ಅಹಮದ್ನಗರ (ಮಹಾರಾಷ್ಟ್ರ): ನಮ್ಮೂರು ಪೋಪ್ಸೊಂಡಿ ಗ್ರಾಮ. ಇಲ್ಲಿ ಸಂಚರಿಸಲು ರಸ್ತೆಯಿಲ್ಲ, ನೀರಿನ ವ್ಯವಸ್ಥೆಯೂ ಇಲ್ಲ, ಆನ್ಲೈನ್ ಪಾಠ ಕೇಳಲು ನೆಟ್ವರ್ಕ್ ಸೇರಿದಂತೆ ಕನಿಷ್ಠ ಮೂಲ ಸೌಕರ್ಯವೂ ಇಲ್ಲ. ದಯವಿಟ್ಟು ಇವೆಲ್ಲವನ್ನೂ ಒದಗಿಸಿ ಕೊಡಿ ಎಂದು ಮನವಿ ಮಾಡಿ 13 ವರ್ಷದ ಬಾಲಕ ತುಷಾರ್ ಮುಥೆ ಎಂಬಾತ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾನೆ.
ನಮ್ಮೂರಿಗೆ ಕನಿಷ್ಠ ಮೂಲಸೌಕರ್ಯ ಒದಗಿಸಿ: ಪಿಎಂಗೆ ಪತ್ರ ಬರೆದ 13ರ ಪೋರ! ಪೋಪ್ಸೊಂಡಿ ಗ್ರಾಮದ ತುಷಾರ್ ಮುಥೆ ಬುಡಕಟ್ಟು ಅಭಿವೃದ್ಧಿ ಇಲಾಖೆಯ ಬೆಂಬಲದೊಂದಿಗೆ ವೀರಗಾಂವ್ನ ಧರ್ಮವೀರ್ ಆನಂದ್ ದಿಘೆ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಏಳನೇ ತರಗತಿ ಓದುತ್ತಿದ್ದಾನೆ.
ಕೋವಿಡ್ ಬರುವುದಕ್ಕೂ ಮೊದಲು ಎಲ್ಲರೂ ಶಾಲೆಗೆ ಹೋಗಿ ಕಲಿಯುತ್ತಿದ್ದರು. ಆದರೆ, ಕೊರೊನಾ ಬಂದ ಮೇಲೆ ಮಕ್ಕಳು ಶಾಲೆಗೆ ಹೋಗಲು ಸಾಧ್ಯವಾಗುತ್ತಿಲ್ಲ. ಸಮರ್ಪಕ ರಸ್ತೆಯಿಲ್ಲದ ಕಾರಣ, ಮಳೆಗಾಲದಲ್ಲಿ ಈ ಭಾಗಕ್ಕೆ ಒಂದೂ ಬಸ್ ಬರಲ್ಲ. ಹೇಗಾದರೂ ಮಾಡಿ ಲ್ಯಾಪ್ಟಾಪ್, ಸ್ಮಾರ್ಟ್ಫೋನ್ ಹೊಂದಿಸಿಕೊಂಡು ಆನ್ಲೈನ್ ಕ್ಲಾಸ್ ಕೇಳುವುದಕ್ಕೂ ಈ ಪ್ರದೇಶದಲ್ಲಿ ನೆಟ್ವರ್ಕ್ ಇಲ್ಲ ಎಂದು ಬಾಲಕ ತಮ್ಮೂರಿನ ಸಮಸ್ಯೆಯನ್ನು ಎಳೆಎಳೆಯಾಗಿ ಪ್ರಧಾನಿಗೆ ವಿವರಿಸಿದ್ದಾನೆ.
ಅಲ್ಲದೆ ವಿದ್ಯಾರ್ಥಿ ತುಷಾರ್ ತಮ್ಮ ಗ್ರಾಮಕ್ಕೆ ಶೈಕ್ಷಣಿಕ, ವೈದ್ಯಕೀಯ ಹಾಗೂ ಇತರೆ ಮೂಲಸೌಕರ್ಯಗಳನ್ನು ಒದಗಿಸುವಂತೆ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾನೆ.
ಇದನ್ನೂ ಓದಿ:ಗಲ್ವಾನ್ ಸಂಘರ್ಷದಲ್ಲಿ ಹುತಾತ್ಮರಾದ ಕರ್ನಲ್ ಸಂತೋಷ್ ಬಾಬು ಪ್ರತಿಮೆ ಅನಾವರಣ