ಹೈದರಾಬಾದ್(ತೆಲಂಗಾಣ):ಕೆಜಿಎಫ್ ಬೆಡಗಿ ಮೌನಿರಾಯ್ ಅವರು ತಮ್ಮ ಬಹುಕಾಲದ ಗೆಳೆಯ ಸೂರಜ್ ನಂಬಿಯಾರ್ ಅವರ ಜೊತೆ ಸಪ್ತಪದಿ ತುಳಿದಿದ್ದಾರೆ. ಈ ಕುರಿತ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಇದೀಗ ವೈರಲ್ ಆಗುತ್ತಿವೆ.
ನಟಿ ಮೌನಿ ರಾಯ್, ಸೂರಜ್ ದುಬೈನಲ್ಲಿ ಮದುವೆಯಾಗಲಿದ್ದಾರೆ ಎಂದು ಗುಸುಗುಸು ಹರದಾಡುತ್ತಿತ್ತು. ಆದರೆ, ಅವರು ಗೋವಾದಲ್ಲಿ ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ.
ಝಗಮಗಿಸುವ ಮಂಟಪದಲ್ಲಿ ಸೂರಜ್ ಅವರು ಮೌನಿರಾಯ್ಗೆ ಮಾಂಗಲ್ಯಧಾರಣೆ ಮಾಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಇಬ್ಬರ ಮದುವೆ ಬಂಗಾಳಿ ಮತ್ತು ದಕ್ಷಿಣ ಭಾರತದ ಸಂಪ್ರದಾಯದಂತೆ ನಡೆದಿದೆ. ಕೋವಿಡ್ ಕಾರಣ ದಂಪತಿಯ ಅತ್ಯಾಪ್ತರು, ಕುಟುಂಬಸ್ಥರು ಮಾತ್ರ ಮದುವೆ ಸಾಕ್ಷಿಯಾಗಿದ್ದಾರೆ.