ಥಾಣೆ (ಮಹಾರಾಷ್ಟ್ರ): ಮಗಳೊಂದಿಗೆ ಸಂಬಂಧ ಮುಂದುವರಿಸಬೇಡ ಎಂದು 18 ವರ್ಷದ ಯುವಕನಿಗೆ ಯುವತಿ ಕುಟುಂಬಸ್ಥರು ಹಿಗ್ಗಾಮುಗ್ಗ ಥಳಿಸಿ ಸಿಗರೇಟ್ನಿಂದ ಸುಟ್ಟು ಹಿಂಸೆ ನೀಡಿದ್ದಾರೆ. ಬಳಿಕ ಬೆಟ್ಟದ ಮೇಲಿಂದ ತಳ್ಳಿರುವ ಅಮಾನವೀಯ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಯುವತಿಯೊಂದಿಗೆ ಸಂಬಂಧ... ಯುವಕನಿಗೆ ಥಳಿಸಿ ಬೆಟ್ಟದ ಮೇಲಿಂದ ತಳ್ಳಿದ ಕುಟುಂಬಸ್ಥರು - ಯುವಕನಿಗೆ ಥಳಿಸಿ ಬೆಟ್ಟದ ಮೇಲಿಂದ ತಳ್ಳಿದ ಕುಟುಂಬಸ್ಥರು
ಮಗಳೊಂದಿಗೆ ಸಂಬಂಧ ಮುಂದುವರಿಸಬೇಡ ಎಂದು ಯುವಕನಿಗೆ ಯುವತಿ ಕುಟುಂಬಸ್ಥರು ಅಮಾನುಷವಾಗಿ ಥಳಿಸಿ ಬೆಟ್ಟದ ಮೇಲಿಂದ ನೂಕಿರುವ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ನಡೆದಿದೆ.
ಅದೃಷ್ಟವಶಾತ್ ಯುವಕ ಓವೈಸಿ ಅಬ್ದುಲ್ ರಹೀಂ ಖಾನ್ ಪ್ರಾಣಾಪಾಯದಿಂದ ಪಾರಾಗಿದ್ದು, ತನ್ನ ಸ್ನೇಹಿತರ ನೆರವಿನಿಂದ ಮುಂಬ್ರಾ ಠಾಣೆಗೆ ದೂರು ನೀಡಿದ್ದಾನೆ. ಅಪಹರಣ ಮತ್ತು ಚಿತ್ರಹಿಂಸೆ ನೀಡಿದ ಆರೋಪದ ಮೇಲೆ ಪೊಲೀಸರು 30 ಜನರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಆದರೆ ಈವರೆಗೂ ಯಾರನ್ನೂ ಬಂಧಿಸಿಲ್ಲ. ಈ ಪ್ರಕರಣದಲ್ಲಿ ಯುವತಿ ತಂದೆ ಪ್ರಮುಖ ಆರೋಪಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಡ್ ಮೂಲಕ ಮಾರಣಾಂತಿಕವಾಗಿ ಥಳಿಸಿ, ಜನವರಿ 23ರಂದು ಬೆಟ್ಟದ ಮೇಲಿಂದ ತಳ್ಳಿರುವುದಾಗಿ ಓವೈಸ್ ಅಬ್ದುಲ್ ರಹೀಂ ಖಾನ್ ದೂರಿನಲ್ಲಿ ಉಲ್ಲೇಖಿಸಿದ್ದಾನೆ. ತೀವ್ರವಾಗಿ ಗಾಯಗೊಂಡಿರುವ ಯುವಕನಿಗೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.