾ ಕರಂದ್ಲಾಜೆ ಈ ಜನಾಶೀರ್ವಾದ ಸಭೆಯಲ್ಲಿ ಭಾಗಿಯಾಗಲಿದ್ದಾರೆ.

ಈ ಯಾತ್ರೆ ಸುಮಾರು 300 - 400 ಕಿಲೋ ಮೀಟರ್​​ ದೂರ ಕ್ರಮಿಸಲಿದ್ದು, ಸುಮಾರು ನಾಲ್ಕು ಲೋಕಸಭಾ ಕ್ಷೇತ್ರಗಳಲ್ಲಿ ಸಂಚರಿಸಲಿದೆ. ವಿಶೇಷವಾಗಿ 2024ಕ್ಕೆ ಲೋಕಸಭೆ ಚುನಾವಣೆ ನಡೆಯಲಿದ್ದು, ಅದನ್ನು ಗಮನದಲ್ಲಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ಈ ಯೋಜನೆ ಹಾಕಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಜೊತೆಗೆ ಜನರಲ್ಲಿ ಸಚಿವರ ಬಗ್ಗೆ ನಂಬಿಕೆ ಬರುವ ಕಾರಣಕ್ಕಾಗಿ ಈ ಯಾತ್ರೆ ಆಯೋಜನೆಗೊಂಡಿದೆ.

ABOUT THE AUTHOR

...view details