ಚಂಡೀಗಢ: ಬಾಲಿವುಡ್ನ ಹಿರಿಯ ನಟಿ, ಭಾರತೀಯ ಜನತಾ ಪಾರ್ಟಿಯ ಚಂಡೀಗಢ ಕ್ಷೇತ್ರದ ಸಂಸದೆ ಕಿರಣ್ ಖೇರ್ ಅವರಿಗೆ ಬ್ಲಡ್ ಕ್ಯಾನ್ಸರ್ ಇರುವುದು ಗೊತ್ತಾಗಿದೆ. ಇದಕ್ಕೆ ಸಂಬಂಧಿಸಿದಂತೆ ಅವರ ಪತಿ ಅನುಪಮ್ ಖೇರ್ ಟ್ವೀಟ್ ಮಾಡಿ ತಿಳಿಸಿದ್ದಾರೆ.
ಬ್ಲಡ್ ಕ್ಯಾನ್ಸರ್ನಿಂದ ಬಳಲುತ್ತಿರುವ ಬಿಜೆಪಿ ಸಂಸದೆ ಕಿರಣ್ ಖೇರ್ - ಸಂಸದೆ ಕಿರಣ್ ಖೇರ್
ಬಾಲಿವುಡ್ನ ಬಹುಬೇಡಿಕೆಯ ಪೋಷಕ ನಟಿ ಕಿರಣ್ ಖೇರ್ ರಕ್ತದ ಕ್ಯಾನ್ಸರ್ನಿಂದ ಬಳಲುತ್ತಿದ್ದಾರೆ. ಸದ್ಯ ಅವರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ದೊರೆತಿದೆ.
Kirron Kher
ಇದನ್ನೂ ಓದಿ: ಸಖತ್ ಸೌಂಡ್ ಮಾಡ್ತಿದೆ ಬಾಲಿವುಡ್ ಬೆಡಗಿ ತಾರಾ ಸುತಾರಿಯಾ ಲೆಹೆಂಗಾ ಫೋಟೋ: ವಿಡಿಯೋ
ಮುಂಬೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಅವರಿಗೆ ಈಗಾಗಲೇ ಕಿಮೋಥೆರಪಿ ಚಿಕಿತ್ಸೆ ನಡೆಯುತ್ತಿದೆ. ಆದರೆ, ಕಳೆದ ವರ್ಷದಿಂದಲೇ ಅವರು ಕ್ಯಾನ್ಸರ್ಗೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ. 2014ರಲ್ಲಿ ರಾಜಕೀಯ ಜೀವನಕ್ಕೆ ಕಾಲಿಟ್ಟಿರುವ ಕಿರಣ್ ಎರಡು ಸಲ ಬಿಜೆಪಿಯಿಂದ ಸಂಸದೆಯಾಗಿ ಆಯ್ಕೆಯಾಗಿದ್ದಾರೆ.