ಕರ್ನಾಟಕ

karnataka

ETV Bharat / bharat

ಮಾಜಿ ಮಿಸ್ ಇಂಡಿಯಾ ಮಾನ್ಸಿ ಸೆಹಗಲ್ ಆಮ್ ಆದ್ಮಿಗೆ ಸೇರ್ಪಡೆ - 2019ರ 'ಮಿಸ್ ಇಂಡಿಯಾ ದೆಹಲಿ'

ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಕೊಡುಗೆ ಕಂಡು 2019ರ 'ಮಿಸ್ ಇಂಡಿಯಾ ದೆಹಲಿ' ಮಾನ್ಸಿ ಸೆಹಗಲ್ ಆಮ್ ಆದ್ಮಿ ಪಕ್ಷಕ್ಕೆ ಸೇರಿದ್ದಾರೆ.

Miss India Delhi 2019 Mansi Sehgal joins AAP
ಮಾಜಿ ಮಿಸ್ ಇಂಡಿಯಾ ಮಾನ್ಸಿ ಸೆಹಗಲ್ ಆಮ್ ಆದ್ಮಿಗೆ ಸೇರ್ಪಡೆ

By

Published : Mar 1, 2021, 4:00 PM IST

ನವದೆಹಲಿ: 2019ರ 'ಮಿಸ್ ಇಂಡಿಯಾ ದೆಹಲಿ' ಮಾನ್ಸಿ ಸೆಹಗಲ್ ಇಂದು ಆಮ್ ಆದ್ಮಿ ಪಕ್ಷಕ್ಕೆ (ಎಎಪಿ) ಸೇರ್ಪಡೆಯಾಗಿದ್ದಾರೆ.

ಪಕ್ಷದ ಮುಖಂಡ ರಾಘವ್ ಚಾಧಾ ಅವರ ಸಮ್ಮುಖದಲ್ಲಿ ಮಾನ್ಸಿ ಸೆಹಗಲ್ ಪಕ್ಷಕ್ಕೆ ಸೇರಿದ್ದಾರೆ. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಾಕಷ್ಟು ಸುಧಾರಣೆ ಮಾಡಿದ್ದು, ಇದರಿಂದ ಪ್ರೇರಿತಳಾಗಿ ಎಎಪಿಗೆ ಸೇರಿದ್ದೇನೆಂದು ಮಾನ್ಸಿ ಸೆಹಗಲ್ ಹೇಳಿದ್ದಾರೆ.

ಇದನ್ನೂ ಓದಿ: ದೇಶದಲ್ಲಿ ಇಂದಿನಿಂದ ಬದಲಾಗುತ್ತಿವೆ ಈ 5 ನಿಯಮಗಳು: ಮಾರ್ಚ್​​ ಮೊದಲ ದಿನದಿಂದಲೇ ಬಿಗ್ ಶಾಕ್!

ಮುಂದಿನ ಎರಡು ವರ್ಷಗಳಲ್ಲಿ ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ, ಪಂಜಾಬ್, ಹಿಮಾಚಲ ಪ್ರದೇಶ ಮತ್ತು ಗುಜರಾತ್‌ನಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಅಭ್ಯರ್ಥಿಗಳು ಸ್ಪರ್ಧಿಸುವುದಾಗಿ ಕೇಜ್ರಿವಾಲ್​ ಹೇಳಿದ್ದಾರೆ.

ಮಾನ್ಸಿ ಸೆಹಗಲ್ ಅವರು 2019 ರಲ್ಲಿ ನಡೆದ 'ಫೆಮಿನಾ ಮಿಸ್ ಇಂಡಿಯಾ ದೆಹಲಿ' ಸ್ಪರ್ಧೆಯ ವಿಜೇತರಾಗಿದ್ದಾರೆ.

ABOUT THE AUTHOR

...view details