ಕರ್ನಾಟಕ

karnataka

By

Published : Jul 20, 2022, 7:51 AM IST

ETV Bharat / bharat

ಡೋಕ್ಲಾಮ್ ಪ್ರದೇಶದಲ್ಲಿ ಮತ್ತೆ ಚೀನಾ ಕಿರಿಕಿರಿ; ಮತ್ತೊಂದು ಹಳ್ಳಿ ನಿರ್ಮಿಸಿ ತಕರಾರು

ಭಾರತದ ಜೊತೆ ಗಡಿ ಸಂಘರ್ಷ ಹೊಂದಿರುವ ಚೀನಾ ಡೋಕ್ಲಾಂ ಪ್ರದೇಶದಲ್ಲಿ ಹಳ್ಳಿಯನ್ನು ನಿರ್ಮಾಣ ಮಾಡಿದೆ. ಇದು ಭದ್ರತಾ ಆತಂಕ ಉಂಟು ಮಾಡಿದೆ.

ಡೋಕ್ಲಾಮ್ ಪ್ರದೇಶದಲ್ಲಿ ಭಾರತಕ್ಕೆ ಚೀನಾ ಸೆಡ್ಡು
ಡೋಕ್ಲಾಮ್ ಪ್ರದೇಶದಲ್ಲಿ ಭಾರತಕ್ಕೆ ಚೀನಾ ಸೆಡ್ಡು

ನವದೆಹಲಿ:ಭಾರತದೊಂದಿಗೆ ಮತ್ತೆ ಗಡಿ ತಂಟೆ ಆರಂಭಿಸಿರುವ ನೆರೆಯ ಚೀನಾ ಉಭಯ ದೇಶಗಳ ವಿವಾದಿತ ಡೋಕ್ಲಾಂ ಪ್ರದೇಶದಲ್ಲಿ ಮತ್ತೊಂದು ಹಳ್ಳಿಯನ್ನು ನಿರ್ಮಾಣ ಮಾಡಿದೆ. ಈ ಬಗ್ಗೆ ಉಪಗ್ರಹ ಚಿತ್ರಗಳು ಲಭ್ಯವಾಗಿವೆ. ಚೀನಾದ ಈ ಹಳ್ಳಿಯು ಸಂಘರ್ಷಕ್ಕೆ ಕಾರಣವಾಗಿರುವ ಡೋಕ್ಲಾಂ ಪ್ರದೇಶದಿಂದ ಸುಮಾರು 9 ಕಿಮೀ ದೂರದಲ್ಲಿದೆ.

ಈ ಹಿಂದೆ ಭೂತಾನ್​ ತನಗೆ ಸೇರಿದ್ದು ಎಂದು ಹೇಳಿಕೊಂಡ ಪ್ರದೇಶದಲ್ಲಿ ರಸ್ತೆಯನ್ನು ವಿಸ್ತರಿಸಲು ಚೀನಾ ಪ್ರಯತ್ನಿಸಿದ ನಂತರ ಡೋಕ್ಲಾಮ್ ಪ್ರದೇಶದಲ್ಲಿ ಭಾರತದ ಸೈನಿಕರ ಮಧ್ಯೆ ಕಾದಾಟ ನಡೆಸಲಾಗಿತ್ತು. ಇದೀಗ ಅದೇ ಪ್ರದೇಶದ ಆಯಕಟ್ಟಿನ ಜಾಗದಲ್ಲಿ ಡ್ರ್ಯಾಗನ್​ ರಾಷ್ಟ್ರ ಮೂಲಸೌಕರ್ಯಗಳುಳ್ಳ ಹಳ್ಳಿಯನ್ನು ನಿರ್ಮಿಸಿದೆ.

ಕಾಂಗ್ರೆಸ್‌ ಟೀಕೆ:ದೇಶದ ಸಾರ್ವಭೌಮತೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ. ಮೋದಿ ಸರ್ಕಾರ ಯಾಕೆ ಈ ಬಗ್ಗೆ ಮೌನವಾಗಿದೆ? ಎಂದೆಲ್ಲಾ ಕಾಂಗ್ರೆಸ್‌ ಮುಖಂಡ ರಂದೀಪ್ ಸಿಂಗ್ ಸುರ್ಜೇವಾಲ ಅವರು ಚೀನಾ ಆಕ್ರಮಿಸಿಕೊಂಡಿದೆ ಎನ್ನಲಾದ ಉಪಗ್ರಹ ಚಿತ್ರಗಳನ್ನು ಲಗತ್ತಿಸಿ ಟ್ವೀಟ್ ಮೂಲಕ ಟೀಕಿಸಿದ್ದಾರೆ.

ಈ ಬಗ್ಗೆ ಬಾಹ್ಯಾಕಾಶ ತಂತ್ರಜ್ಞಾನ ಮತ್ತು ಗುಪ್ತಚರ ದಳಕ್ಕೆ ಸಹಕರಿಸುವ ಮಕ್ಸಾರ್​ ಎಂಬ ಕಂಪನಿಯು ತನ್ನ ಉಪಗ್ರಹದ ಮೂಲಕ ಚೀನಾದ ಈ ಹಳ್ಳಿಯ ಚಿತ್ರಗಳನ್ನು ಸೆರೆ ಹಿಡಿದಿದೆ. ಇದು ಭೂತಾನ್ ಗಡಿಯಲ್ಲಿ ಚೀನಾ ಅಕ್ರಮವಾಗಿ ವಶಪಡಿಸಿಕೊಂಡ ಜಾಗದಲ್ಲಿದೆ. ಭಾರತದ ಗಡಿಗೂ ಇದು ಸಮೀಪದಲ್ಲಿದೆ ಎಂದು ಗುರುತಿಸಲಾಗಿದೆ.

ಈ ಹಳ್ಳಿಯಿಂದ ಡೋಕ್ಲಾಮ್ ಪ್ರದೇಶವನ್ನು ಸಲೀಸಾಗಿ ಸೇರಬಹುದು. ಅಮೋ ಚು ನದಿ ಕಣಿವೆಯಲ್ಲಿ ನಿರ್ಮಿಸಲಾದ ಎರಡನೇ ಹಳ್ಳಿ ಇದಾಗಿದೆ. ಇದಲ್ಲದೇ, ಮೂರನೇ ಹಳ್ಳಿಯನ್ನೂ ನದಿ ದಂಡೆಯಲ್ಲಿ ನಿರ್ಮಿಸಲು ಚೀನಾ ಹುನ್ನಾರ ನಡೆಸಿದೆ ಎಂದು ವರದಿಯಾಗಿದೆ. ಚೀನಾದ ಈ ನಡೆಗೆ ಭಾರತದ ಸೇನೆ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಇದನ್ನೂ ಓದಿ:ಟ್ರಕ್​ ಹರಿಸಿ ಡಿಎಸ್​​ಪಿ ಹತ್ಯೆ ಪ್ರಕರಣ: ಒಬ್ಬ ಆರೋಪಿ ಮೇಲೆ ಗುಂಡು ಹಾರಿಸಿದ ಪೊಲೀಸರು

ABOUT THE AUTHOR

...view details