ನವದೆಹಲಿ:ಸುಪ್ರೀಂಕೋರ್ಟ್‌ನ 48ನೇ ಮುಖ್ಯ ನ್ಯಾಯಮೂರ್ತಿಯಾಗಿ ಎನ್.ವಿ. ರಮಣ ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ನೂತನ ಸಿಜೆಐಗೆ ಪ್ರಮಾಣವಚನ ಬೋಧಿಸಿದರು.
ನ್ಯಾಯಮೂರ್ತಿ ಎಸ್ ಎ ಬೋಬ್ಡೆ ಅವರ ಅಧಿಕಾರದ ಅವಧಿಯು ನಿನ್ನೆಗೆ ಮುಕ್ತಾಯವಾಗಿದೆ. ಹೀಗಾಗಿ ಸಿಜೆಐ ಆಗಿ ರಮಣ ಅವರು ಇಂದು ಪದಗ್ರಹಣ ಮಾಡಿದ್ದಾರೆ.
ರಮಣ ಅವರು ದೇಶದ ಅತ್ಯುನ್ನತ ನ್ಯಾಯಪೀಠ ಸುಪ್ರೀಂಕೋರ್ಟ್‌ಗೆ ಮುಖ್ಯ ನ್ಯಾಯಮೂರ್ತಿ ಆಗುತ್ತಿರುವ ಆಂಧ್ರ ಪ್ರದೇಶದ ಎರಡನೇ ವ್ಯಕ್ತಿಯಾಗಿದ್ದಾರೆ. ಈ ಹಿಂದೆ ನ್ಯಾಯಮೂರ್ತಿ ಸುಬ್ಬರಾವ್ ಅವರು ಭಾರತದ 9ನೇ ಸಿಜೆಐ ಆಗಿ ಸೇವೆ ಸಲ್ಲಿಸಿದ್ದರು.
ರಾಷ್ಟ್ರಪತಿ ರಾಮನಾಥ ಅವರು ಕೋವಿಂದ್ ಅವರಿಂದ ಸಿಜೆಐಗೆ ಪ್ರಮಾಣವಚನ ಬೋಧನೆ ಸಂಪ್ರದಾಯದ ಪ್ರಕಾರ ಹಾಲಿ ಸಿಜೆಐ ತಮ್ಮ ಅಧಿಕಾರದ ಅವಧಿ ಇನ್ನೂ 1 ತಿಂಗಳು ಇವರು ಮೊದಲೇ ಮುಂದಿನ ಸಿಜೆಐ ಹೆಸರನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿ ಕೊಡಲಾಗುತ್ತದೆ. ಅದರಂತೆ ಸಿಜೆಐ ಎಸ್ ಎ ಬೋಬ್ಡೆ ಅವರು ಮಾರ್ಚ್ 24ರಂದು ಸುಪ್ರೀಂಕೋರ್ಟ್‌ನ ಅತ್ಯಂತ ಹಿರಿಯ ನ್ಯಾಯಮೂರ್ತಿಯಾಗಿದ್ದ ಎನ್ ವಿ ರಮಣ ಅವರ ಹೆಸರನ್ನು ಕೇಂದ್ರಕ್ಕೆ ಶಿಫಾರಸು ಮಾಡಿದ್ದರು. ನ್ಯಾ.ರಮಣ ಅವರು 2022ರ ಆಗಸ್ಟ್ 26ರವರೆಗೆ ಸಿಜೆಐ ಆಗಿ ಸೇವೆ ಸಲ್ಲಿಸಲಿದ್ದಾರೆ.
ಇದನ್ನೂ ಓದಿ:ದೆಹಲಿಯಲ್ಲಿ ಆಕ್ಸಿಜನ್ ಕೊರತೆಯಿಂದ 20 ರೋಗಿಗಳು ಸಾವು: ಅಪಾಯದಲ್ಲಿವೆ 200 ಜೀವಗಳು!