ತಿರುವನಂತಪುರಂ(ಕೇರಳ): ರಾಜ್ಯಪಾಲ ಆರಿಫ್ ಮೊಹಮದ್ ಖಾನ್ ಮತ್ತು ಕೇರಳ ಸರ್ಕಾರದ ನಡುವಿನ ತಿಕ್ಕಾಟ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಈ ಮಧ್ಯೆಯೇ ಸರ್ಕಾರ ರಾಜ್ಯಪಾಲರ ಸಂಚಾರಕ್ಕಾಗಿ ಮರ್ಸಿಡಿಸ್ ಬೆಂಜ್ ಕಾರು ಖರೀದಿಗೆ 85 ಲಕ್ಷ ರೂಪಾಯಿ ಹಣವನ್ನು ನೀಡಲು ಅನುಮೋದಿಸಲಾಗಿದೆ.
ಈಗಿರುವ ಕಾರು 1.5 ಲಕ್ಷ ಕಿಲೋಮೀಟರ್ಗೊಂತಲೂ ಹೆಚ್ಚು ಸಂಚರಿಸಿದೆ. ಅದಕ್ಕಾಗಿಯೇ ಹೊಸ ಕಾರು ಖರೀದಿಗೆ ಇಷ್ಟು ದೊಡ್ಡ ಮೊತ್ತವನ್ನು ಸರ್ಕಾರ ಮಂಜೂರು ಮಾಡಿದೆ. ಅಲ್ಲದೇ ರಾಜಭವನ ಹೊಸ ಕಾರನ್ನು ಬುಕ್ ಮಾಡಿದೆ ಎಂದು ಮೂಲಗಳು ತಿಳಿಸಿವೆ.
ಪ್ರಸ್ತುತ ರಾಜ್ಯಪಾಲರು ಬಳಸುತ್ತಿರುವ ಕಾರನ್ನು ಎಂಒಎಚ್ ಫಾರೂಕ್ ಅವರು ರಾಜ್ಯಪಾಲರಾಗಿದ್ದಾಗ ಖರೀದಿಸಲಾಗಿತ್ತು. ಕಾರು 1 ಲಕ್ಷ ಕಿಲೋಮೀಟರ್ ದಾಟಿದ್ದು, ತಪಾಸಣೆ ನಡೆಸಿದ ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಕಾರು ಬದಲಿಸುವಂತೆ ಸರ್ಕಾರಕ್ಕೆ ಸೂಚಿಸಿದ್ದರು.
ಪಿ.ಸದಾಶಿವಂ ಅವರು ರಾಜ್ಯಪಾಲರಾಗಿದ್ದಾಗ ಹೊಸ ಕಾರು ಖರೀದಿಗೆ ಪ್ರಯತ್ನಗಳು ನಡೆದಿದ್ದವು. ಆದರೆ, ಸರ್ಕಾರ ಹಣ ಮಂಜೂರು ಮಾಡಿರಲಿಲ್ಲ. 2 ವರ್ಷಗಳ ಹಿಂದೆ ಆರಿಫ್ ಮೊಹಮ್ಮದ್ ಖಾನ್ ಅವರು ಅಧಿಕಾರ ವಹಿಸಿಕೊಂಡಾಗ ಹೊಸ ಕಾರು ಖರೀದಿಗೆ ಸರ್ಕಾರಕ್ಕೆ ಶಿಫಾರಸು ಮಾಡಿದ್ದರು. ಇದೀಗ ಸರ್ಕಾರ ಒಪ್ಪಿಗೆ ಸೂಚಿಸಿದೆ.
ಇದನ್ನೂ ಓದಿ:Photos: ಆಕರ್ಷಕ ಉಡುಪಿನಲ್ಲಿ ಗಮನ ಸಳೆಯುವ ಅಧಿಕಾರಿಣಿ ರೀನಾ ದ್ವಿವೇದಿ