ಕರ್ನಾಟಕ

karnataka

ETV Bharat / bharat

'ಇರಾನಿ ಗ್ಯಾಂಗ್' ಬಗ್ಗೆ ಜಾರ್ಖಂಡ್ ಪೊಲೀಸರಿಗೆ ಎಚ್ಚರಿಸಿದ ಯುಪಿ ಆರಕ್ಷಕರು - ಜಾರ್ಖಂಡ್​ನಲ್ಲಿ ಇರಾನಿ ಗ್ಯಾಂಗ್

ಉತ್ತರ ಪ್ರದೇಶದಲ್ಲಿ ಸಕ್ರಿಯವಾಗಿದ್ದ 'ಇರಾನಿ ಗ್ಯಾಂಗ್' ಹೆಸರಿನ ತಂಡವೊಂದರ ಬಗ್ಗೆ ಉತ್ತರ ಪ್ರದೇಶ ಪೊಲೀಸರು ಜಾರ್ಖಂಡ್ ಪೊಲೀಸರನ್ನು ಎಚ್ಚರಿಸಿದ್ದಾರೆ.

police alerted about 'Irani gang'
'ಇರಾನಿ ಗ್ಯಾಂಗ್' ಬಗ್ಗೆ ಜಾರ್ಖಂಡ್ ಪೊಲೀಸರಿಗೆ ಎಚ್ಚರಿಸಿದ ಯುಪಿ ಆರಕ್ಷಕರು

By

Published : May 13, 2022, 5:09 PM IST

ಪಲಾಮು​​ (ಜಾರ್ಖಂಡ್): ಕಳೆದ ತಿಂಗಳು ಉತ್ತರ ಪ್ರದೇಶದಲ್ಲಿ ಸಕ್ರಿಯವಾಗಿದ್ದ 'ಇರಾನಿ ಗ್ಯಾಂಗ್' ಹೆಸರಿನ ತಂಡವೊಂದರ ಬಗ್ಗೆ ಉತ್ತರ ಪ್ರದೇಶ ಪೊಲೀಸರು ಜಾರ್ಖಂಡ್ ಪೊಲೀಸರನ್ನು ಎಚ್ಚರಿಸಿದ್ದಾರೆ. ಕ್ರಿಮಿನಲ್‌ಗಳು ಪೊಲೀಸರಂತೆ ನಟಿಸಿ ಅಪರಾಧಗಳನ್ನು ನಡೆಸುತ್ತಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.

ಇರಾನಿ ಗ್ಯಾಂಗ್​ನ ನಾಲ್ವರು ಬಂಧಿತರು ಬಹಿರಂಗಪಡಿಸಿದ ಕೆಲ ಮಾಹಿತಿಯ ಆಧಾರದ ಮೇಲೆ, ಈ ಗ್ಯಾಂಗ್‌ನೊಂದಿಗೆ ಸಂಬಂಧ ಹೊಂದಿರುವ ಅಪರಾಧಿ (ಸದ್ಯ ಜಾರ್ಖಂಡ್​ನಲ್ಲಿ ಸಕ್ರಿಯರಾಗಿರುವ ಆರೋಪಿ) ಗಳ ಬಗ್ಗೆ ವಾರಾಣಸಿ ಪೊಲೀಸ್ ಕಮಿಷನರ್ ಅವರು 12 ಪುಟಗಳ ಪತ್ರವನ್ನು ಪಲಾಮು ಪೊಲೀಸರಿಗೆ ಕಳುಹಿಸಿದ್ದಾರೆನ್ನುವ ಮಾಹಿತಿಯಿದೆ.

ಇರಾನಿ ಗ್ಯಾಂಗ್ ಕಳೆದ 15 ವರ್ಷಗಳಿಂದ ಭಾರತದ ವಿವಿಧ ಪ್ರದೇಶಗಳಲ್ಲಿ ಸಂಚರಿಸುತ್ತಿದೆ ಮತ್ತು ಅಪರಾಧ ಚಟುವಟಿಕೆಗಳನ್ನು ನಡೆಸುತ್ತಿದೆ. ಗ್ಯಾಂಗ್‌ನಲ್ಲಿ ಏಳೆಂಟು ಮಂದಿ ಕ್ರಿಮಿನಲ್‌ಗಳಿದ್ದಾರೆ. ಘಟನೆಯನ್ನು ನಡೆಸುವ ಮೊದಲು ಅವರು ನಗರದ ಬಗ್ಗೆ ಸಂಪೂರ್ಣ ಮಾಹಿತಿ ಕಲೆಹಾಕುತ್ತಾರೆ. ಕೃತ್ಯ ನಡೆಸಿದ ಕೆಲವೇ ಗಂಟೆಗಳಲ್ಲಿ ನಗರದಿಂದ ಪರಾರಿಯಾಗುತ್ತಾರೆ. ಗ್ಯಾಂಗ್‌ನಲ್ಲಿ ಭಾಗಿಯಾಗಿರುವ ಎಲ್ಲ ಕ್ರಿಮಿನಲ್‌ಗಳು ಪರಸ್ಪರ ಸಂಬಂಧ ಹೊಂದಿದ್ದಾರೆ. ಈ ಗ್ಯಾಂಗ್ ದರೋಡೆ ಮತ್ತು ವಂಚನೆಯಲ್ಲಿ ತೊಡಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ:ಮನೆಯಲ್ಲಿ ಮಲಗಿದ್ದ ವ್ಯಕ್ತಿ ಮೇಲೆ ಕೊಡಲಿಯಿಂದ ಹಲ್ಲೆ.. ಸಿಸಿಟಿವಿಯಲ್ಲಿ ಭೀಕರ ವಿಡಿಯೋ ಸೆರೆ

ಪಲಾಮು ಎಸ್ಪಿ ಚಂದನ್ ಕುಮಾರ್ ಸಿನ್ಹಾ ಇರಾನಿ ಗ್ಯಾಂಗ್ ಬಗ್ಗೆ ನಮ್ಮ ಪೊಲೀಸರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಹೇಳಿದ್ದಾರೆ. ಈ ಗ್ಯಾಂಗ್ ಪ್ರಸ್ತುತ ಜಾರ್ಖಂಡ್ ಮತ್ತು ಬಿಹಾರದ ಹಲವು ಪ್ರದೇಶಗಳಲ್ಲಿ ಸಕ್ರಿಯವಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ನಿನ್ನೆಯಷ್ಟೇ ಜಾರ್ಖಂಡ್​ ಪೊಲೀಸರು ಇರಾನಿ ಗ್ಯಾಂಗ್​ನ ನಾಲ್ವರು ಬಂಧಿಸಿದ್ದರು.

ABOUT THE AUTHOR

...view details