ಕರ್ನಾಟಕ

karnataka

500 ರೂಪಾಯಿಗೆ ಜಗಳ.. ಹಣಕ್ಕಾಗಿ ಬಿತ್ತು ವ್ಯಕ್ತಿಯ ಹೆಣ

25 ವರ್ಷದ ಯುವಕನನ್ನು ಕೊಲೆಗೈದ ಸಹೋದರರು- 500 ರೂಪಾಯಿ ಪಾವತಿ ವಿಚಾರದಲ್ಲಿ ಗಲಾಟೆ- ಮಹಾರಾಷ್ಟ್ರ ಮುಂಬೈನ ಬಾಂದ್ರಾದಲ್ಲಿ ಘಟನೆ

By

Published : Feb 11, 2023, 9:07 AM IST

Published : Feb 11, 2023, 9:07 AM IST

Updated : Feb 11, 2023, 9:26 AM IST

Mumbai
ಯುವಕನನ್ನು ಕೊಲೆಗೈದ ಸಹೋದರರು

ಮುಂಬೈ(ಮಹಾರಾಷ್ಟ್ರ):ದೇಶದಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಕೊಲೆಗಳು ನಡೆಯುತ್ತಿದ್ದು, ದಿನದಿಂದ ದಿನಕ್ಕೆ ಇಂತಹ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಮಹಾರಾಷ್ಟ್ರ ಮುಂಬೈನ ಬಾಂದ್ರಾದ ಉಪನಗರದಲ್ಲಿ 500 ರೂಪಾಯಿ ಪಾವತಿ ವಿಚಾರದಲ್ಲಿ 25 ವರ್ಷದ ಯುವಕನನ್ನು ಇಬ್ಬರು ಸಹೋದರರು ಚಾಕುವಿನಿಂದ ಇರಿದು ಕೊಲೆಗೈದಿದ್ದಾರೆ. ಹಾನಿಗೊಳಗಾದ ಮೊಬೈಲ್​ ರಿಪೇರಿ ಮಾಡಲು 500 ರೂಪಾಯಿ ಕೇಳಿದ್ದೇ ಸಾವಿಗೆ ಕಾರಣವಾಗಿದೆ.

ಪ್ರಕರಣದ ಹಿನ್ನೆಲೆ: ನಜೀಮ್​ ಇಫ್ತಿಕರ್​​ ಖಾನ್​ ಮತ್ತು ಇಬ್ಬರು ಆರೋಪಿ ಸಹೋದರರು ಬಾಂದ್ರಾದ ಗರೀಬ್​ ನಗರದಲ್ಲಿ ವಾಸಿಸುತ್ತಿದ್ದರು. ಆರೋಪಿಗಳಲ್ಲಿ ಒಬ್ಬ ನಜೀಮ್​ ಖಾನ್​ ಮೊಬೈಲ್​ ಅನ್ನು ಹಾನಿಗೊಳಿಸಿದ್ದ. ಅದನ್ನು ಸರಿಪಡಿಸಲು ಅವನಲ್ಲಿಯೇ ಖಾನ್​ 1,000 ರೂಪಾಯಿ ನೀಡುವಂತೆ ಕೇಳಿಕೊಂಡಿದ್ದಾರೆ. ಇದಕ್ಕೆ ಒಪ್ಪಿದ ಅವರಿಬ್ಬರು ನಜೀಮ್​ ಖಾನ್​ ಪತ್ನಿಗೆ 500 ರೂಪಾಯಿಯನ್ನು ಮೊದಲು ಪಾವತಿಸಿದ್ದಾರೆ. ಇನ್ನುಳಿದ 500 ರೂಪಾಯಿಯನ್ನು ಶುಕ್ರವಾರ ಮಧ್ಯಾಹ್ನ 12 ಗಂಟೆಯ ಒಳಗೆ ನೀಡುವುದಾಗಿ ಭರವಸೆ ನೀಡಿದ್ದರು. ಇದಕ್ಕೆ ಒಪ್ಪದ ಖಾನ್​ ಈ ಕೂಡಲೇ ಪೂರ್ತಿ ಹಣವನ್ನು ಪಾವತಿಸುವಂತೆ ಒತ್ತಾಯಿಸಿದ್ದಾರೆ.

ಬಳಿಕ ಮೂವರ ನಡುವೆಯು ಮಾತಿನ ಚಕಮಕಿ ನಡೆದಿದೆ. ಕೋಪಗೊಂಡ ಆರೋಪಿಗಳಿಬ್ಬರು ಚಾಕುವನ್ನು ಹೊತರೆಗೆದು ಖಾನ್​ ಎದೆಗೆ ಇರಿದಿದ್ದಾರೆ. ಘಟನೆಯು ಗುರುವಾರ ರಾತ್ರಿ ಬಾಂದ್ರಾ ರೈಲ್ವೇ ನಿಲ್ದಾಣದ ಫುಟ್​ ಓವರ್​ ಸೇತುವೆಯ ಬಳಿ ನಡೆದಿದೆ. ಬಳಿಕ ಗಾಯಗೊಂಡ ನಜೀಮ್​ ಇಫ್ತಿಕರ್​ ಖಾನ್​ ಅನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ವೈದ್ಯರು ಅದಾಗಲೇ ಖಾನ್​ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೀಗ ನಜೀಮ್​ ಅಫ್ತಿಕರ್​ ಖಾನ್​ ಕೊಲೆ ಮಾಡಿದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: ಮಹಿಳೆ ಕೊಲೆ ಯತ್ನ ಪ್ರಕರಣ- ಆರೋಪಿಗಳಿಗೆ 2 ವರ್ಷ ಕಾರಾಗೃಹ, 22 ಸಾವಿರ ರೂ. ದಂಡ

ನಡು ರಸ್ತೆಯಲ್ಲೇ ಹೆಂಡತಿಯನ್ನು ಕೊಂದಿದ್ದ ಪತಿ: ಇತ್ತೀಚೆಗಷ್ಟೇ ತೆಲಂಗಾಣದ ಹೈದರಾಬಾದ್​ನಲ್ಲಿ ಹೃದಯವಿದ್ರಾವಕ ಘಟನೆಯೊಂದು ವರದಿಯಾಗಿತ್ತು. ಕಿರುಕುಳ ತಾಳಲಾರದೇ ಮಕ್ಕಳೊಂದಿಗೆ ದೂರವಾಗಿದ್ದ ಹೆಂಡತಿಯನ್ನು ಪತಿ ನಡು ರಸ್ತೆಯಲ್ಲೇ ಕಟ್ಟಿಗೆಯಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಹೈದರಾಬಾದ್​ನ ಲಾಂಗರ್​ಹೌಸ್​ನಲ್ಲಿ ಫೆಬ್ರವರಿ 3 ರಂದು ನಡೆದಿತ್ತು.

ಏಳು ವರ್ಷಗಳ ಹಿಂದೆ ಯೂಸುಫ್​ ಜೊತೆ ಕರೀನಾ ಬೇಗಂ ವಿವಾಹವಾಗಿತ್ತು. ಮದುವೆ ನಂತರ ಅನ್ಯೋನ್ಯವಾಗಿದ್ದ ದಂಪತಿಗೆ ಮೂವರು ಮಕ್ಕಳಿದ್ದಾರೆ. ಕೆಲ ಸಮಯದಿಂದ ಪತಿ ಯೂಸುಫ್​ ಪತ್ನಿಯೊಂದಿಗೆ ವಿನಾಕಾರಣ ಜಗಳವಾಡುತ್ತಿದ್ದರಂತೆ. ಪ್ರತಿ ದಿನವೂ ಕಿರುಕುಳ ನೀಡುತ್ತಿದ್ದ ಕಾರಣ ಬೇಸತ್ತ ಪತ್ನಿ ತನ್ನ ಮಕ್ಕಳೊಂದಿಗೆ ತಾಯಿ ಮನೆ ಸೇರಿದ್ದರು. ಇದರಿಂದ ಕೋಪಗೊಂಡ ಪತಿ ತನ್ನ ಹೆಂಡತಿ ಕರೀನಾರನ್ನು ಹಿಂಬಾಲಿಸಿ ಚಲನವಲನಗಳನ್ನು ಗಮನಿಸುತ್ತಿದ್ದ. ಫೆಬ್ರವರಿ 3 ಶುಕ್ರವಾರದಂದು ಯೂಸುಫ್​, ಕರೀನಾರನ್ನು ಅಡ್ಡಗಟ್ಟಿ ಹೋಗದಂತೆ ತಡೆದಿದ್ದರು. ಆದರೆ ಇದಕ್ಕೆ ಕ್ಯಾರೆ ಎನ್ನದ ಪತ್ನಿ ಮುಂದೆ ನಡೆದುಕೊಂಡು ಹೋಗುವಾಗ ಹಿಂದಿನಿಂದ ಅವರ ತಲೆಗೆ ಕಟ್ಟಿಗೆಯಿಂದ ಬಲವಾಗಿ ಹೊಡೆದ ಪರಿಣಾಮ ಸಾವನ್ನಪ್ಪಿದ್ದರು.

ಇದನ್ನೂ ಓದಿ:50 ಲೀ.ಟ್ಯಾಂಕ್ ಸಾಮರ್ಥ್ಯದ ಕಾರಿಗೆ 57 ಲೀ. ಪೆಟ್ರೋಲ್ ಬಿಲ್ ನೀಡಿ ವಂಚನೆ ಆರೋಪ: ಪೆಟ್ರೋಲ್ ಬಂಕ್​​ ಸೀಲ್

Last Updated : Feb 11, 2023, 9:26 AM IST

ABOUT THE AUTHOR

...view details