ಕರ್ನಾಟಕ

karnataka

ETV Bharat / bharat

9 ವರ್ಷದ ಬಾಲಕಿ ಮೇಲೆ ಅತ್ಯಾಚಾರ, ಬ್ಲೇಡ್‌ನಿಂದ ಕತ್ತು ಸೀಳಿ ಕೊಲೆ.. 15 ವರ್ಷದ ಬಾಲಕನ ಸೆರೆ - ತಂದೆ ಥಳಿಸಿದ್ದ ಕೋಪ

ಒಂಬತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮತ್ತು ಕೊಲೆ ಮಾಡಿದ ಆರೋಪದ ಮೇಲೆ 15 ವರ್ಷದ ಬಾಲಕನನ್ನು ಮಹಾರಾಷ್ಟ್ರದ ಕಲ್ಯಾಣ್​ ಪೊಲೀಸರು ಬಂಧಿಸಿದ್ದಾರೆ.

minor-boy-raped-and-killed-9-year-old-minor-girl-in-kalyan
9 ವರ್ಷದ ಬಾಲಕ ಮೇಲೆ ಅತ್ಯಾಚಾರ, ಬ್ಲೇಡ್‌ನಿಂದ ಕತ್ತು ಸೀಳಿ ಕೊಲೆ... 15 ವರ್ಷದ ಬಾಲಕನ ಸೆರೆ

By

Published : Dec 1, 2022, 4:07 PM IST

Updated : Dec 1, 2022, 4:15 PM IST

ಥಾಣೆ (ಮಹಾರಾಷ್ಟ್ರ): ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಕಲ್ಯಾಣದಲ್ಲಿ ಭೀಕರ ಕೃತ್ಯ ನಡೆದಿದೆ. 15 ವರ್ಷದ ಬಾಲಕನೊಬ್ಬ ಒಂಬತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ, ನಂತರ ಆಕೆಯ ಕತ್ತು ಸೀಳಿ ಕೊಂದಿರುವ ಆಘಾತಕಾರಿ ಘಟನೆ ನಡೆದಿದೆ. ಈ ಕೃತ್ಯ ಬೆಳಕಿಗೆ ಬಂದ ಒಂದೇ ಗಂಟೆಯೊಳಗೆ ಆರೋಪಿ ಬಾಲಕನನ್ನು ಗುರುತಿಸಿದ್ದಾರೆ.

ಕಲ್ಯಾಣ್ ಪಶ್ಚಿಮ ಪ್ರದೇಶದ ಎಸ್‌ಟಿ ಅಗರ್‌ನ ಪಕ್ಕದ ಹೈಪ್ರೊಫೈಲ್ ಸೊಸೈಟಿಯ ಆವರಣದಲ್ಲಿ ಇಂದು ಬೆಳಗ್ಗೆ ಒಂಬತ್ತು ವರ್ಷದ ಬಾಲಕಿಯ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರ ತಂಡ ಸ್ಥಳಕ್ಕಾಗಮಿಸಿ ಪಂಚನಾಮೆ ನಡೆಸಿ ತನಿಖೆ ಆರಂಭಿಸಿದೆ.

ಇದನ್ನೂ ಓದಿ:ಸಂಬಂಧಿಕರ ಮೇಲಿನ ಸೇಡು ತೀರಿಸಲು ಮಗಳ ಜೀವ ಬಲಿ ಪಡೆದ ಪಾಪಿ ತಂದೆ!

ಇದೇ ವೇಳೆ, ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಗಳು ಮತ್ತು ತಮ್ಮ ರಹಸ್ಯ ಮಾಹಿತಿಯ ಆಧಾರದ ಮೇಲೆ ಪೊಲೀಸರು ಒಂದು ಗಂಟೆಯೊಳಗೆ ಅಪ್ರಾಪ್ತ ಆರೋಪಿಯನ್ನು ಗುರುತಿಸಿದ್ದಾರೆ. ನಂತರ ಹುಡುಕಾಟ ಆತನನ್ನು ಥಾಣೆಯಲ್ಲಿ ಬಂಧಿಸಿ ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ.

ತಂದೆ ಥಳಿಸಿದ್ದ ಕೋಪ: ಪೊಲೀಸ್​ ವಿಚಾರಣೆಯಲ್ಲಿ ಆರೋಪಿ ಬಾಲಕ ಆಘಾತಕಾರಿ ಅಂಶ ಬಾಯ್ಬಿಟ್ಟಿದ್ದಾನೆ. ಕೆಲ ದಿನಗಳ ಹಿಂದೆ ಬಾಲಕಿಯ ತಂದೆ ನನಗೆ ಥಳಿಸಿದ್ದರು ಎಂದು ಪೊಲೀಸರ ವಿಚಾರಣೆ ವೇಳೆ ಅಪ್ರಾಪ್ತ ಆರೋಪಿ ಹೇಳಿದ್ದಾನೆ. ಹೀಗಾಗಿಯೇ ಮಗಳಿಗೆ ಚಿತ್ರಹಿಂಸೆ ನೀಡಿ ಬ್ಲೇಡ್‌ನಿಂದ ಕತ್ತು ಸೀಳಿ ಕೊಲೆ ಮಾಡಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಡಿಸಿಪಿ ಸಚಿನ್ ಗುಂಜಾಲ್ ತಿಳಿಸಿದ್ದಾರೆ.

ಸದ್ಯ ಈ ಬಗ್ಗೆ ಮಹಾತ್ಮ ಫುಲೆ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆ, ಚಿತ್ರಹಿಂಸೆ ಮತ್ತು ಕೊಲೆ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆಯಲ್ಲಿ ಪೊಲೀಸರು ಕೈಗೊಂಡಿದ್ದಾರೆ.

ಇದನ್ನೂ ಓದಿ:ವ್ಯಕ್ತಿಯಿಂದ ತಾಯಿಗೆ ನಿಂದನೆ: ಫೇಕ್​ ಐಡಿಗಳಿಂದ ಆತನ ಪುತ್ರಿಯರ ಮಾನಹಾನಿ ಮಾಡಿ ಬಾಲಕನ 'ಸೇಡು'!

Last Updated : Dec 1, 2022, 4:15 PM IST

ABOUT THE AUTHOR

...view details