ಕರ್ನಾಟಕ

karnataka

ETV Bharat / bharat

ಲೋಹ್ರಿ, ಭೋಗಿಯ ಸಂಭ್ರಮದಲ್ಲಿ ಜನತೆ: ಶುಭಾಶಯ ಕೋರಿದ ರಾಷ್ಟ್ರಪತಿ, ಉಪರಾಷ್ಟ್ರಪತಿ

ದೀರ್ಘ ದಿನಗಳನ್ನು ಸ್ವಾಗತಿಸುತ್ತಾ ಉತ್ತರ ಗೋಳಾರ್ಧಕ್ಕೆ ಸೂರ್ಯನ ಪ್ರಯಾಣ ಆರಂಭವಾಗುವ ಹಿಂದಿನ ದಿನ ಉತ್ತರ ಭಾರತದಲ್ಲಿ ಲೋಹ್ರಿ ಹಾಗೂ ತೆಲುಗು ರಾಜ್ಯಗಳಲ್ಲಿ ಭೋಗಿ ಹಬ್ಬವಾಗಿ ಮಕರ ಸಂಕ್ರಾಂತಿ ಅಥವಾ ಮಾಗಿಯ ಹಿಂದಿನ ರಾತ್ರಿ ಆಚರಿಸಲಾಗುತ್ತದೆ.

By

Published : Jan 13, 2021, 1:23 PM IST

Leaders greet nation on Lohri
ವೆಂಕಯ್ಯ ನಾಯ್ಡು

ನವದೆಹಲಿ: ಲೋಹ್ರಿ, ಮಕರ ಸಂಕ್ರಾಂತಿ, ಪೊಂಗಲ್, ಭೋಗಿ, ಬಿಹು, ಉತ್ತರಾಯಣ್ ಮತ್ತು ಪೌಶ್ ಪರ್ವಗಳ ಆಚರಣೆಗೆ ರಾಷ್ಟ್ರಪತಿ ರಾಮ್​ನಾಥ್ ಕೋವಿಂದ್ ಮತ್ತು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ರಾಷ್ಟ್ರದ ಜನತೆಗೆ ಶುಭ ಕೋರಿದ್ದಾರೆ. ಸಮಾಜದಲ್ಲಿ ಸಾಮರಸ್ಯ, ಪ್ರೀತಿ ಮತ್ತು ವಾತ್ಸಲ್ಯಕ್ಕಾಗಿ ಹಾರೈಸಿದ್ದಾರೆ.

ಮಡದಿಯೊಂದಿಗೆ ಭೋಗಿ ಆಚರಿಸಿದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು

ಲೋಹ್ರಿ, ಮಕರ ಸಂಕ್ರಾಂತಿ, ಪೊಂಗಲ್, ಭೋಗಿ, ಬಿಹು, ಉತ್ತರಾಯಣ್ ಮತ್ತು ಪೌಶ್ ಪರ್ವಗಳ ಶುಭಾಶಯಗಳು. ಈ ಹಬ್ಬಗಳು ನಮ್ಮ ಸಮಾಜದಲ್ಲಿ ಪ್ರೀತಿ, ವಾತ್ಸಲ್ಯ ಮತ್ತು ಸಾಮರಸ್ಯದ ಬಂಧವನ್ನು ಬಲಪಡಿಸಲಿ ಮತ್ತು ದೇಶದಲ್ಲಿ ಸಮೃದ್ಧಿ ಮತ್ತು ಸಂತೋಷವನ್ನು ಹೆಚ್ಚಿಸಲಿ, ಎಂದು ಭಾರತದ ರಾಷ್ಟ್ರಪತಿಗಳು ಟ್ವೀಟ್ ಮಾಡಿದ್ದಾರೆ.

ಎಲ್ಲರಿಗೂ ಲೋಹ್ರಿ ಮತ್ತು ಭೋಗಿಯ ಶುಭಾಶಯಗಳು. ಈ ಹಬ್ಬಗಳು ಉತ್ತಮ ಸುಗ್ಗಿ ಮತ್ತು ಪ್ರಕೃತಿಯ ಸಮೃದ್ಧಿಯನ್ನು ಸಂಕೇತಿಸುತ್ತವೆ. ಧಾರ್ಮಿಕ ಆಚರಣೆ ಎಲ್ಲರಿಗೂ ಸಂತೋಷ, ಉತ್ತಮ ಆರೋಗ್ಯ ಮತ್ತು ಸಮೃದ್ಧಿಯನ್ನು ತರಲಿ, ಎಂದು ಅವರು ಟ್ವೀಟ್​ನಲ್ಲಿ ಮತ್ತಷ್ಟು ಬರೆದುಕೊಂಡಿದ್ದಾರೆ.

ಭೋಗಿ ಬದಲಾವಣೆಯ ಹಬ್ಬ. ನಕಾರಾತ್ಮಕ ವಿಚಾರಗಳನ್ನು ತಿರಸ್ಕರಿಸಿ, ಹೊಸ ಶಕ್ತಿಯನ್ನು ಜನರ ಮನೆಗಳಲ್ಲಿ ಸ್ವಾಗತಿಸಲಾಗುತ್ತದೆ. ದೀಪ(ಬೆಂಕಿ) ಹಚ್ಚುವಿಕೆ ಅಥವಾ ಭೋಗಿ ಮಂಟಲು ಬೆಳಗಿಸುವ ಮೂಲಕ ಇದನ್ನು ಸಾಂಕೇತಿಸಲಾಗುತ್ತದೆ "ಎಂದು ಉಪಾಧ್ಯಕ್ಷರು ತಮ್ಮ ಟ್ವಿಟರ್​ನಲ್ಲಿ ಟ್ವೀಟ್ ಮಾಡಿದ್ದಾರೆ.

ಈ ಸಂದರ್ಭದಲ್ಲಿ, ಭೋಗಿಗೆ ಸಂಬಂಧಿಸಿದ ಎಲ್ಲ ಆಚರಣೆಗಳನ್ನು, ಮಡದಿಯೊಂದಿಗೆ ಭೋಗಿ ಮಂಟಲು ಸುತ್ತಲೂ ಪ್ರದಕ್ಷಿಣೆ ಹಾಕಿ ಆಚರಣೆ ಮಾಡಿದರು. ಎಲ್ಲರ ಸಂತೋಷ, ಉತ್ತಮ ಆರೋಗ್ಯ ಮತ್ತು ಸಮೃದ್ಧಿಗಾಗಿ ಪ್ರಾರ್ಥಿಸಿದರು.

ಇದನ್ನೂ ಓದಿ:ಸಂಭ್ರಮದ ಭೋಗಿ ಹಬ್ಬ: ಚಾರ್​​​​ಮಿನಾರ್​​​ ಸಂಭ್ರಮಾಚರಣೆಯಲ್ಲಿ ಕೆಸಿಆರ್​ ಪುತ್ರಿ ಭಾಗಿ

ಲೋಹ್ರಿ ಉತ್ತರ ಭಾರತದ ಸುಗ್ಗಿಯ ಹಬ್ಬ. ದೀಪೋತ್ಸವ ಮತ್ತು ಜಾನಪದ ಗೀತೆಗಳು ಆಚರಣೆಯ ಪ್ರಮುಖ ಭಾಗವಾಗಿದ್ದು, ಬೆಂಕಿ ಹಾಕಿ ಅದರ ಸುತ್ತ ಪೂಜಾ ಪರಿಕ್ರಮವನ್ನು ನಡೆಸಲಾಗುತ್ತದೆ.

ದೀರ್ಘ ದಿನಗಳನ್ನು ಸ್ವಾಗತಿಸುತ್ತಾ ಉತ್ತರ ಗೋಳಾರ್ಧಕ್ಕೆ ಸೂರ್ಯನ ಪ್ರಯಾಣ ಆರಂಭವಾಗುವ ಹಿಂದಿನ ದಿನ ಉತ್ತರ ಭಾರತದಲ್ಲಿ ಲೋಹ್ರಿ ಹಾಗೂ ತೆಲುಗು ರಾಜ್ಯಗಳಲ್ಲಿ ಭೋಗಿ ಹಬ್ಬವಾಗಿ ಮಕರ ಸಂಕ್ರಾಂತಿ ಅಥವಾ ಮಾಗಿಯ ಹಿಂದಿನ ರಾತ್ರಿ ಆಚರಿಸಲಾಗುತ್ತದೆ.

ABOUT THE AUTHOR

...view details