ಕರ್ನಾಟಕ

karnataka

ETV Bharat / bharat

ಕೇರಳದಲ್ಲಿ ಮುಂದುವರಿದ ಮಳೆ, ಪ್ರವಾಹ: ಕೊಟ್ಯಂ, ಪಥಾನಂತಿಟ್ಟದಲ್ಲಿ ಭೂಕುಸಿತ

ಕೇರಳದ (Kerala Rains) ಕೊಟ್ಟಾಯಂನಲ್ಲಿ ಭಾರಿ ಪ್ರವಾಹಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದ ಇಬ್ಬರು, ಭೂಕುಸಿತದ ವೇಳೆ ಅವಶೇಷಗಳಡಿ ಸಿಲುಕಿದ್ದ ವೃದ್ಧ ಮಹಿಳೆಯನ್ನೂ ರಕ್ಷಣೆ ಮಾಡಲಾಗಿದೆ.

landslides in kerala
ಕೇರಳದಲ್ಲಿ ಮುಂದುವರಿದ ಭಾರೀ ಮಳೆ, ಪ್ರವಾಹ

By

Published : Nov 11, 2021, 4:11 PM IST

ಕೊಟ್ಟಾಯಂ/ಪತ್ತನಂತಿಟ್ಟ: ಕೇರಳದಲ್ಲಿ ಭಾರೀ ಮಳೆ ಮತ್ತು ಪ್ರವಾಹ ಪರಿಸ್ಥಿತಿ ಮುಂದುವರಿದಿದೆ. ಕೊಟ್ಟಾಯಂ ಮತ್ತು ಪತ್ತನಂತಿಟ್ಟ ಜಿಲ್ಲೆಯಲ್ಲಿ ಭೂಕುಸಿತದ ವರದಿಗಳೂ ದಾಖಲಾಗಿವೆ.

ಕೊಟ್ಟಾಯಂನಲ್ಲಿ ಭಾರಿ ಪ್ರವಾಹಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದ ಇಬ್ಬರನ್ನು, ಭೂಕುಸಿತದ ವೇಳೆ ಅವಶೇಷಗಳಡಿ ಸಿಲುಕಿದ್ದ ವೃದ್ಧ ಮಹಿಳೆಯನ್ನೂ ರಕ್ಷಣೆ ಮಾಡಲಾಗಿದೆ.

ಇರುಮೇಲಿ ಎಂಬಲ್ಲಿ ಹಲವಾರು ಮನೆಗಳು ಭಾಗಶಃ ಮತ್ತು ಪೂರ್ಣ ಪ್ರಮಾಣದಲ್ಲಿ ನಾಶವಾಗಿವೆ. ಎರಡು ಆಟೋ ರಿಕ್ಷಾಗಳು ಕೂಡ ಪ್ರವಾಹದಲ್ಲಿ ಕೊಚ್ಚಿ ಹೋದ ಬಗ್ಗೆ ಮಾಹಿತಿ ಸಿಕ್ಕಿದೆ.

ಇದಲ್ಲದೇ, ಕನಿಮಾಲಾ, ಕೀರ್ತಿಹೋಡು ಮುಂಡಕ್ಯಮ್, ಪುಂಚವಯಾಲ್​, ಪಕ್ಕನಂ ಎಂಬಲ್ಲಿಯೂ ಜೋರು ಮಳೆ ಮತ್ತು ಭೂಕುಸಿತ ಉಂಟಾಗಿ ರಸ್ತೆಗಳು ಸಂಪರ್ಕ ಕಳೆದುಕೊಂಡಿವೆ. ಸಂಕಷ್ಟಕ್ಕೆ ಸಿಲುಕಿದ್ದ ಇಲ್ಲಿನ ಹಲವಾರು ಕುಟುಂಬಗಳನ್ನು ಸುರಕ್ಷಿತ ಪ್ರದೇಶಗಳಿಗೆ ವರ್ಗಾವಣೆ ಮಾಡಲಾಗಿದೆ.

ABOUT THE AUTHOR

...view details