ಕರ್ನಾಟಕ

karnataka

ಅಮುಲ್ ಬೆನ್ನಲ್ಲೇ ಮದರ್​ ಡೈರಿ ಹಾಲಿನಲ್ಲೂ 2ರೂ. ಏರಿಕೆ.. ನಾಳೆಯಿಂದಲೇ ಪರಿಷ್ಕೃತ ದರ ಜಾರಿ

Mother Dairy to hike milk prices: ಕಳೆದ ಕೆಲ ದಿನಗಳ ಹಿಂದೆ ಅಮುಲ್ ಪ್ರತಿ ಲೀಟರ್​​​ ಹಾಲಿನ ಬೆಲೆಯಲ್ಲಿ 2 ರೂಪಾಯಿ ಏರಿಕೆ ಮಾಡಿತ್ತು. ಇದರ ಬೆನ್ನಲ್ಲೇ ಇದೀಗ ಮದರ್​ ಡೈರಿ ಕೂಡ ಹಾಲಿನ ಬೆಲೆಯಲ್ಲಿ ಏರಿಕೆ ಮಾಡಿ ಗ್ರಾಹಕರಿಗೆ ಶಾಕ್​ ನೀಡಿದೆ.

By

Published : Mar 5, 2022, 5:01 PM IST

Published : Mar 5, 2022, 5:01 PM IST

Mother Dairy to hike milk prices
Mother Dairy to hike milk prices

ಹೈದರಾಬಾದ್​​: ಕಳೆದ ನಾಲ್ಕು ದಿನಗಳ ಹಿಂದೆ ಪ್ರತಿ ಲೀಟರ್​ ಹಾಲಿನ ಬೆಲೆಯಲ್ಲಿ ಎರಡು ರೂಪಾಯಿ ಏರಿಕೆ ಮಾಡಿ ಅಮುಲ್​​ ಘೋಷಣೆ ಹೊರಹಾಕಿತ್ತು. ಇದರ ಬೆನ್ನಲ್ಲೇ ಇದೀಗ ಮದರ್ ಡೈರಿ ಕೂಡ ಗ್ರಾಹಕರ ಜೇಬಿಗೆ ಕತ್ತರಿ ಹಾಕಲು ಮುಂದಾಗಿದೆ.

ಮದರಿ ಡೈರಿ ಕಂಪನಿಯ ಪ್ರತಿ ಲೀಟರ್​ ಹಾಲಿನ ಮೇಲೆ 2 ರೂಪಾಯಿ ಏರಿಕೆ ಮಾಡಿ ಆದೇಶ ಹೊರಡಿಸಲಾಗಿದ್ದು, ಪರಿಷ್ಕೃತ ದರ ನಾಳೆಯಿಂದಲೇ ದೆಹಲಿ ಸೇರಿದಂತೆ ಪ್ರಮುಖ ನಗರಗಳಲ್ಲಿ ಜಾರಿಗೆ ಬರಲಿದೆ.

ಮದರ್​ ಡೈರಿ ಈ ಹಿಂದೆ 2021ರ ಜುಲೈ​ ತಿಂಗಳಲ್ಲಿ ಬೆಲೆ ಏರಿಕೆ ಮಾಡಿತ್ತು ಎಂದು ಕಂಪನಿ ಹೇಳಿಕೊಂಡಿದೆ. ಕಳೆದ ಒಂದು ವರ್ಷದಿಂದ ಹಾಲು ಖರೀದಿಯಲ್ಲಿ ಶೇ 8ರಿಂದ 9ರಷ್ಟು ಏರಿಕೆಯಾಗಿದ್ದು, ಇದರ ಜತೆಗೆ ಉತ್ಪಾದನಾ ವೆಚ್ಚ ಕೂಡ ಹೆಚ್ಚಾಗುತ್ತಿರುವ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.

ಇದನ್ನೂ ಓದಿರಿ:ಮತ್ತೆ ಹಿಜಾಬ್ ಗದ್ದಲ: ಚಿಕ್ಕಮಗಳೂರು ಕಾಲೇಜಿನಲ್ಲಿ 25 ವಿದ್ಯಾರ್ಥಿನಿಯರಿಗೆ ತಡೆ

ಉತ್ತರ ಪ್ರದೇಶ, ಮುಂಬೈ, ನಾಗ್ಪುರ್​ ಮತ್ತು ಕೋಲ್ಕತ್ತಾ, ದೆಹಲಿ ಸೇರಿದಂತೆ 11 ನಗರಗಳಲ್ಲಿ ಈ ಪರಿಷ್ಕೃತ ದರ ಜಾರಿಗೊಳ್ಳಲಿದೆ. ದೇಶದ 100 ನಗರಗಳಲ್ಲಿ ಮದರ್​ ಡೈರಿ ಹಾಲು ಲಭ್ಯವಾಗುತ್ತಿದ್ದು, ಪ್ರತಿದಿನ 150 ಲಕ್ಷ ಲೀಟರ್ ಹಾಲು ಮಾರಾಟ ಮಾಡ್ತಿದೆ.

ಪ್ರಮುಖವಾಗಿ ದೆಹಲಿ-ಎನ್​​ಸಿಆರ್​​ನಲ್ಲಿ 37 ಲಕ್ಷ ಲೀಟರ್​ ಹಾಲು ಮಾರಾಟವಾಗುತ್ತಿದೆ. ದೇಶದಲ್ಲಿ ಪ್ರತಿ ಲೀಟರ್ ಮದರ್​​ ಡೈರಿ​​ ಹಾಲಿನ ಬೆಲೆ 44 ರೂ. ಆಗಿದ್ದು, ಇದೀಗ 46 ರೂ. ಆಗಲಿದೆ. ಫುಲ್ ಕ್ರೀಮ್ ಹಾಲಿನ ದರ ಲೀಟರ್‌ಗೆ ₹ 59 ಆಗಲಿದೆ.

ABOUT THE AUTHOR

...view details