ಕರ್ನಾಟಕ

karnataka

ETV Bharat / bharat

ಫೋನ್​​ನಲ್ಲಿ ಬ್ಯುಸಿ, ದೆಹಲಿ ಮೆಟ್ರೋ ಟ್ರ್ಯಾಕ್​ ಮೇಲೆ ಬಿದ್ದ ವ್ಯಕ್ತಿ.. ಮುಂದೇನಾಯ್ತು!?

ಘಟನೆಯ ಸಂಪೂರ್ಣ ದೃಶ್ಯ ಸಿಐಎಸ್​ಎಫ್​​​ ಪೋಸ್ಟ್ ಮಾಡಿದ್ದು, ಮೆಟ್ರೋ ಟ್ರ್ಯಾಕ್​​ನಲ್ಲಿ ಬಿದ್ದಿರುವ ವ್ಯಕ್ತಿ ಮೇಲೆ ಎದ್ದೇಳಲು ಹರಸಾಹಸ ಪಟ್ಟಿದ್ದಾನೆ. ತಕ್ಷಣವೇ ಮೆಟ್ರೋ ಸಿಬ್ಬಂದಿ ಆತನ ರಕ್ಷಣೆ ಮಾಡಿದ್ದಾರೆ. ಈ ಹಿಂದೆ ಕೂಡ ಇಂತಹ ಅನೇಕ ಘಟನೆಗಳು ನಡೆದು ಹೋಗಿವೆ..

Man  falls on Delhi Metro tracks
Man falls on Delhi Metro tracks

By

Published : Feb 5, 2022, 8:20 PM IST

ನವದೆಹಲಿ :ಇತ್ತೀಚಿನ ದಿನಗಳಲ್ಲಿ ಯುವ ಜನತೆ ಮೊಬೈಲ್​ ಫೋನ್​​ಗಳಿಗೆ ಸಿಕ್ಕಾಪಟ್ಟೆ ಅಡಿಕ್ಟ್​​​ ಆಗಿಬಿಟ್ಟಿದ್ದಾರೆ. ಹೀಗಾಗಿ, ತಾವು ರಸ್ತೆಯಲ್ಲಿ, ರೈಲ್ವೆ ಸ್ಟೇಷನ್​, ಬಸ್​​ ನಿಲ್ದಾಣಗಳಿಗೆ ನಡೆದು ಹೋಗುವಾಗ ಮೊಬೈಲ್​ ಫೋನ್ ನೋಡುತ್ತಲೇ ಹೋಗುತ್ತಿರುತ್ತಾರೆ. ಈ ವೇಳೆ ಅನೇಕ ಅವಘಡಗಳು ನಡೆದಿದ್ದು, ಅಂತಹದೊಂದು ವಿಡಿಯೋ ಇದೀಗ ಬೆಳಕಿಗೆ ಬಂದಿದೆ. ​​

ಫೋನ್​​ನಲ್ಲಿ ಬ್ಯುಸಿ, ದೆಹಲಿ ಮೆಟ್ರೋ ಟ್ರ್ಯಾಕ್​ ಮೇಲೆ ಬಿದ್ದ ವ್ಯಕ್ತಿ..

ನವದೆಹಲಿಯ ಶಹದಾರಾ ಮೆಟ್ರೋ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಮೊಬೈಲ್​​ನಲ್ಲಿ ಸಂಪೂರ್ಣ ಬ್ಯುಸಿಯಾಗಿದ್ದ ಯುವಕ ರೈಲ್ವೆ ಪ್ಲಾಟ್‌ ಫಾರ್ಮ್​​​ನಿಂದ ಹಿಂದೆ ಮುಂದೆ ನೋಡದೆ ಟ್ರ್ಯಾಕ್​ನತ್ತ ನಡೆದುಕೊಂಡು ಹೋಗಿದ್ದಾನೆ. ಈ ವೇಳೆ ಸಮತೋಲನ ಕಳೆದುಕೊಂಡು ಸೀದಾ ಮುಗ್ಗರಿಸಿ ಟ್ರ್ಯಾಕ್​ ಮೇಲೆ ಬಿದ್ದಿದ್ದಾನೆ. ಈ ವೇಳೆ ಸಿಐಎಸ್​ಎಫ್​ ಅಧಿಕಾರಿಗಳು ಆತನ ರಕ್ಷಣೆ ಮಾಡಿದ್ದಾರೆ.

ಇದನ್ನೂ ಓದಿರಿ:ದಲಿತ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ, ಕೊಲೆ: ಓರ್ವ ಆರೋಪಿ ಬಂಧನ

ಘಟನೆಯ ಸಂಪೂರ್ಣ ದೃಶ್ಯ ಸಿಐಎಸ್​ಎಫ್​​​ ಪೋಸ್ಟ್ ಮಾಡಿದ್ದು, ಮೆಟ್ರೋ ಟ್ರ್ಯಾಕ್​​ನಲ್ಲಿ ಬಿದ್ದಿರುವ ವ್ಯಕ್ತಿ ಮೇಲೆ ಎದ್ದೇಳಲು ಹರಸಾಹಸ ಪಟ್ಟಿದ್ದಾನೆ. ತಕ್ಷಣವೇ ಮೆಟ್ರೋ ಸಿಬ್ಬಂದಿ ಆತನ ರಕ್ಷಣೆ ಮಾಡಿದ್ದಾರೆ. ಈ ಹಿಂದೆ ಕೂಡ ಇಂತಹ ಅನೇಕ ಘಟನೆಗಳು ನಡೆದು ಹೋಗಿವೆ.

ABOUT THE AUTHOR

...view details