ಕರ್ನಾಟಕ

karnataka

ETV Bharat / bharat

ಸಿಗರೇಟು ಸೇದುವ ವಿಚಾರವಾಗಿ ಗಲಾಟೆ: ಪೋಲೆಂಡ್‌ನಲ್ಲಿ ಮಲಯಾಳಿ ಯುವಕನ ಹತ್ಯೆ

ಸಿಗರೇಟ್ ಸೇದುವ ವಿಚಾರವಾಗಿ ಎರಡು ಗುಂಪುಗಳ ನಡುವೆ ನಡೆದ ವಾಗ್ವಾದ ವಿಕೋಪಕ್ಕೆ ತಿರುಗಿ ಪೋಲೆಂಡ್‌ನಲ್ಲಿ ಮಲಯಾಳಿ ಯುವಕನನ್ನು ಹತ್ಯೆ ಮಾಡಲಾಗಿದೆ.

Malayali youth
ಸೂರಜ್

By

Published : Jan 30, 2023, 8:37 AM IST

Updated : Jan 30, 2023, 6:46 PM IST

ತ್ರಿಶೂರ್ (ಕೇರಳ):ಧೂಮಪಾನ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಪೋಲೆಂಡ್‌ನಲ್ಲಿ ಮಲಯಾಳಿ ಯುವಕನೊಬ್ಬನನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ತ್ರಿಶೂರ್ ಜಿಲ್ಲೆಯ ಒಲ್ಲೂರು ಮೂಲದ ಸೂರಜ್ (23) ಮೃತಪಟ್ಟ ಯುವಕ. ಸ್ಮೋಕಿಂಗ್​ ಕುರಿತಂತೆ ಜಾರ್ಜಿಯನ್ ಪ್ರಜೆಯೊಂದಿಗೆ ಜಗಳ ನಡೆದಿದ್ದು, ಪರಸ್ಪರ ಹೊಡೆದಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಒಲ್ಲೂರಿನ ಮುರಳೀಧರನ್ ಮತ್ತು ಸಂಧ್ಯಾ ದಂಪತಿಯ ಪುತ್ರ ಸೂರಜ್ ಕಳೆದ ಸೆಪ್ಟೆಂಬರ್‌ನಲ್ಲಿ ಪೋಲೆಂಡ್‌ಗೆ ತೆರಳಿದ್ದರು. ಐಟಿಐ ಶಿಕ್ಷಣ ಪಡೆದ ಇವರು ಪೋಲೆಂಡ್‌ನ ಹಡಗು ನಿರ್ವಹಣಾ ಕಂಪನಿಯಲ್ಲಿ ಮೇಲ್ವಿಚಾರಕರಾಗಿದ್ದರು. ಬಳಿಕ ಈ ಕೆಲಸ ಕಷ್ಟಕರವೆಂದು ತಿಳಿದು ಪೋಲೆಂಡ್‌ನ ಸ್ಲೂಬಿಸ್‌ನಲ್ಲಿರುವ ಮಾಂಸ ಸಂಸ್ಕರಣಾ ಕಾರ್ಖಾನೆಯಲ್ಲಿ ತ್ರಿಶೂರ್ ಮೂಲದವರು ಕೆಲಸ ಕೊಡಿಸಿದ್ದರು.

ಇದನ್ನೂ ಓದಿ:ದೇವನಹಳ್ಳಿ ಅಪರಿಚಿತ ಶವ ಪತ್ತೆ ಪ್ರಕರಣ : ಕತ್ತರಿಸಿದ ಬೆರಳು ಜೋಡಿಸಿ ಕೊಲೆ ಕೇಸ್​ ಭೇದಿಸಿದ ವಿಜಯಪುರ ಪೊಲೀಸರು

ಸಿಗರೇಟ್ ಸೇದುವ ವಿಚಾರವಾಗಿ ಗಲಾಟೆ: ವೀಕೆಂಡ್​ ಸಂಭ್ರಮಾಚರಣೆಯಲ್ಲಿ ಮಲಯಾಳಿ ಯುವಕರು ಸಿಗರೇಟ್ ಸೇದುವ ವಿಚಾರವಾಗಿ ಜಾರ್ಜಿಯಾ ಮೂಲದವರೊಂದಿಗೆ ಮಾತಿನ ಚಕಮಕಿ ನಡೆಸಿದ್ದಾರೆ. ಎರಡು ಗುಂಪುಗಳ ನಡುವಿನ ವಾಗ್ವಾದ ವಿಕೋಪಕ್ಕೆ ತಿರುಗಿ ಜಾರ್ಜಿಯನ್ ಮೂಲದ ಸ್ಥಳೀಯರು ಸೂರಜ್ ಮತ್ತು ಇತರೆ ನಾಲ್ವರು ಮಲೆಯಾಳಿ ಯುವಕರಿಗೆ ಚಾಕುವಿನಿಂದ ಇರಿದು ಗಾಯಗೊಳಿಸಿದ್ದಾರೆ. ಸೂರಜ್ ಎದೆ ಹಾಗೂ ಕುತ್ತಿಗೆಗೆ ಭಾಗಕ್ಕೆ ಚಾಕು ಚುಚ್ಚಿದ ಪರಿಣಾಮ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಘಟನೆ ನಡೆದಿರುವುದು ಮಾಂಸ ಸಂಸ್ಕರಣಾ ಕಂಪನಿಯ ಅಪಾರ್ಟ್‌ಮೆಂಟ್‌ನಲ್ಲಿ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ:ಹುಬ್ಬಳ್ಳಿ ಬಳಿ ಭೀಕರ ಹತ್ಯೆ: ಆಸ್ತಿಗಾಗಿ ಮಾವನಿಗೆ 20ಕ್ಕೂ ಹೆಚ್ಚು ಬಾರಿ ಇರಿದು ಕೊಂದ ಅಳಿಯ

ಪೋಲೆಂಡ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಸೂರಜ್ ಸಾವು ನಡೆದಿರುವುದನ್ನು ಖಚಿತಪಡಿಸಿದೆ. ಮೃತನ ಸಂಬಂಧಿಕರು ವಿದೇಶಾಂಗ ಸಚಿವಾಲಯ ಮತ್ತು ಪೋಲೆಂಡ್ ಮಲೆಯಾಳಿ ಅಸೋಸಿಯೇಷನ್ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ. ಮೃತದೇಹವನ್ನು ಪೋಲೆಂಡ್​ನ ಸರ್ಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಕಾನೂನು ಪ್ರಕ್ರಿಯೆಗಳನ್ನು ಮುಗಿಸಿ ಶರೀರವನ್ನು ಕೇರಳಕ್ಕೆ ತರಲು ಸಂಬಂಧಿಕರು ಮತ್ತು ಸ್ನೇಹಿತರು ಮುಂದಾಗಿದ್ದಾರೆ.

ಇದನ್ನೂ ಓದಿ:ಬೆಂಗಳೂರು: ಪ್ರೀತಿ ನಿರಾಕರಿಸಿದ ಯುವತಿಯ ಹತ್ಯೆ, ಆರೋಪಿ ಅರೆಸ್ಟ್​​

Last Updated : Jan 30, 2023, 6:46 PM IST

ABOUT THE AUTHOR

...view details