ಕರ್ನಾಟಕ

karnataka

ETV Bharat / bharat

ಮುಂಬೈನಲ್ಲಿ ದಡಾರ ಕಾಯಿಲೆ ಉಲ್ಬಣ: ಇದುವರೆಗೆ 3,831 ಶಂಕಿತ ರೋಗಿಗಳು ಪತ್ತೆ, 13 ಮಂದಿ ಸಾವು

ಮುಂಬೈನಲ್ಲಿ ಇದುವರೆಗೆ ಒಟ್ಟು 260 ರೋಗಿಗಳಲ್ಲಿ ದಡಾರ ಕಾಯಿಲೆ ದೃಢಪಟ್ಟಿದೆ ಮತ್ತು 3,831 ಶಂಕಿತ ರೋಗಿಗಳು ಪತ್ತೆಯಾಗಿದ್ದು, ಒಟ್ಟು 13 ಮಂದಿ ಸಾವನ್ನಪ್ಪಿದ್ದಾರೆ.

By

Published : Nov 25, 2022, 10:48 PM IST

measles-outbreak-in-mumbai-3-patients-on-ventilator
ಮುಂಬೈನಲ್ಲಿ ದಡಾರ ಕಾಯಿಲೆ ಉಲ್ಬಣ: ಇದುವೆರೆಗೆ 3,831 ಶಂಕಿತ ರೋಗಿಗಳು ಪತ್ತೆ, 13 ಮಂದಿ ಸಾವು

ಮುಂಬೈ (ಮಹಾರಾಷ್ಟ್ರ): ಮಹಾರಾಷ್ಟ್ರದ ರಾಜಧಾನಿ ಮುಂಬೈನಲ್ಲಿ ಕಳೆದ ಎರಡು ತಿಂಗಳಿಂದ ದಡಾರ ಕಾಯಿಲೆಯು ವ್ಯಾಪಕವಾಗಿ ಹೆಚ್ಚಾಗುತ್ತಿದೆ. ಇಲ್ಲಿಯವರೆಗೆ ಒಟ್ಟು 260 ರೋಗಿಗಳಲ್ಲಿ ದಡಾರ ಕಾಯಿಲೆ ದೃಢಪಟ್ಟಿದೆ ಮತ್ತು 3,831 ಶಂಕಿತ ರೋಗಿಗಳು ಪತ್ತೆಯಾಗಿದ್ದಾರೆ.

ಮುಂಬೈನಲ್ಲಿ ದಡಾರ ಕಾಯಿಲೆಯಿಂದ ಇದುವರೆಗೆ ಒಟ್ಟು 13 ಮಂದಿ ಸಾವನ್ನಪ್ಪಿದ್ದಾರೆ. ಇದರಲ್ಲಿ 10 ಜನ ಮುಂಬೈನವರು ಆಗಿದ್ದು, ಉಳಿದ ಮೂವರು ಮುಂಬೈ ಹೊರಗಿವರಾಗಿದ್ದಾರೆ. ಸದ್ಯ 19 ರೋಗಿಗಳು ಆಕ್ಸಿಜನ್​ ಮತ್ತು ಐವರು ರೋಗಿಗಳು ಐಸಿಯುನಲ್ಲಿ ಮತ್ತು ಮೂವರು ರೋಗಿಗಳು ವೆಂಟಿಲೇಟರ್‌ನಲ್ಲಿದ್ದಾರೆ ಎಂದು ಪಾಲಿಕೆಯ ಆರೋಗ್ಯ ವಿಭಾಗವು ಮಾಹಿತಿ ನೀಡಿದೆ.

ಮುಂಬೈನಲ್ಲಿ 48 ಲಕ್ಷದ 73 ಸಾವಿರದ 733 ಮನೆಗಳನ್ನು ಸಮೀಕ್ಷೆ ಮಾಡಲಾಗಿದೆ. ಜ್ವರ ಮತ್ತು ಕೆಂಪು ದದ್ದು ಹೊಂದಿರುವ 3,831 ಶಂಕಿತ ರೋಗಿಗಳು ಪತ್ತೆಯಾಗಿದ್ದಾರೆ. ಇದೇ ವೇಳೆ ಹೆಚ್ಚುವರಿ ಸಮೀಕ್ಷೆಯಲ್ಲಿ ಇದುವರೆಗೆ 20 ಸಾವಿರದ 744 ಮಕ್ಕಳು ಮತ್ತು ಗರ್ಭಿಣಿಯರಿಗೆ ದಡಾರ ಲಸಿಕೆ ಹಾಕಲಾಗಿದೆ ಎಂದು ಆರೋಗ್ಯ ವಿಭಾಗವು ತಿಳಿಸಿದೆ.

ಇದನ್ನೂ ಓದಿ:ಬಂದೂಕು ಹಿಡಿದು ಫೋಟೋಗೆ ಫೋಸ್ ​: ಬಾಲಕನ ವಿರುದ್ಧ ಎಫ್​ಐಆರ್​ ದಾಖಲು

ABOUT THE AUTHOR

...view details