ಕರ್ನಾಟಕ

karnataka

ETV Bharat / bharat

5 ಖಂಡ, 76 ದೇಶಗಳಿಗೆ ಭೇಟಿ ನೀಡಿದ ಕರುನಾಡ ದಂಪತಿ: ರೈನ್‌ಬೋ ಪರ್ವತದಲ್ಲಿ ಹಾರಿದ ಕನ್ನಡ ಬಾವುಟ

ಪ್ರತಿಯೊಬ್ಬರಿಗೂ ಒಂದೊಂದು ರೀತಿಯ ಬಯಕೆಗಳು ಇದ್ದೇ ಇರುತ್ತದೆ. ಹಲವರಿಗೆ ಹಣಗಳಿಸುವ ಆಸೆಯಿದ್ದರೆ ಕೆಲವರಿಗೆ ಸಮಾಜದಲ್ಲಿ ಒಳ್ಳೆಯ ಹೆಸರು ಗಳಿಸುವುದು ಬದುಕಿನ ಗುರಿ. ಹೀಗೆ ಭಿನ್ನ-ವಿಭಿನ್ನವಾದ ಕನಸುಗಳು ಸಹಜವೇ. ಆದರೆ, ಬೆಂಗಳೂರಿನ ಈ ದಂಪತಿಯ ಹವ್ಯಾಸ ಮತ್ತು ಆಸೆಯನ್ನು ನೀವು ಕೇಳಿದ್ರೆ ನೀವು ಒಮ್ಮೆಲೇ ಅಬ್ಬಾ! ಎನ್ನುತ್ತೀರಾ.

By

Published : Jul 31, 2022, 1:27 PM IST

Kannadiga couple Flying passport YouTube channel
76 ದೇಶಗಳಿಗೆ ಭೇಟಿ ನೀಡಿದ ಕರುನಾಡಿದ ದಂಪತಿ

ಜಗತ್ತಿನಲ್ಲಿ ವಿಭಿನ್ನ ರೀತಿಯ ಜನರಿದ್ದಾರೆ. ಅವರ ಆಸೆ, ಆಕಾಂಕ್ಷೆಗಳು ಬೇರೆ ಬೇರೆ. ಹೆಚ್ಚು ಸಂಬಳ ಬರಲಿ, ಐಷಾರಾಮಿ ಜೀವನವಿರಲೆಂಬ ಕನಸಿನ ಹಿಂದೆ ಓಡುವವರುಂಟು. ಕೆಲವರಿಗೆ ಪುಸ್ತಕ ಓದುವ ಅದಮ್ಯ ಉತ್ಸಾಹವಾದ್ರೆ, ಇನ್ನೂ ಕೆಲವರಿಗೆ ಸಂಗೀತ, ಮತ್ತೆ ಕೆಲವರಿಗೆ ಕಲೆ, ಕ್ರೀಡೆ.. ಹೀಗೆ ಮನುಷ್ಯನಿಗೆ ಆತ ಇಷ್ಟಪಡುವ ಹವ್ಯಾಸಗಳಿರುತ್ತವೆ. ಅದೇನೇ ಇರಲಿ, ಆದ್ರೆ ನಾವೀಗ ಹೇಳಹೊರಟಿರುವುದು ನಮ್ಮ ರಾಜ್ಯದವರೇ ಆದ ಅನ್ಯೋನ್ಯ ದಂಪತಿಯ ಸ್ಟೋರಿ.

ಹೌದು, ಬೆಂಗಳೂರಿನ ಆಶಾ ಮತ್ತು ಕಿರಣ್ ದಂಪತಿಗೆ ಪ್ರವಾಸ ಎಂದರೆ ಅಚ್ಚುಮೆಚ್ಚು. ಪ್ರಪಂಚವನ್ನು ಅನ್ವೇಷಿಸುವುದು, ವಿವಿಧ ದೇಶದ ಆಕರ್ಷಕ ಪ್ರವಾಸಿ ತಾಣಗಳು, ಅಲ್ಲಿನ ಕಲೆ, ಸಾಹಿತ್ಯ, ಹೊಸ ಹೊಸ ಸಮುದಾಯವನ್ನು ಕಣ್ತುಂಬಿಕೊಳ್ಳುವುದು ಇವರ ಕನಸು. ಜರ್ಮನಿಯಲ್ಲಿ ಮಾಸ್ಟರ್ಸ್ ಮುಂದುವರಿಸಲು ಯೋಚಿಸಿರುವ ಈ ಪತಿ-ಪತ್ನಿ, ಸದ್ಯಕ್ಕೆ ವೃತ್ತಿಜೀವನದಿಂದ ಕೊಂಚ ವಿರಾಮ ತೆಗೆದುಕೊಂಡು, ತಮ್ಮ ಕನಸಿನತ್ತ ಸಾಗುತ್ತಿದ್ದಾರೆ.

ಇಲ್ಲಿಯವರೆಗೆ ಇವರಿಬ್ಬರು ಜಗತ್ತಿನ 5 ಖಂಡಗಳಿಗೆ ಪ್ರಯಾಣಿಸಿದ್ದು, ಉತ್ತರ ಅಮೆರಿಕದಿಂದ ಹಿಡಿದು ಆಫ್ರಿಕಾದ ಸಹಾರಾ ಮರುಭೂಮಿ ಸೇರಿದಂತೆ 76 ದೇಶಗಳಿಗೆ ಭೇಟಿ ನೀಡಿದ್ದಾರೆ. ಪ್ರತಿನಿತ್ಯ ಹೊಸ ಸ್ಥಳ, ವಿಚಾರಗಳನ್ನು ಹುಡುಕಿ ಸಾಗುವ ಇವರು ಸಾರ್ವಜನಿಕರಿಗೂ ಉಪಯುಕ್ತ ಮಾಹಿತಿ ನೀಡುತ್ತಿದ್ದಾರೆ.

ಇನ್ನು ಜನರಿಗೆ ತಾವು ಭೇಟಿ ನೀಡುವ ಪ್ರದೇಶಗಳ ಕುರಿತು ವಿವರವಾದ ಮಾಹಿತಿ ನೀಡಲು 'ಪ್ಲೈಯಿಂಗ್​ ಪಾಸ್ಪೋರ್ಟ್' ಎಂಬ ಯೂಟ್ಯೂಟ್‌ ಚಾನೆಲ್‌ ತೆರೆದಿದ್ದಾರೆ. ಇದರಲ್ಲಿ ತಾವು ಭೇಟಿ ನೀಡಿದ ಸ್ಥಳದ ಮಾಹಿತಿ ಮತ್ತು ಅಲ್ಲಿನ ವಾತಾವರಣ ಸೇರಿದಂತೆ ಎಲ್ಲ ರೀತಿಯ ಅನುಭವಗಳನ್ನು ತಪ್ಪದೇ ಶೇರ್​ ಮಾಡುತ್ತಾರೆ. ಕಳೆದ ನಾಲ್ಕು ದಿನಗಳ ಹಿಂದಷ್ಟೇ ಇವರು ಎರಡು ಲೇಟೆಸ್ಟ್‌ ವಿಡಿಯೋಗಳನ್ನು ಹಂಚಿಕೊಂಡಿದ್ದು, ಸಾಕಷ್ಟು ವೀಕ್ಷಣೆಯೂ ದೊರೆತಿದೆ.

ಇತ್ತೀಚೆಗೆ, ಅಮೆಜಾನ್ ಕಾಡಿಗೆ ಭೇಟಿ ನೀಡಿದ ದಂಪತಿ ಅಲ್ಲಿನ ವಿಶಿಷ್ಟ ಪ್ರಾಣಿಗಳ ಕುರಿತಾದ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಇನ್ನೊಂದು ವಿಡಿಯೋದಲ್ಲಿ ವಿಶ್ವದಲ್ಲೇ ಅತ್ಯಂತ ಕಷ್ಟಕರವಾದ ಪೆರುವಿನ ರೈನ್‌ಬೋ ಪರ್ವತ ಹತ್ತಿ ಸೈ ಎನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ರೈನ್‌ಬೋ ಪರ್ವತ ಮೇಲೆ ಕನ್ನಡದ ಬಾವುಟ ಹಾರಿಸುವ ಮೂಲಕ ಕನ್ನಡಿಗರು ಎಲ್ಲದಕ್ಕೂ ಸೈ ಎನ್ನುವುದನ್ನು ತೋರಿಸಿ ಕೊಟ್ಟಿದ್ದಾರೆ.

ಇದನ್ನೂ ಓದಿ:ಒಂದು ವರ್ಷದಲ್ಲಿ ಸಿಎಂ ಮಾಡಿದ್ದು, ಒಂದೇ ವಿದೇಶ ಪ್ರವಾಸ: ಪ್ರಗತಿಗೆ ಸಿಕ್ಕ ಒತ್ತು ಎಷ್ಟು?!

ABOUT THE AUTHOR

...view details