ತಿರುವನಂತಪುರಂ(ಕೇರಳ):ದೇಶದಲ್ಲಿ ಮಾರಣಾಂತಿಕ ಕೊರೊನಾ ರಣಕೇಕೆ ಹಾಕುತ್ತಿದ್ದ ವೇಳೆ ಕೇರಳದಲ್ಲಿ ಅದನ್ನು ಸಮರ್ಥವಾಗಿ ತಡೆಯಲಾಗಿತ್ತು. ಇದರ ಹಿಂದೆ ಅಂದಿನ ಆರೋಗ್ಯ ಸಚಿವೆ ಕೆಕೆ ಶೈಲಜಾ ಅವರ ಶ್ರಮ ಹೆಚ್ಚಿತ್ತು. ಅದೇ ವೇಳೆ ಪಿಪಿಇ ಕಿಟ್ ಮತ್ತು ಇತರೆ ವೈದ್ಯಕೀಯ ಉಪಕರಣ ಖರೀದಿಯಲ್ಲಿ ಅಕ್ರಮ ನಡೆದಿದೆ ಎಂದು ವಿಪಕ್ಷ ಕಾಂಗ್ರೆಸ್ ಆರೋಪಿಸಿದ್ದು, ಮಾಜಿ ಸಚಿವೆಗೆ ಲೋಕಾಯುಕ್ತದಿಂದ ನೋಟಿಸ್ ಜಾರಿ ಮಾಡಿ ತನಿಖೆಗೆ ಸೂಚಿಸಲಾಗಿದೆ.
2020 ರಲ್ಲಿ ಮಾಡಿ ಖರೀದಿಗಳಲ್ಲಿ ಮಾಜಿ ಸಚಿವೆ ಕಿಕ್ಬ್ಯಾಕ್ ಪಡೆದಿದ್ದಾರೆ. ಪಿಪಿಇ ಕಿಟ್ಗಳನ್ನು ಪ್ರತಿ ಯೂನಿಟ್ಗೆ 1500 ಕ್ಕೂ ಅಧಿಕ ಹಣ ನೀಡಿ ಖರೀದಿ ಮಾಡಲಾಗಿದೆ. ಇದು ಮಾರುಕಟ್ಟೆ ದರಕ್ಕಿಂತಲೂ ಹೆಚ್ಚು. ಇದರಲ್ಲಿ ಅಕ್ರಮ ನಡೆದಿದೆ ಎಂದು ಕಾಂಗ್ರೆಸ್ ಆರೋಪಿಸಿ ಲೋಕಾಯುಕ್ತಕ್ಕೆ ದೂರು ನೀಡಿತ್ತು. ಈ ದೂರಿನ ಅನ್ವಯ ಸಿಪಿಐ(ಎಂ) ನಾಯಕಿಗೆ ಸಮನ್ಸ್ ಜಾರಿ ಮಾಡಲಾಗಿತ್ತು.