ಕರ್ನಾಟಕ

karnataka

ETV Bharat / bharat

ಸಾಕುನಾಯಿಗಾಗಿ ಏರ್​ ಇಂಡಿಯಾದ ಇಡೀ ಬ್ಯುಸಿನೆಸ್​ ಕ್ಲಾಸ್​ ಕ್ಯಾಬಿನ್ ಬುಕ್ ಮಾಡಿದ ಮಾಲೀಕ! - ಮಾಲ್ಟೀಸ್ ಫರ್ಬಾಲ್ ನಾಯಿ

ಮುಂಬೈನಿಂದ ಚೆನ್ನೈಗೆ ತನ್ನ ಸಾಕುನಾಯಿ ಪ್ರಯಾಣಕ್ಕಾಗಿ ಇಡೀ ಬ್ಯುಸಿನೆಸ್ ಕ್ಲಾಸ್ ಕ್ಯಾಬಿನ್ ಅನ್ನು ಉದ್ಯಮಿಯೋರ್ವ ಕಾಯ್ದಿರಿಸಿದ್ದರು. ಒಟ್ಟು 2.5 ಲಕ್ಷ ರೂಪಾಯಿ ಪಾವತಿಸಿ ಮುಂಬೈನಿಂದ ಚೆನ್ನೈಗೆ ಸಾಕುನಾಯಿ ಜೊತೆ ಬಂದಿಳಿದಿದ್ದಾರೆ.

mumbai-dog-owner-books-entire-business-cabin-for-pet
ಸಾಕುನಾಯಿಗಾಗಿ ಏರ್​ ಇಂಡಿಯಾದ ಇಡೀ ಬ್ಯುಸಿನೆಸ್​ ಕ್ಲಾಸ್​ ಕ್ಯಾಬಿನ್ ಬುಕ್ ಮಾಡಿದ ಮಾಲೀಕ

By

Published : Sep 19, 2021, 8:12 AM IST

ಮುಂಬೈ: ಸಾಕುನಾಯಿಗಳಿಗೆ ಕೆಲ ಮಾಲೀಕರು ಎಂತಹ ಕಾಳಜಿ, ಪ್ರೀತಿ ತೋರಿಸುತ್ತಾರೆಂದರೆ ಕೆಲ ಬಾರಿ ಅಚ್ಚರಿಗೂ ಕಾರಣವಾಗುತ್ತದೆ. ಇಂತಹದ್ದೇ ಅಚ್ಚರಿ ಮೂಡಿಸುವ ಘಟನೆಯೊಂದು ಮುಂಬೈನಲ್ಲಿ ನಡೆದಿರುವುದು ವರದಿಯಾಗಿದೆ.

ಮುಂಬೈನಿಂದ ಚೆನ್ನೈಗೆ ತೆರಳಬೇಕಿದ್ದ ಉದ್ಯಮಿಯೋರ್ವ ತನ್ನ ಸಾಕುನಾಯಿಗಾಗಿ ಏರ್​​ ಇಂಡಿಯಾ ವಿಮಾನದ ಇಡೀ ಬ್ಯುಸಿನೆಸ್​ ಕ್ಲಾಸ್ ಕ್ಯಾಬಿನ್ ಅನ್ನೇ ಬುಕ್ ಮಾಡಿ ಅಚ್ಚರಿ ಮೂಡಿಸಿದ್ದಾರೆ. ಬುಧವಾರ ಆತ ಮುಂಬೈನಿಂದ ಚೆನ್ನೈಗೆ ತೆರಳಬೇಕಿತ್ತು, ತನ್ನ ಸಾಕುನಾಯಿಯ ಜೊತೆ ಐಷಾರಾಮಿ ಪ್ರಯಾಣಕ್ಕಾಗಿ ಬರೋಬ್ಬರಿ 2.5 ಲಕ್ಷ ರೂಪಾಯಿ ವ್ಯಯಿಸಿ ಬ್ಯುಸಿನೆಸ್ ಕ್ಲಾಸ್ ಕ್ಯಾಬಿನ್ ಬುಕ್ ಮಾಡಿದ್ದಾರೆ.

ಏರ್​ ಇಂಡಿಯಾ ಎ-320 ವಿಮಾನ ಒಟ್ಟು 12 ಬ್ಯುಸಿನೆಸ್ ಕ್ಲಾಸ್​​​​​ ಕ್ಯಾಬಿನ್​​ ಹೊಂದಿದೆ. ಮುಂಬೈನಿಂದ ಚೆನ್ನೈಗೆ ಒಂದು ಬ್ಯುಸಿನೆಸ್ ಕ್ಲಾಸ್ ಟಿಕೆಟ್​ನ ಬೆಲೆ 20 ಸಾವಿರ ರೂಪಾಯಿಯಾಗಿರಲಿದೆ. ಆದರೆ ಈ ಸಾಕುನಾಯಿ ಮಾಲೀಕ ಇಡೀ ಕ್ಯಾಬಿನ್ ಬುಕ್ ಮಾಡಿದ್ದರು. ಮಾಲ್ಟೀಸ್ ಫರ್ಬಾಲ್ ತಳಿಯ ನಾಯಿ ಮತ್ತು ಅದರ ಮಾಲೀಕ ಸೆ.15ರಂದು ಮುಂಬೈನಿಂದ ಚೆನ್ನೈಗೆ ತೆರಳಿದ್ದಾರೆ.

ಏರ್ ಇಂಡಿಯಾದ ವಿಮಾನ ನಿಯಮದ ಪ್ರಕಾರ, ನಾಯಿ, ಬೆಕ್ಕು ಮತ್ತು ಪಕ್ಷಿಗಳಿಗೆ ವಿಮಾನದಲ್ಲಿ ಪ್ರಯಾಣಿಸಲು ಅವಕಾಶವಿದೆ. ಆದರೆ ಈ ಪ್ರಾಣಿಗಳು ಲಸಿಕೆ ಪ್ರಮಾಣಪತ್ರವನ್ನು ಹೊಂದಿರಬೇಕು. ಒಬ್ಬ ಪ್ರಯಾಣಿಕನಿಗೆ ಎರಡು ಸಾಕುಪ್ರಾಣಿಗಳನ್ನು ತೆಗೆದುಕೊಂಡು ವಿಮಾನ ಏರಲು ಅನುಮತಿಸಲಾಗಿದೆ. ಪ್ರಾಣಿಗಳ ಗಾತ್ರ ಮತ್ತು ಯಾವ ಪ್ರಾಣಿ ಎಂಬುದರ ಮೇಲೆ ಅವುಗಳನ್ನು ಕ್ಯಾಬಿನ್ ಅಥವಾ ಸರಕಿನಲ್ಲಿ ಸಾಗಿಸಬಹುದು. ಆದರೆ ಬ್ಯುಸಿನೆಸ್ ಕ್ಲಾಸ್​​ನಲ್ಲಿ ತೆರಳಬೇಕಾದರೆ ಕೊನೆಯ ಸಾಲಿನ ಸೀಟ್​ನಲ್ಲಿ ಮಾತ್ರ ಕುಳಿತುಕೊಳ್ಳಬೇಕಾಗುತ್ತದೆ.

ಇದನ್ನೂ ಓದಿ:ಪಂಜಾಬ್‌ ಸಿಎಂ ರೇಸ್‌ನಲ್ಲಿ ಮೂವರ ಹೆಸರು ; ಯಾರಿಗೆ ಮಣೆ ಹಾಕ್ತಾರೆ ಸೋನಿಯಾ ಗಾಂಧಿ!?

ABOUT THE AUTHOR

...view details