ಕರ್ನಾಟಕ

karnataka

ETV Bharat / bharat

ಕೋಲ್ಕತ್ತಾ-ಢಾಕಾ ಬಸ್ ಸೇವೆ ಮತ್ತೆ ಆರಂಭ - ಕೋಲ್ಕತ್ತಾ ಢಾಕಾ ಬಸ್ ಸೇವೆ ಮತ್ತೆ ಆರಂಭ

ಪಶ್ಚಿಮ ಬಂಗಾಳ ರಾಜ್ಯ ಸಾರಿಗೆ ಸಂಸ್ಥೆ (ಡಬ್ಲ್ಯುಬಿಎಸ್‌ಟಿಸಿ) ಪ್ರಕಾರ, ಈ ಮಾರ್ಗದಲ್ಲಿ ಹೆಚ್ಚಿನ ಕೆಲಸ ಕಾರ್ಯಗಳನ್ನು ಮಾಡಲಾಗಿದೆ. ಮುಂದಿನ ತಿಂಗಳ ಆರಂಭದಲ್ಲಿ ಈ ಮಾರ್ಗದಲ್ಲಿ ಸೇವೆ ಮತ್ತೆ ಪ್ರಾರಂಭವಾಗಲಿದೆ. ತ್ರಿಪುರಾ ರಾಜಧಾನಿಯಿಂದ ನಿರ್ಗಮಿಸುವ ಬಸ್​ ಢಾಕಾ ಮೂಲಕ ಕೋಲ್ಕತ್ತಾ ತಲುಪಲು ಸುಮಾರು 20 ಗಂಟೆಗಳನ್ನು ತೆಗೆದುಕೊಳ್ಳುತ್ತದೆ.

ಕೋಲ್ಕತ್ತಾ-ಢಾಕಾ ಬಸ್ ಸೇವೆ ಮತ್ತೆ ಆರಂಭ
ಕೋಲ್ಕತ್ತಾ-ಢಾಕಾ ಬಸ್ ಸೇವೆ ಮತ್ತೆ ಆರಂಭ

By

Published : May 30, 2022, 9:49 PM IST

ಕೋಲ್ಕತ್ತಾ(ಪಶ್ಚಿಮ ಬಂಗಾಳ): ಎರಡು ವರ್ಷಗಳ ನಂತರ ಕೋಲ್ಕತ್ತಾ-ಢಾಕಾ ಅಂತಾರಾಷ್ಟ್ರೀಯ ಬಸ್ ಸೇವೆ ಪುನಾರಂಭಗೊಳ್ಳಲಿದೆ. ಈ ಬಗ್ಗೆ ತ್ರಿಪುರ ಸರ್ಕಾರದ ಸಾರಿಗೆ ಇಲಾಖೆ ಮಾಹಿತಿ ನೀಡಿದೆ. ಹೆಚ್ಚುತ್ತಿರುವ ಕೊರೊನಾ ಕಾರಣದಿಂದಾಗಿ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ, ಈಗ ಪರಿಸ್ಥಿತಿಯು ಸಹಜ ಸ್ಥಿತಿಗೆ ಮರಳಿದೆ ಮತ್ತು ಜೀವನವು ಲಯಕ್ಕೆ ಮರಳಿದೆ. ಪರಿಣಾಮ ಬಸ್ ಕೋಲ್ಕತ್ತಾದಿಂದ ಢಾಕಾ ಮೂಲಕ ಅಗರ್ತಲಾಕ್ಕೆ ತೆರಳಲಿದೆ.

ಪ್ರಯಾಣಿಕರಲ್ಲಿ ಬಸ್‌ಗೆ ಬೇಡಿಕೆ ಹೆಚ್ಚಿದ್ದು, ಪಶ್ಚಿಮ ಬಂಗಾಳ ರಾಜ್ಯ ಸಾರಿಗೆ ಸಂಸ್ಥೆ (ಡಬ್ಲ್ಯುಬಿಎಸ್‌ಟಿಸಿ) ಪ್ರಕಾರ, ಈ ಮಾರ್ಗದಲ್ಲಿ ಹೆಚ್ಚಿನ ಕೆಲಸ ಕಾರ್ಯಗಳನ್ನು ಮಾಡಲಾಗಿದೆ. ಮುಂದಿನ ತಿಂಗಳ ಆರಂಭದಲ್ಲಿ ಈ ಮಾರ್ಗದಲ್ಲಿ ಸೇವೆ ಮತ್ತೆ ಪ್ರಾರಂಭವಾಗಲಿದೆ. ತ್ರಿಪುರ ರಾಜಧಾನಿಯಿಂದ ನಿರ್ಗಮಿಸುವ ಬಸ್​ ಢಾಕಾ ಮೂಲಕ ಕೋಲ್ಕತ್ತಾ ತಲುಪಲು ಸುಮಾರು 20 ಗಂಟೆಗಳನ್ನು ತೆಗೆದುಕೊಳ್ಳುತ್ತದೆ.

ಕೋಲ್ಕತ್ತಾ-ಢಾಕಾ ಬಸ್ ಸೇವೆ ಮತ್ತೆ ಆರಂಭ

ಈ ಮಾರ್ಗದಲ್ಲಿ ರೈಲಿನಲ್ಲಿ ಪ್ರಯಾಣಿಸಲು ಸುಮಾರು 35 ರಿಂದ 38 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಈ ಬಸ್ ತ್ರಿಪುರದ ಕೃಷ್ಣನಗರ ಬಸ್ ಡಿಪೋದಿಂದ ಬೆಳಗ್ಗೆ 10 ಗಂಟೆಗೆ ಹೊರಡುತ್ತದೆ. ಏಪ್ರಿಲ್‌ನಲ್ಲಿ ಬಸ್ ಸೇವೆಯನ್ನು ಪ್ರಾರಂಭಿಸಲು ಯೋಜಿಸಲಾಗಿತ್ತು ಎಂದು ತಿಳಿದುಬಂದಿದೆ. ಆದರೆ ಕೆಲವು ಸಮಸ್ಯೆಗಳಿಂದ ಅದು ಆಗಿರಲಿಲ್ಲ. ಹೀಗಾಗಿ ಈ ಬಾರಿ ತ್ರಿಪುರ, ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶದ ನಡುವೆ ಈ ಬಸ್ ಆರಂಭಿಸಲು ಕ್ರಮಕೈಗೊಳ್ಳಲಾಗಿದೆ. ಇದಕ್ಕೆ ಉಭಯ ದೇಶಗಳು ಈಗಾಗಲೇ ಒಪ್ಪಿಗೆ ಸೂಚಿಸಿವೆ.

ಮುಂದಿನ ತಿಂಗಳು ಟಿಕೆಟ್ ಮಾರಾಟ ಪ್ರಕ್ರಿಯೆಯೂ ಆರಂಭವಾಗಬಹುದು. ಕೃಷ್ಣನಗರದಲ್ಲಿರುವ ತ್ರಿಪುರ ರಸ್ತೆ ಸಾರಿಗೆ ಸಂಸ್ಥೆಯ ಕೌಂಟರ್‌ನಲ್ಲಿ ಟಿಕೆಟ್‌ಗಳು ಲಭ್ಯವಿರುತ್ತವೆ. ಟಿಕೆಟ್‌ಗಳನ್ನು ಖರೀದಿಸಲು ಮಾನ್ಯವಾದ ಪಾಸ್‌ಪೋರ್ಟ್, ಸಾರಿಗೆ ವೀಸಾ ಮತ್ತು ಅಗತ್ಯ ದಾಖಲೆಗಳ ಅಗತ್ಯವಿದೆ.

ಇದನ್ನೂ ಓದಿ: ಜೀವಂತ ಹಾವುಗಳನ್ನು ಹಾರದಂತೆ ಬದಲಿಸಿಕೊಂಡ ವಧು, ವರ -ವಿಡಿಯೋ ವೈರಲ್​

ABOUT THE AUTHOR

...view details