ಅಹ್ಮದಾಬಾದ್: ಇಂದು ನಡೆದ ಐಪಿಎಲ್ ಸ್ಪರ್ಧೆಯಲ್ಲಿ ಕೆಕೆಆರ್ 5 ವಿಕೆಟ್‌ಗಳಿಂದ ಪಂಜಾಬ್ನ್ನು ಸೋಲಿಸಿ, ಜಯ ತನ್ನದಾಗಿಸಿಕೊಂಡಿದೆ.
ಸತತ ನಾಲ್ಕು ಸೋಲುಗಳಿಂದ ಕಂಗೆಟ್ಟಿದ್ದ ಕೋಲ್ಕತ ನೈಟ್ ರೈಡರ್ಸ್ ತಂಡ ಐಪಿಎಲ್-14ರ ತನ್ನ 6ನೇ ಪಂದ್ಯದಲ್ಲಿ 5 ವಿಕೆಟ್‌ಗಳಿಂದ ಪಂಜಾಬ್ ತಂಡವನ್ನು ಮಣಿಸಿದೆ. ಪಂಜಾಬ್ ಕಿಂಗ್ಸ್ 9 ವಿಕೆಟ್ಗೆ ಕೇವಲ 123 ರನ್ ಗಳಿಸಿದರೆ, ಕೆಕೆಆರ್ 16.4 ಓವರ್‌ಗಳಲ್ಲಿ 5 ವಿಕೆಟಿಗೆ 126 ರನ್ ಗಳಿಸಿದೆ.
ನಿತೀಶ್ ರಾಣಾ, ಶುಭಮನ್ ಗಿಲ್ ಮತ್ತು ಸುನೀಲ್ ನಾರಾಯಣ್ ಅವರನ್ನು 3 ಓವರ್‌ಗಳಲ್ಲೇ ಕಳೆದುಕೊಂಡ ಕೆಕೆಆರ್ ತೀವ್ರ ಕುಸಿತಕ್ಕೆ ಸಿಲುಕುವ ಎಲ್ಲ ಸಾಧ್ಯತೆ ಇತ್ತು. ಆಗ ಕೇವಲ 17 ರನ್ ಆಗಿತ್ತು. ಆದರೆ, ರಾಹುಲ್ ತ್ರಿಪಾಠಿ (41) ಮತ್ತು ನಾಯಕ ಇಯಾನ್ ಮಾರ್ಗನ್ ಸೇರಿಕೊಂಡು ಬಹಳ ಎಚ್ಚರಿಕೆಯಿಂದ ಆಟ ಆಡಿ ಪರಿಸ್ಥಿತಿ ನಿಭಾಯಿಸಿದರು. 4ನೇ ವಿಕೆಟ್ಗೆ 66 ರನ್ ಒಟ್ಟುಗೂಡಿಸಿ ತಂಡಕ್ಕೆ ಶಕ್ತಿ ತುಂಬಿದರು.
ಇನ್ನು 6 ಓವರ್‌ಗಳಲ್ಲಿ ಪಂಜಾಬ್ ಒಂದು ವಿಕೆಟ್ಗೆ ಕೇವಲ 37 ರನ್ ಮಾಡಿತ್ತು. 20 ಎಸೆತಗಳಿಂದ 19 ರನ್ ಮಾಡಿದ ರಾಹುಲ್ ನಿರ್ಗಮಿಸಿದರು.