ಯೋಗಿನಿ ಏಕಾದಶಿಯಂದು ವಿಷ್ಣುವನ್ನು ಪೂಜಿಸಲಾಗುತ್ತದೆ. ಈ ಬಾರಿ ಯೋಗಿನಿ ಏಕಾದಶಿಯ ಜೂನ್ 13ರಂದು ಬಂದಿದೆ. ಈ ಯೋಗಿನಿ ಏಕಾದಶಿಯ ವಿಶೇಷ ಎಂದರೆ ಹರಿಹರರ ಪೂಜೆ. ಸಾಮಾನ್ಯವಾಗಿ ಏಕಾದಶಿ ವಿಷ್ಣುವಿಗೆ ಸಮರ್ಪಣೆ ಮಾಡಲಾಗುತ್ತದೆ. ಆದರೆ, ಈ ಯೋಗಿನಿ ಏಕಾದಶಿಯಂದು ವಿಷ್ಣುವಿನ ಜೊತೆಗೆ ಶಿವನ ಆರಾಧನೆಯನ್ನು ಮಾಡಲಾಗುವುದು. ಯೋಗಿನಿ ಏಕಾದಶಿಯಂದು ಸಾಮಾನ್ಯವಾಗಿ ಉಪವಾಸ ವ್ರತಾಚಾರಣೆಯನ್ನು ಮಾಡಲಾಗುತ್ತದೆ. ಈ ದಿನ ಉಪವಾಸದಿಂದ ದೇವರ ಆರಾಧನೆ ಮಾಡುವುದರಿಂದ ಒಳಿತಾಗಲಿದೆ ಎಂಬ ನಂಬಿಕೆ ಇದೆ.
ಇನ್ನು, ಈ ಯೋಗಿನಿ ಏಕಾದಶಿಯಲ್ಲಿ ಶಿವನನ್ನು ಆರಾಧಿಸುವ ಹಿನ್ನೆಲೆ ರುದ್ರಾಭಿಷೇಕ ಮಾಡುವುದರಿಂದ ಶಿವ ಮತ್ತು ವಿಷ್ಣುವಿನ ಇಬ್ಬರ ಕೃಪೆ ಲಭಿಸಲಿದೆ ಎಂಬ ನಂಬಿಕೆ ಇದೆ. ಈ ಏಕಾದಶಿ ದಿನಾಂಕದ ಕುರಿತು ಹಲವರಿಗೆ ಗೊಂದಲ ಇದೆ. ಆದರೆ, ಈ ಏಕಾದಶಿ ಮಂಗಳವಾರ ಜೂನ್ 13ರಂದು ಬೆಳಗ್ಗೆ 9.28ಕ್ಕೆ ಪ್ರಾರಂಭವಾಗಿ ಬುಧವಾರ ಅಂದರೆ, ಜೂನ್ 14ರಂದು ಬೆಳಗ್ಗೆ 8.48ಕ್ಕೆ ಕೊನೆಯಾಗುತ್ತದೆ.
ಇನ್ನು ಈ ಯೋಗಿನಿ ಏಕಾದಶಿಗೆ ರುದ್ರಾಭಿಷೇಕ ಸೇರಿದಂತೆ ವ್ರತದ ಪೂಜೆಗೆ ಮೂರು ಮುಹೂರ್ತಗಳನ್ನು ನೀಡಲಾಗಿದೆ. ಅದರ ಅನುಸಾರ ಬೆಳಗ್ಗೆ 5:23ರಿಂದ ಬೆಳಗ್ಗೆ 07:07ರವರೆಗೆ ಒಂದು ಮುಹೂರ್ತ ಇದೆ. ಉಳಿದೆರಡು ಮುಹೂರ್ತಗಳು ಬೆಳಗ್ಗೆ 07:07ರಿಂದ ಶುರುವಾಗಲಿದೆ. ಕಡೆಯ ಮುಹೂರ್ತ 10:37 ರಿಂದ ಮಧ್ಯಾಹ್ನ 12:21ರ ವರೆಗೆ ಪ್ರಾರಂಭವಾಗುತ್ತದೆ. ಈ ಮುಹೂರ್ತವು ಪೂಜೆಗೆ ಉತ್ತಮವಾಗಿದೆ ಎಂದು ನಂಬಲಾಗಿದೆ.
ಯೋಗಿನಿ ಏಕಾದಶಿಯಂದು ಉಪವಾಸ ಮಾಡುವುದರಿಂದ ಏನು ಲಾಭ..
ಯೋಗಿನಿ ಏಕಾದಶಿಯಂದು ಉಪವಾಸ ಮಾಡುವುದರಿಂದ ಇದು 80 ಸಾವಿರ ಬ್ರಾಹ್ಮಣರಿಗೆ ಅನ್ನದಾನ ಮಾಡಿದಷ್ಟೇ ಪುಣ್ಯ ಪ್ರಾಪ್ತಿಯಾಗುತ್ತದೆ ಎಮದು ನಂಬಲಾಗಿದೆ