ಸಹರಾನ್‌ಪುರ (ಉತ್ತರ ಪ್ರದೇಶ):ಬಾಲಕಿಯನ್ನು ಅಪಹರಿಸಿ ಮದುವೆಯಾಗಿದ್ದ ಆರೋಪಿಯನ್ನು ಒಂದೂವರೆ ದಶಕದ ನಂತರ ಗುರುವಾರ ಸಹರಾನ್‌ಪುರದಲ್ಲಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಂದೀಪ್ ಎಂಬಾತನೇ ಬಂಧಿತ ಆರೋಪಿ. ಈ ಆರೋಪಿಯು ಅಪ್ರಾಪ್ತ ವಯಸ್ಕಳನ್ನು 15 ವರ್ಷದ ಹಿಂದೆ ಅಪಹರಿಸಿ ಮದುವೆಯಾಗಿದ್ದನು, ನಂತರ ಅಪಹರಿಸಿದ ಅಪ್ರಾಪ್ತಳ ಕುಟುಂಬವು ಸಂದೀಪ್ ವಿರುದ್ಧ ದೇಹತ್ ಕೊಟ್ವಾಲಿ ಪೊಲೀಸ್ ಠಾಣೆಗೆ ದೂರು ನೀಡಿತ್ತು.
ಬಂಧಿತ ಆರೋಪಿಯನ್ನು ಅಪಹರಣ, ಪೋಕ್ಸೋ ಮತ್ತು ಅತ್ಯಾಚಾರದ ಸೆಕ್ಷನ್ ಅಡಿ ಪೊಲೀಸರು ಜೈಲಿಗೆ ಕಳುಹಿಸಿದೆ. ವಿಶೇಷವೆಂದರೆ ಇದೀಗ ಆರೋಪಿ ಹಾಗೂ ಅಪ್ರಾಪ್ತ ಬಾಲಕಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಗಂಡ ಹೆಂಡತಿ ಇಬ್ಬರೂ ಕಷ್ಟಪಟ್ಟು ದುಡಿದು ಜೀವನ ಸಾಗಿಸುತ್ತಿದ್ದರು. ಈ ಪ್ರಕರಣದಲ್ಲಿ 15 ವರ್ಷಗಳ ಹಿಂದೆ ಬಾಲಕಿಯ ಕುಟುಂಬಸ್ಥರು ಪ್ರಕರಣ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಸಂದೀಪ್ 2007ರಲ್ಲಿ ಅಪ್ರಾಪ್ತ ಪಿಂಕಿಯನ್ನು ಅಪಹರಿಸಿ ಮದುವೆಯಾಗಿದ್ದನು. ಮದುವೆ ಬಳಿಕ ಈ ದಂಪತಿ ಉತ್ತರಾಖಂಡ್‌ನ ತೆಹ್ರಿಗೆ ಪಲಾಯನ ಮಾಡಿದ್ದರು. ಅಲ್ಲಿ ಅವರು ಹೆಸರು ಬದಲಾಯಿಸಿಕೊಂಡು ವಾಸಿಸುತ್ತಿದ್ದರು. ಅವರು ಎಂಟು ವರ್ಷಗಳ ನಂತರ ಸಹರಾನ್‌ಪುರಕ್ಕೆ ಮರಳಿ ಬಾಡಿಗೆ ಫ್ಲಾಟ್‌ನಲ್ಲಿ ತಮ್ಮ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಇದ್ದರು. ಸಂದೀಪ್ ತನ್ನ ಹೆಸರನ್ನು ಮುಕೇಶ್, ಅಪ್ರಾಪ್ತ ಬಾಲಕಿ ಸಂಗೀತಾ ಎಂದು ಹೆಸರು ಬದಲಾಯಿಸಿಕೊಂಡಿದ್ದಳು. ಇನ್ನು ಆರೋಪಿ ಸಂದೀಪ್ ಹೊಟ್ಟೆಪಾಡಿಗಾಗಿ ಮೇಸ್ತ್ರಿ ಕೆಲಸ ಮಾಡುತ್ತಿದ್ದರು. ಸಂದೀಪ್ ಅವರನ್ನು ಪೋಕ್ಸೋ ಕಾಯ್ದೆಯಡಿ ಬಂಧಿಸಲಾಗಿದೆ ಎಂದು ಎಸ್‌ಪಿ ಅಭಿಮನ್ಯು ಮಾಂಗ್ಲಿಕ್ ತಿಳಿಸಿದ್ದಾರೆ.
2007 ರಲ್ಲಿ ರಾಮಧಾನ್ ಅವರು ಕೊತ್ವಾಲಿ ದೇಹತ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಫಿರೋಜ್‌ಪುರ ಗ್ರಾಮದ ನಿವಾಸಿ ರಾಮ್‌ಧನ್ ಅವರು ತನ್ನ ಮಗಳು ಪಿಂಕಿಯನ್ನು ಆಮಿಷವೊಡ್ಡಿ ಗ್ರಾಮದ ಮಣಿರಾಮ್ ಪುತ್ರ ಸಂದೀಪ್ ಅಪಹರಿಸಿದ್ದಾನೆ ಎಂದು ಆರೋಪಿಸಿ ದೂರು ದಾಖಲಿಸಿದ್ದರು ಎಂದು ಮಾಹಿತಿ ನೀಡಿದರು.