ವಿಶಾಖಪಟ್ಟಣಂ (ಆಂಧ್ರಪ್ರದೇಶ): ಇಲ್ಲಿನ ವಿಶಾಖ ಕೆಜಿಎಚ್ ಆಸ್ಪತ್ರೆಯ ಸಿಎಸ್‌ಆರ್ ಬ್ಲಾಕ್‌ನಿಂದ ಕೆಳಗೆ ಜಿಗಿಯಲು ಯತ್ನಿಸಿದ ಕೋವಿಡ್ ಸೋಂಕಿತಳನ್ನು ವೈದ್ಯಕೀಯ ಸಿಬ್ಬಂದಿ ರಕ್ಷಿಸಿದ್ದಾರೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಮಹಿಳೆ ಆತ್ಮಹತ್ಯೆಗೆ ಯತ್ನಿಸುತ್ತಿರುವುದನ್ನು ಗಮನಿಸಿದ ಸಿಬ್ಬಂದಿ ಕೂಡಲೇ ಕಾರ್ಯಪ್ರವೃತ್ತರಾಗಿ ಆಕೆಯನ್ನು ರಕ್ಷಿಸಿದ್ದಾರೆ.
ಕಳೆದ ಹಲವು ದಿನಗಳಿಂದ ಸಂತ್ರಸ್ತೆ ತನ್ನ ಕುಟುಂಬದಿಂದ ದೂರವಿದ್ದಾಳೆ. ಹೀಗಾಗಿ ತನ್ನನ್ನು ಮನೆಗೆ ಸ್ಥಳಾಂತರಿಸಲು ವೈದ್ಯರನ್ನು ಕೇಳಿಕೊಂಡಿದ್ದಾಳೆ. ಆದರೆ ಆಕೆ ಚೇತರಿಸಿಕೊಳ್ಳದ ಕಾರಣ ವೈದ್ಯರು ಬುದ್ದಿ ಹೇಳಿ ಕಳುಹಿಸಿದ್ದಾರೆ. ಇದಕ್ಕೆ ನೊಂದ ಮಹಿಳೆ ಚಿಕಿತ್ಸೆ ಪಡೆಯುತ್ತಿದ್ದ ಕೋಣೆಯ ಕಿಟಕಿ ಬಳಿ ಹೋಗಿ ನೆಗೆಯುವುದಕ್ಕೆ ಯತ್ನಿಸಿದ್ದಾಳೆ. ಪಕ್ಕದಲ್ಲೇ ಇದ್ದ ಮತ್ತೊಬ್ಬ ಕೋವಿಡ್ ರೋಗಿ ಗಮನಿಸಿ ಕಿರುಚಾಡಿದ್ದಾನೆ. ಕೂಡಲೇ ಎಚ್ಚೆತ್ತ ಸಿಬ್ಬಂದಿ ಆಕೆಯನ್ನು ತಡೆದಿದ್ದಾರೆ.
ಆಸ್ಪತ್ರೆಯಿಂದ ಜಿಗಿಯಲು ಯತ್ನಿಸಿದ ಕೊರೊನಾ ಸೋಂಕಿತೆ ಈ ಬ್ಲಾಕ್‌ನಲ್ಲಿ ಈಗಾಗಲೇ ನಾಲ್ವರು ರೋಗಿಗಳು ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಆಸ್ಪತ್ರೆ ಸಿಬ್ಬಂದಿ ಈ ವಿಷಯವನ್ನು ಬಹಿರಂಗಪಡಿಸಿಲ್ಲ. ಸಿಸಿಟಿವಿ ದೃಶ್ಯಾವಳಿಗಳು ಹೊರಬಂದಾಗ ಈ ವಿಷಯ ಬೆಳಕಿಗೆ ಬಂದಿದೆ.