ಕರ್ನಾಟಕ

karnataka

ETV Bharat / bharat

ಅನಂತನಾಗ್​ನಲ್ಲಿ ಉಗ್ರರ ದಾಳಿಗೆ ತುತ್ತಾಗಿದ್ದ ನೇಪಾಳದ ವಲಸಿಗ ಕಾರ್ಮಿಕ ಸಾವು

ನ. 3ರಂದು ಅನಂತನಾಗ್​ನ ವನಿಹಮ ಬೊಂಡೈಲಗಾಮಯದಲ್ಲಿ ತಾಪ ಸೇರಿದಂತೆ ಇಬ್ಬರು ವಲಸಿಗರು ಉಗ್ರರ ದಾಳಿಗೆ ಗಾಯಗೊಂಡಿದ್ದರು.

By

Published : Nov 16, 2022, 12:15 PM IST

ಅನಂತನಾಗ್​ನಲ್ಲಿ ಉಗ್ರರ ದಾಳಿಗೆ ತುತ್ತಾಗಿದ್ದ ನೇಪಾಳದ ವಲಸಿಗ ಕಾರ್ಮಿಕ ಸಾವು
Nepali migrant laborer who was attacked by terrorists in Anantnag died

ಶ್ರೀನಗರ (ಜಮ್ಮು ಮತ್ತು ಕಾಶ್ಮೀರ):ನವೆಂಬರ್​ 3ರಂದು ದಕ್ಷಿಣ ಕಾಶ್ಮೀರದ ಅನಂತನಾಗ್​​ ಜಿಲ್ಲೆಯಲ್ಲಿ ಉಗ್ರರ ಗುಂಡಿನ ದಾಳಿಗೆ ಒಳಗಾಗಿದ್ದ ನೇಪಾಳದ ವಲಸಿಗ ಕಾರ್ಮಿಕ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಾವನ್ನಪ್ಪಿದ ವ್ಯಕ್ತಿಯನ್ನು ನೇಪಾಳದ ಗಮನ್​ ಸಿಂಗ್​ ಅವರ ಮಗ ಸಿತ್​ ಬಹ್ದೂರ್​ ತಾಪ (42) ಎಂದು ಗುರುತಿಸಲಾಗಿದೆ.

ಅನಂತನಾಗ್​ನ ವನಿಹಮ ಬೊಂಡೈಲಗಾಮಯದಲ್ಲಿ ತಾಪ ಸೇರಿದಂತೆ ಇಬ್ಬರು ವಲಸಿಗರು ಉಗ್ರರ ದಾಳಿಗೆ ಸಿಲುಕಿ ಗಾಯಗೊಂಡಿದ್ದರು. ಅವರನ್ನು ತಕ್ಷಣಕ್ಕೆ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗೆ ತಾಪನನ್ನು ಇಲ್ಲಿನ ಎಸ್​ಕೆಐಎಂಎಸ್​ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ಆತ ಚಿಕಿತ್ಸೆ ಫಲಿಸದೇ ಮಂಗಳವಾರ ಸಾವನ್ನಪ್ಪಿದ್ದಾನೆ.

ಇದನ್ನೂ ಓದಿ: 2,000 ರೂಪಾಯಿ ಹಣಕ್ಕಾಗಿ ಚಾಕು ಇರಿದು ವ್ಯಕ್ತಿಯ ಬರ್ಬರ ಹತ್ಯೆ

ABOUT THE AUTHOR

...view details