ಕರ್ನಾಟಕ

karnataka

ETV Bharat / bharat

SSC Recruitment: ಜೆಇ ಹುದ್ದೆಗಳಿಗೆ ಅರ್ಜಿ ಆಹ್ವಾನ; ಆಗಸ್ಟ್​​ 16 ಅರ್ಜಿ ಸಲ್ಲಿಕೆಗೆ ಕಡೆಯ ದಿನ - ಸಿಬ್ಬಂದಿ ನೇಮಕಾತಿ ಆಯೋಗ

Junior Engineer Recruitment-2023: ಕೇಂದ್ರ ಸರ್ಕಾರದ ವಿವಿಧ ವಲಯಗಳಲ್ಲಿ ಖಾಲಿ ಇರುವ ಜ್ಯೂನಿಯರ್​ ಇಂಜಿನಿಯರ್​​ ಹುದ್ದೆಗಳ ಭರ್ತಿಗೆ ಎಸ್​ಎಸ್​ಸಿ ಅಧಿಸೂಚನೆ ಹೊರಡಿಸಿದೆ.

junior Engineer Recruitment 2023 form SSC here is the latest notification
junior Engineer Recruitment 2023 form SSC here is the latest notification

By

Published : Jul 27, 2023, 12:22 PM IST

ಜ್ಯೂನಿಯರ್​ ಇಂಜಿನಿಯರ್​ ನೇಮಕಾತಿಗೆ ಅಧಿಸೂಚನೆ ಎದುರು ನೋಡುತ್ತಿದ್ದ ಅಭ್ಯರ್ಥಿಗಳಿಗೆ ಕಡೆಗೂ ಸಿಬ್ಬಂದಿ ನೇಮಕಾತಿ ಆಯೋಗ (SSC) ಸಿಹಿ ಸುದ್ದಿ ನೀಡಿದೆ. ಆಯೋಗವು 1,324 ಜೆಇ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಸಿವಿಲ್​ ಮತ್ತು ಮೆಕ್ಯಾನಿಕಲ್​ ಹಾಗೂ ಎಲೆಕ್ಟ್ರಾನಿಕ್​ ಇಂಜಿನಿಯರಿಂಗ್​ ಅಥವಾ ಡಿಪ್ಲೊಮಾ ಪದವೀಧರರು ಅರ್ಜಿ ಸಲ್ಲಿಸಬಹುದು. ಭಾರತಾದ್ಯಂತ ನೇಮಕಾತಿ ನಡೆಯಲಿದೆ.

ಹುದ್ದೆಗಳ ವಿವರ: ಬಾರ್ಡರ್​ ರೋಡ್ಸ್​ ಆರ್ಗನೈಸೇಷನ್​ನಲ್ಲಿ 486, ಸೆಂಟ್ರಲ್​ ಪಬ್ಲಿಕ್​ ವರ್ಕ್ಸ್​ ಡಿಪಾರ್ಟ್​​ಮೆಂಟ್​ನಲ್ಲಿ 545, ಸೆಂಟ್ರಲ್​ ವಾಟರ್​ ಕಮಿಷನ್​ 211, ಫರಕ್ಕಾ ಬ್ಯಾರೇಜ್​ ಪ್ರಾಜೆಕ್ಟ್​​ 21, ಮಿಲಿಟರಿ ಇಂಜಿನಿಯರ್​​ ಸರ್ವೀಸ್​ 65, ಬಂದರು ಸಚಿವಾಲಯ 8, ನ್ಯಾಷನಲ್​ ಟೆಕ್ನಿಕಲ್​ ರಿಸರ್ಚ್​​ ಆರ್ಗನೈಸೆಷನ್​ 6 ಹುದ್ದೆಗಳಿವೆ.

ವಿದ್ಯಾರ್ಹತೆ: ಅಂಗೀಕೃತ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಬಿಇ ಅಥವಾ ಬಿ.ಟೆಕ್​ ಅಥವಾ ಡಿಪ್ಲೊಮಾ ಇಂಜಿನಿಯರಿಂಗ್​ ಪದವಿ ಪೂರ್ಣಗೊಳಿಸಿರಬೇಕು.

ಅಧಿಸೂಚನೆ

ವಯೋಮಿತಿ: ಕನಿಷ್ಠ ವಯೋಮಿತಿ 18. ಗರಿಷ್ಠ 32 ವರ್ಷ. ಒಬಿಸಿ ಅಭ್ಯರ್ಥಿಗಳು 3 ವರ್ಷ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ವಿಶೇಷಚೇತನ ಅಭ್ಯರ್ಥಿಗಳಿಗೆ 5ರಿಂದ 10 ವರ್ಷ ವಯೋಮಿತಿ ಸಡಿಲಿಕೆ ಇದೆ.

ವೇತನ: ಮಾಸಿಕ 35,400 ರೂ.ನಿಂದ 1,12,400 ರೂಪಾಯಿ.

ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದು. ಎಸ್​ಸಿ, ಎಸ್​ಟಿ, ವಿಶೇಷಚೇತನ ಮತ್ತು ನಿವೃತ್ತ ಸೇವಾಧಿಕಾರಿ ಹಾಗೂ ಮಹಿಳಾ ಅಭ್ಯರ್ಥಿಗಳು ಅರ್ಜಿ ಶುಲ್ಕ ಪಾವತಿಸುವಂತಿಲ್ಲ. ಉಳಿದ ಅಭ್ಯರ್ಥಿಗಳು 100 ರೂ ಅರ್ಜಿ ಶುಲ್ಕ ಪಾವತಿಸಬೇಕು.

ಆಯ್ಕೆ ಪ್ರಕ್ರಿಯೆ: ಕಂಪ್ಯೂಟರ್​ ಆಧಾರಿತ ಪರೀಕ್ಷೆ ನಡೆಸಿ ಆಯ್ಕೆ ನಡೆಯಲಿದೆ. ಇದರಲ್ಲಿ ಎರಡು ಪತ್ರಿಕೆಗಳಿರಲಿದ್ದು, ಮೊದಲ ಪತ್ರಿಕೆಯಲ್ಲಿ ಸಾಮಾನ್ಯ ಜ್ಞಾನ ಮತ್ತು ಬುದ್ದಿ ಮಟ್ಟ ಪರೀಕ್ಷೆ ನಡೆಯಲಿದೆ. ಎರಡನೇ ಪತ್ರಿಕೆ ನಿರ್ದಿಷ್ಟ ಪರೀಕ್ಷೆ. ಅಂತಿಮ ಹಂತದಲ್ಲಿ ಸಂದರ್ಶನ ನಡೆಯಲಿದೆ.

ಜುಲೈ 26ರಿಂದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಆಗಸ್ಟ್​​ 16. ಅರ್ಜಿ ಶುಲ್ಕ ಪಾವತಿಗೆ ಕಡೆಯ ದಿನಾಂಕ ಆಗಸ್ಟ್​​ 16. ಸಂಪೂರ್ಣ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು ssc.nic.in ಜಾಲತಾಣಕ್ಕೆ ಭೇಟಿ ನೀಡಿ.

ಇದನ್ನೂ ಓದಿ: Job Alert: ಯಾದಗಿರಿ ಜಿಲ್ಲಾ ಆರೋಗ್ಯ, ಕುಟುಂಬ ಕಲ್ಯಾಣ ಇಲಾಖೆಯಲ್ಲಿ ನೇಮಕಾತಿ

ABOUT THE AUTHOR

...view details