ನವದೆಹಲಿ:ಅಗತ್ಯ ವಸ್ತುಗಳ ಬೆಲೆಯೇರಿಕೆ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿದೆ. ಸಂಸತ್ತಲ್ಲೂ ಕೂಡ ಪ್ರತಿಪಕ್ಷಗಳು ನಿರಂತರ ಪ್ರತಿಭಟನೆ ನಡೆಸುತ್ತಿದ್ದಾರೆ. ಇದೀಗ ಕೇಂದ್ರ ಸರ್ಕಾರ ವಾಣಿಜ್ಯ ಎಲ್ಪಿಜಿ ಸಿಲಿಂಡರ್ಗಳ ದರದಲ್ಲಿ ಅಲ್ಪ ಇಳಿಸಿ, ಹೊರೆ ತಗ್ಗಿಸುವ ಯತ್ನ ಮಾಡಿದೆ.
ಇಂಡಿಯನ್ ಆಯಿಲ್ ಕಾರ್ಪೋರೇಷನ್ 19 ಕೆಜೊ ತೂಕದ ವಾಣಿಜ್ಯ ಸಿಲಿಂಡರ್ಗಳ ದರದಲ್ಲಿ 36 ರೂಪಾಯಿ ಕಡಿತ ಮಾಡಿದೆ. ಇದರಿಂದ 2012 ರೂಪಾಯಿ ಇದ್ದ ಸಿಲಿಂಡರ್ ಇದೀಗ 1976 ರೂಪಾಯಿಗೆ ಸಿಗಲಿದೆ. ಈ ದರ ಇಂದಿನಿಂದಲೇ ಜಾರಿಗೆ ಬರಲಿದೆ.
36 ರೂಪಾಯಿ ಕಡಿತದೊಂದಿಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಎಲ್ಪಿಜಿ ಸಿಲಿಂಡರ್ ಬೆಲೆ 1976.50 ರೂ.ಗೆ ಆಗಿದೆ. ಈ ಹಿಂದೆ ಅದು 2012.50 ರೂ. ಇತ್ತು. ಕೋಲ್ಕತ್ತಾದಲ್ಲಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆ 2095.50 ಇದೆ. ಈ ಹಿಂದೆ ಪ್ರತಿ ಸಿಲಿಂಡರ್ ಬೆಲೆ 2132 ರೂ. ಇತ್ತು. ಮುಂಬೈನಲ್ಲಿ 1936.50 ರೂ.ಗೆ 19 ಕೆಜಿ ತೂಕದ ಸಿಲಿಂಡರ್ ಸಿಗಲಿದೆ.