ಕರ್ನಾಟಕ

karnataka

ETV Bharat / bharat

ಮೋದಿ ಜೊತೆ ವೇದಿಕೆ ಹಂಚಿಕೊಂಡ ಸ್ಟಾಲಿನ್​.. ಹಿಂದಿಯಂತೆ ತಮಿಳು ಅಧಿಕೃತ ಭಾಷೆ ಮಾಡಲು ಒತ್ತಾಯ

ಪ್ರಧಾನಿ ನರೇಂದ್ರ ಮೋದಿ ಜೊತೆ ವೇದಿಕೆ ಹಂಚಿಕೊಂಡು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅನೇಕ ಬೇಡಿಕೆಗಳನ್ನ ಅವರ ಮುಂದಿಟ್ಟರು. ಇದರಲ್ಲಿ ಪ್ರಮುಖವಾಗಿ ಹಿಂದಿಯಂತೆ ತಮಿಳು ಭಾಷೆಗೂ ಅಧಿಕೃತ ಭಾಷೆಯ ಸ್ಥಾನಮಾನ ನೀಡಲು ಒತ್ತಾಯಿಸಿದರು.

ಮೋದಿ ಜೊತೆ ವೇದಿಕೆ ಹಂಚಿಕೊಂಡ ಸ್ಟಾಲಿನ್
ಮೋದಿ ಜೊತೆ ವೇದಿಕೆ ಹಂಚಿಕೊಂಡ ಸ್ಟಾಲಿನ್

By

Published : May 26, 2022, 8:16 PM IST

Updated : May 26, 2022, 8:49 PM IST

ಚೆನ್ನೈ(ತಮಿಳುನಾಡು): ವಿವಿಧ ಯೋಜನೆಗಳಿಗೆ ಚಾಲನೆ ಮಾಡುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ತಮಿಳುನಾಡು ಪ್ರವಾಸ ಕೈಗೊಂಡಿದ್ದು, ಚೆನ್ನೈನ ನೆಹರು ಮೈದಾನದಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ಭಾಗಿಯಾದರು. ಇವರೊಂದಿಗೆ ಇದೇ ಮೊದಲ ಸಲ ತಮಿಳುನಾಡಿನ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ವೇದಿಕೆ ಹಂಚಿಕೊಂಡು, ಮಾತನಾಡಿದರು.

ಮೋದಿ ಜೊತೆ ವೇದಿಕೆ ಹಂಚಿಕೊಂಡ ಸ್ಟಾಲಿನ್​.. ಹಿಂದಿಯಂತೆ ತಮಿಳು ಅಧಿಕೃತ ಭಾಷೆ ಮಾಡಲು ಒತ್ತಾಯ

ಹಿಂದಿ ಭಾಷೆಗೆ ಸರಿಸಮಾನವಾಗಿ ತಮಿಳನ್ನ ಅಧಿಕೃತ ಭಾಷೆ ಎಂದು ಘೋಷಣೆ ಮಾಡುವಂತೆ ಸಿಎಂ ಸ್ಟಾಲಿನ್ ಒತ್ತಾಯ ಮಾಡಿದ್ದು, ಮದ್ರಾಸ್ ಹೈಕೋರ್ಟ್​​ನಲ್ಲಿ ಅಧಿಕೃತ ಭಾಷೆಯನ್ನಾಗಿ ಬಳಕೆ ಮಾಡಲು ಮೋದಿ ಮೇಲೆ ಒತ್ತಡ ಹೇರಿದರು. ತಮಿಳು ವಿಧಾನಸಭೆಯಲ್ಲಿ ಇತ್ತೀಚೆಗೆ ರಾಷ್ಟ್ರೀಯ ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್​​ಗೆ ವಿನಾಯಿತಿ ಮಸೂದೆ ಅಂಗೀಕಾರ ಮಾಡಲಾಗಿದ್ದು, ಇದಕ್ಕೆ ಕೇಂದ್ರ ಸರ್ಕಾರದಿಂದ ವಿನಾಯಿತಿ ನೀಡುವಂತೆ ಮನವಿ ಮಾಡಿದರು. ಇದೇ ವೇಳೆ, ರಾಜ್ಯಕ್ಕೆ ಬರುವ 14,006 ಕೋಟಿ ಜಿಎಸ್​ಟಿ ಹಣ ನೀಡುವಂತೆ ಮನವಿ ಮಾಡಿಕೊಂಡರು.

ಕಳೆದ ವರ್ಷ ತಮಿಳುನಾಡಿನಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಡಿಎಂಕೆ, ತಮಿಳು ಭಾಷೆಗೆ ಅಧಿಕೃತ ಮತ್ತು ಆಡಳಿತಾತ್ಮಕ ಭಾಷೆಯ ಸ್ಥಾನಮಾನ ನೀಡುವಂತೆ ಒತ್ತಾಯ ಮಾಡುತ್ತಾ ಇದೆ. ಇಂದಿನ ಕಾರ್ಯಕ್ರಮದಲ್ಲೂ ಸ್ಟಾಲಿನ್ ಈ ವಿಷಯ ಪ್ರಸ್ತಾಪ ಮಾಡಿ, ಎಲ್ಲರ ಗಮನ ಸೆಳೆದರು.

ಈ ಹಿಂದೆ ಕೇಂದ್ರದಲ್ಲಿ ಕಾಂಗ್ರೆಸ್​ ನೇತೃತ್ವದ ಯುಪಿಎ ಅಧಿಕಾರದಲ್ಲಿದ್ದಾಗ ತಮಿಳು ಭಾಷೆಗೆ ಶಾಸ್ತ್ರೀಯ ಭಾಷೆ ಸ್ಥಾನಮಾನ ನೀಡಲಾಗಿದೆ. ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ನಮೋ, ತಮಿಳು ಭಾಷೆ ಯಾವಾಗಲೂ ಶಾಶ್ವತ ಎಂದು ಬಣ್ಣಿಸಿದರು. ಇದೇ ವೇಳೆ, ಶ್ರೀಲಂಕಾ ಕಷ್ಟದ ಸಮಯ ಎದುರಿಸುತ್ತಿದ್ದು, ನೀವೆಲ್ಲರೂ ಅದರ ಬಗ್ಗೆ ಕಾಳಜಿ ವಹಿಸುತ್ತೀರಿ ಎಂದು ನನಗೆ ಗೊತ್ತಿದೆ. ಶ್ರೀಲಂಕಾದ ಆಪ್ತ ಸ್ನೇಹಿತ ಹಾಗೂ ನೆರೆಯ ರಾಷ್ಟ್ರವಾಗಿ ಭಾರತ ಆರ್ಥಿಕ, ಇಂಧನ, ಆಹಾರ, ಔಷಧಗಳು ಮತ್ತು ಇತರ ಅಗತ್ಯ ವಸ್ತು ರವಾನೆ ಮಾಡಿದೆ ಎಂದರು.

ತಮಿಳುನಾಡಿನಲ್ಲಿ ಒಟ್ಟು 11 ಯೋಜನೆಗಳಿಗೆ ನಮೋ ಶಿಲಾನ್ಯಾಸ ನಡೆಸಲಿದ್ದು, ಇದಕ್ಕಾಗಿ 31,500 ಕೋಟಿ ರೂ. ಖರ್ಚು ಮಾಡಲು ನಿರ್ಧರಿಸಲಾಗಿದೆ. ಚೆನ್ನೈನ ಜವಾಹರ್​ಲಾಲ್ ನೆಹರು ಮೈದಾನದಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿದೆ. ಇದೇ ವೇಳೆ, ತಮಿಳುನಾಡಿನಲ್ಲಿ ನಿರ್ಮಾಣಗೊಂಡಿರುವ 1,152 ನಿವಾಸಗಳನ್ನ ಫಲಾನುಭವಿಗಳಿಗೆ ಹಂಚಿಕೆ ಮಾಡಿದರು. ಇದಕ್ಕೂ ಮುಂಚಿತವಾಗಿ ಪ್ರಧಾನಿ ನರೇಂದ್ರ ಮೋದಿ ಚೆನ್ನೈನಲ್ಲಿ ರೋಡ್ ಶೋ ನಡೆಸಿದರು.

Last Updated : May 26, 2022, 8:49 PM IST

ABOUT THE AUTHOR

...view details