ರಾಂಚಿ: ಕೋವಿಡ್ ಅಲೆ ಹೆಚ್ಚಾಗುತ್ತಿರುವ ಕಾರಣ ಜಾರ್ಖಂಡ್ನಲ್ಲಿ 8 ದಿನಗಳ ಕಾಲ ಲಾಕ್ಡೌನ್ ಘೋಷಣೆ ಮಾಡಲಾಗಿತ್ತು. ಇದೀಗ ರಾಜ್ಯದಲ್ಲಿ ಉಚಿತ ವ್ಯಾಕ್ಸಿನೇಷನ್ ನೀಡಲು ಸರ್ಕಾರ ನಿರ್ಧರಿಸಿದೆ.
18ರಿಂದ 45 ವರ್ಷದೊಳಗಿನ ಜನರಿಗೆ ಸರ್ಕಾರ ಉಚಿತ ಲಸಿಕೆ ನೀಡಲಿದೆ. 1 ಕೋಟಿ 57 ಲಕ್ಷ ಜನರಿಗೆ ಇದರ ಸೌಲಭ್ಯ ಸಿಗಲಿದೆ. ಈ ಅಭಿಯಾನವನ್ನು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಹೇಮಂತ್ ಸೊರೆನ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.