ಕರ್ನಾಟಕ

karnataka

By

Published : Feb 11, 2021, 9:47 AM IST

ETV Bharat / bharat

ಸೀತಾರಾಮನ್ ಮಂಡಿಸಿದ 2021ರ ಬಜೆಟ್ 21ನೇ ಶತಮಾನದ ದಿಕ್ಸೂಚಿ: ತೇಜಸ್ವಿ ಸೂರ್ಯ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್​​ ಮೂಲಸೌಕರ್ಯ ಅಭಿವೃದ್ಧಿ ಮತ್ತು ಬಂಡವಾಳ ಆಸ್ತಿ ಸೃಷ್ಟಿಗೆ ಹೆಚ್ಚಿನ ಹಂಚಿಕೆ ಮಾಡಲಾಗಿದೆ. 21ನೇ ಶತಮಾನಕ್ಕೆ ಬೇಕಾದ ಮೂಲಸೌಕರ್ಯಗಳನ್ನು ಸ್ಥಾಪನೆಗೆ ಭರವಸೆ ನೀಡಿದೆ ಎಂದು ಸಂಸದ ತೇಜಸ್ವಿ ಸೂರ್ಯ ಅಭಿಪ್ರಾಯಪಟ್ಟರು.

tejasvi surya
ಸಂಸದ ತೇಜಸ್ವಿ ಸೂರ್ಯ

ನವದೆಹಲಿ: ಅಂತಿಮವಾಗಿ ಭಾರತವನ್ನು ಎರಡು-ಅಂಕಿಯ ಬೆಳವಣಿಗೆಯ ಹಾದಿಯಲ್ಲಿ ಇರಿಸಿದ 2021ರ ಬಜೆಟ್ ನೆನಪಿನಲ್ಲಿ ಉಳಿಯುವಂತಹದ್ದು ಎಂದು ಸಂಸದ ತೇಜಸ್ವಿ ಸೂರ್ಯ ಅಭಿಪ್ರಾಯಪಟ್ಟರು.

ಬಜೆಟ್ ಅಧಿವೇಶನದಲ್ಲಿ ಮಾತನಾಡಿದ ಅವರು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್​​ ಮೂಲಸೌಕರ್ಯ ಅಭಿವೃದ್ಧಿ ಮತ್ತು ಬಂಡವಾಳ ಆಸ್ತಿ ಸೃಷ್ಟಿಗೆ ಹೆಚ್ಚಿನ ಹಂಚಿಕೆ ಮಾಡಲಾಗಿದೆ. 21ನೇ ಶತಮಾನಕ್ಕೆ ಬೇಕಾದ ಮೂಲಸೌಕರ್ಯಗಳನ್ನು ಸ್ಥಾಪನೆಗೆ ಭರವಸೆ ನೀಡಿದೆ ಎಂದರು.

ಸಂಸದ ತೇಜಸ್ವಿ ಸೂರ್ಯ

ಕಳೆದ ಆರು ವರ್ಷಗಳಲ್ಲಿ ಭಾರತದಲ್ಲಿ ಮೂರನೇ ಒಂದು ಭಾಗದಷ್ಟು ರಾಷ್ಟ್ರೀಯ ಹೆದ್ದಾರಿಗಳನ್ನು ಮೋದಿ ಸರ್ಕಾರ ನಿರ್ಮಿಸಿದೆ. ಯುಪಿಎಗೆ ಹೋಲಿಸಿದರೆ ವಿದ್ಯುದೀಕರಣದಲ್ಲಿ ಶೇ 371ರಷ್ಟು ಹೆಚ್ಚಳವಾಗಿದೆ. ಭವಿಷ್ಯದ ದೃಷ್ಟಿಕೋನ ಇರಿಸಿಕೊಂಡು ಆಯವ್ಯಯ ಮಂಡಿಸಿದ ಹಣಕಾಸು ಸಚಿವರಿಗೆ ಧನ್ಯವಾದಗಳು ಎಂದು ಹೇಳಿದರು.

ರಕ್ಷಣಾ ಅನುದಾನದಲ್ಲಿ ಶೇ 19ರಷ್ಟು ಹೆಚ್ಚಳ ಆಗುವುದರೊಂದಿಗೆ ಬಜೆಟ್ ದೇಶಕ್ಕೆ ನೆರವಾಗಲಿದೆ. ವಿನ್ಯಾಸದ ಮೂಲಕ ದೇಶದ ಬೆಳವಣಿಗೆಯನ್ನು ಇಲ್ಲಿಯವರೆಗೆ ತಡೆಹಿಡಿಯಲಾಗಿತ್ತು. ಇನ್ನು ಮುಂದೆ ಅಂತಹ ಅಡೆತಡೆಗಳು ಇರುವುದಿಲ್ಲ. ಭಾರತದ ರಾಜಕೀಯ ಆರ್ಥಿಕತೆಯನ್ನು ಪರಿವರ್ತಿಸಲು ಪ್ರಧಾನಿಯ ನೀತಿಗಳು ಪ್ರಯತ್ನಿಸುತ್ತಿವೆ. ಈ ಬಜೆಟ್ ಹೂಡಿಕೆ ಮಾಡುವುದನ್ನು ಒಪ್ಪುತ್ತದೆ ಮತ್ತು ಆರ್ಥಿಕ ಬೆಳವಣಿಗೆಗೆ ಖಾಸಗಿ ಹೂಡಿಕೆ ಉತ್ತೇಜಿಸುತ್ತದೆ ಎಂದರು.

ಪ್ರತಿಪಕ್ಷಗಳ ಟೀಕೆಗಳಿಗೆ ತಿರುಗೇಟು ನೀಡಿದ ಸೂರ್ಯ, ಪಿಎಸ್​​ಯು ಬಿಕ್ಕಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿರುವುದನ್ನು ನೀವು ಕುಟುಂಬದ ಬೆಳ್ಳಿಯೆಂದು ಪರಿಗಣಿಸಿದಿರಾ. ದೇವಾಲಯದ ಚಿನ್ನ ಮಾರಾಟ ಮಾಡಲು ನೀವು ಉತ್ಸುಕರಾಗಿದ್ದು ಏಕೆ ಎಂದು ಪ್ರಶ್ನಿಸಿದ್ದರು.

ಕಾರ್ಪೊರೇಟ್ ತೆರಿಗೆ ದರ, ಸಾರ್ವಜನಿಕ ವಲಯದ ಬ್ಯಾಂಕ್​ಗಳ ಮರು ಬಂಡವಾಳ ಹೂಡಿಕೆ, ತೆರಿಗೆ ದರಗಳ ಕಡಿಮೆ ಮಾಡುವುದು ಸೇರಿದಂತೆ ಸರ್ಕಾರದ ದೀರ್ಘಕಾಲದ ಸುಧಾರಣೆಗಳ ಬಗ್ಗೆ ಪ್ರಸ್ತಾಪಿಸಿದರು.

ಈ ಸುಧಾರಣೆಗಳು ಹೆಚ್ಚಿನ ಸಂಖ್ಯೆಯ ಜನರನ್ನು ಬಡತನದಿಂದ ಮೇಲಕ್ಕೆತ್ತಲು ಸಹಾಯ ಮಾಡಿವೆ. ಎನ್‌ಡಿಎ ಸರ್ಕಾರವು ಅತಿ ಹೆಚ್ಚು ಜನರನ್ನು ಬಡತನದಿಂದ ಹೊರತಂದಿದೆ. ಎನ್​ಡಿಎ ಸರ್ಕಾರ ಗರಿಬಿ ಹಠಾವೋ ಅನ್ನು ಬರೀ ಘೋಷಣೆ ಮೂಲಕ ಮಾಡಿಲ್ಲ. ತನ್ನ ಕಾರ್ಯಗಳ ಮೂಲಕ ಮಾಡಿದೆ.

ಈ ಸುದ್ದಿಯನ್ನೂ ಓದಿ:ರಸ್ತೆ ಸುರಕ್ಷತೆ.. ಜೀವ ಅತ್ಯಂತ ಅಮೂಲ್ಯ, ಒಂದೊಂದು ಪ್ರಯತ್ನವೂ ಜೀವರಕ್ಷಕ!

ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ಭಾರತ ಯಶಸ್ವಿಯಾಗಿ ನಿರ್ವಹಿಸುತ್ತಿದೆ. ದೇಶಿಯವಾಗಿ ಅಭಿವೃದ್ಧಿಪಡಿಸಿದ ಲಸಿಕೆಯನ್ನು ನೆರೆಹೊರೆಯ ರಾಷ್ಟ್ರಗಳಿಗೆ ನೀಡಿದೆ. ಇನ್ನು ಹಲವು ರಾಷ್ಟ್ರಗಳು ಲಸಿಕೆ ನೀಡುವಂತೆ ಬೇಡಿಕೆ ಇರಿಸಿವೆ ಎಂದು ಹೇಳಿದರು.

ABOUT THE AUTHOR

...view details