ಮುಂಬೈ (ಮಹಾರಾಷ್ಟ್ರ):ಭಾರತವನ್ನು 150 ವರ್ಷಗಳಿಗೂ ಹೆಚ್ಚು ಕಾಲ ಬ್ರಿಟಿಷರು ಆಳಿದರು. ಮುಂಬೈ ಗೇಟ್‌ವೇ ಆಫ್ ಇಂಡಿಯಾವನ್ನು ಬ್ರಿಟಿಷರ ಆಳ್ವಿಕೆಯಲ್ಲಿ ನಿರ್ಮಿಸಲಾಯಿತು. ಈ ಕಟ್ಟಡವು ನೂರು ವರ್ಷಗಳಿಗಿಂತಲೂ ಹಳೆಯದು. ಇತಿಹಾಸದ ಹಿನ್ನೆಲೆಯಲ್ಲಿ ಹೊಂದಿರುವ ಈ ಕಟ್ಟಡ ಇದೀಗ ಬಿರುಕು ಬಿಟ್ಟಿರುವ ವಿಚಾರ ಬೆಳಕಿಗೆ ಬಂದಿದೆ. ಈ ಸಂಬಂಧ ರಾಜ್ಯ ಸರ್ಕಾರಕ್ಕೆ ಪುರಾತತ್ವ ಇಲಾಖೆ ವರದಿ ಕಳುಹಿಸಿದೆ. ಈ ನಡುವೆ ಹರ್ದೀಪ್ ಪುರಿ ಅವರು, ''ಈ ಐತಿಹಾಸಿಕ ಕಟ್ಟಡವನ್ನು ದುರಸ್ತಿ ಮಾಡಿ ಮತ್ತು ಸಂರಕ್ಷಿಸಿ ಅದನ್ನು ಸರ್ಕಾರ ನೋಡಿಕೊಳ್ಳುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ.
'ಗೇಟ್‌ವೇ ಆಫ್ ಇಂಡಿಯಾ'ದಲ್ಲಿ ಬಿರುಕು:ಬ್ರಿಟಿಷರು ವ್ಯಾಪಾರಕ್ಕಾಗಿ ಭಾರತಕ್ಕೆ ಬಂದ ನಂತರ ಅವರು ಭಾರತವನ್ನು ಆಳಿದರು. ಬ್ರಿಟಿಷರು ಬಂದ ದಾರಿಯಲ್ಲಿಯೇ ಭಾರತಕ್ಕೆ ಬಂದ ಇಂಗ್ಲೆಂಡಿನ 5ನೇ ಕಿಂಗ್ ಜಾರ್ಜ್ ಅವರನ್ನು ಸ್ವಾಗತಿಸಲು 1911ರಲ್ಲಿ, ಗೇಟ್‌ವೇ ಆಫ್ ಇಂಡಿಯಾ ಕಟ್ಟಡ ಕಟ್ಟಲು ಪ್ರಾರಂಭಿಸಲಾಯಿತು. ಈ ಕಟ್ಟಡದ ನಿರ್ಮಾಣವು 1924ರಲ್ಲಿ ಪೂರ್ಣಗೊಂಡಿತು. ಅಂದಿನಿಂದ, ಕಟ್ಟಡವು ಸಮುದ್ರದ ಅಲೆಗಳು, ಮಳೆ, ಬಿಸಿಲು ಮತ್ತು ಚಳಿ ಸಹಿಸಿಕೊಂಡಿದೆ.
ಸರ್ಕಾರಕ್ಕೆ ವರದಿ ಸಲ್ಲಿಕೆ:ಐತಿಹಾಸಿಕ ಗೇಟ್‌ವೇ ಆಫ್ ಇಂಡಿಯಾ ಇತ್ತೀಚೆಗೆ ರಚನಾತ್ಮಕವಾದ ಪರಿಶೋಧನೆಗೆ ಒಳಪಡಿಸಲಾಯಿತು. ಕಟ್ಟಡದಲ್ಲಿ ಹಲವಾರು ಬಿರುಕುಗಳು, ಈ ಬಿರುಕಿನ ನಡುವೆ ಸಸ್ಯಗಳು ಬೆಳೆದಿವೆ, ಗುಮ್ಮಟದ ಜಲನಿರೋಧಕ ಮತ್ತು ಸಿಮೆಂಟ್ನ ಕಾಂಕ್ರೀಟ್ ಕೂಡಾ ಹಾನಿಯಾಗಿರುವುದನ್ನು ಪರಿಶೀಲನೆಯಿಂದ ಕಂಡು ಹಿಡಿದಿದೆ. ಇತ್ತೀಚೆಗೆ ಬೀಸಿದ ಚಂಡಮಾರುತದ ವೇಳೆ ಕಟ್ಟಡ ಪಕ್ಕದ ತಡೆಗೋಡೆ ಕುಸಿದಿದ್ದು, ತಾತ್ಕಾಲಿಕವಾಗಿ ದುರಸ್ತಿ ಮಾಡಲಾಗಿದೆ. ಗೇಟ್ ವೇ ಆಫ್ ಇಂಡಿಯಾ ಬಿರುಕು ಬಿಟ್ಟಿರುವ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿದೆ.