ಕರ್ನಾಟಕ

karnataka

ಮಾರ್ಕೆಟ್​ ಮಧ್ಯದಲ್ಲಿ ಜೆಡಿಯು ನಾಯಕನನ್ನು ಗುಂಡುಕ್ಕಿ ಕೊಂದ ಹಂತಕರು

ಕಳೆದ ರಾತ್ರಿ ಬರಾರಿ ಮಾರ್ಕೆಟ್​ನಲ್ಲಿ ಗುಂಡಿನ ಸದ್ದು ಮೊಳಗಿದೆ. ಜನ ನೋಡು ನೋಡುತ್ತಿದ್ದಂತೆ ಜೆಡಿಯು ನಾಯಕನ ಮೇಲೆ ಗುಂಡು ಹಾರಿಸಿ ಕೊಲೆ ಮಾಡಲಾಗಿರುವ ಘಟನೆ ಬಿಹಾರದ ಕತಿಹಾರ್​ನಲ್ಲಿ ನಡೆದಿದೆ.

By

Published : Apr 28, 2023, 10:05 AM IST

Published : Apr 28, 2023, 10:05 AM IST

Katihar Crime New  JDU leader shot dead in Katihar  firing in katihar  JDU leader murdered in Katihar  ಜೆಡಿಯು ನಾಯಕನನ್ನು ಗುಂಡುಕ್ಕಿ ಕೊಂದ ಹಂತಕರು  ಮಾರ್ಕೆಟ್​ನಲ್ಲಿ ಗುಂಡಿನ ಸದ್ದು  ಸ್ಥಳೀಯ ಜೆಡಿಯು ನಾಯಕನನ್ನು ಗುಂಡಿಕ್ಕಿ ಹತ್ಯೆ  ಗುಂಡೇಟಿನಿಂದ ಕುಸಿದು ಬಿದ್ದಿದ್ದ ಜೆಡಿಯು ಮುಖಂಡ  ಜೆಡಿಯು ಮುಖಂಡ ಕೈಲಾಶ್ ಮಹತೋ
ಮಾರ್ಕೆಟ್​ ಮಧ್ಯೆದಲ್ಲಿ ಜೆಡಿಯು ನಾಯಕನನ್ನು ಗುಂಡುಕ್ಕಿ ಕೊಂದ ಹಂತಕರು

ಕತಿಹಾರ್:ಬಿಹಾರದ ಕತಿಹಾರ್‌ನಲ್ಲಿ ಸ್ಥಳೀಯ ಜೆಡಿಯು ನಾಯಕನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಗುರುವಾರ ಸಂಜೆ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಜಿಲ್ಲೆಯ ಬರಾರಿ ಪೊಲೀಸ್ ಠಾಣೆ ವ್ಯಾಪ್ತಿಯ ಬರಾರಿ ಬಜಾರ್‌ನಲ್ಲಿ ಜೆಡಿಯು ಮುಖಂಡ ಕೈಲಾಶ್ ಮಹತೋ ಮೇಲೆ ಗುಂಡು ಹಾರಿಸಿ ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ.

ಹೌದು, ಕಳೆದ ದಿನ ಜೆಡಿಯು ಮುಖಂಡ ಕೈಲಾಶ್ ಮಹತೋ ಮೇಲೆ ದುಷ್ಕರ್ಮಿಗಳು ನಾಲ್ಕೈದು ಸುತ್ತು ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಜೆಡಿಯು ಮುಖಂಡ ಕೈಲಾಶ್ ಮಹತೋ ಅವರು ಗುಂಡು ತಗುಲಿದ ಕೂಡಲೇ ಸ್ಥಳದಲ್ಲೇ ಕುಸಿದು ಬಿದ್ದರು. ಇನ್ನು ಮಾರ್ಕೆಟ್​ನಲ್ಲಿ ಗುಂಡಿನ ಸದ್ದು ಕೇಳುತ್ತಿದ್ದಂತೆ ಜನರು ದಿಕ್ಕಾಪಾಲಾಗಿ ಓಡಾಡ ತೊಡಗಿದರು.

ಇನ್ನು ಗುಂಡೇಟಿನಿಂದ ಕುಸಿದು ಬಿದ್ದಿದ್ದ ಜೆಡಿಯು ಮುಖಂಡ ಕೈಲಾಶ್ ಮಹತೋ ಅವರನ್ನು ಸುತ್ತಮುತ್ತಲಿನವರು ಎತ್ತಿಕೊಂಡು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದರು. ಜಿಲ್ಲಾ ಜೆಡಿಯು ಪ್ರಧಾನ ಕಾರ್ಯದರ್ಶಿ ಕೈಲಾಶ್ ಮಹತೋ ಅವರು ಕಳೆದ ಹಲವು ದಿನಗಳಿಂದ ಅಪರಾಧಿಗಳ ಹಿಟ್ ಲಿಸ್ಟ್‌ನಲ್ಲಿ ಸೇರಿದ್ದರು. ಈ ವಿಷಯ ಅವರಿಗೆ ತಿಳಿದಿತ್ತು. ಹೀಗಾಗಿ ಮಹತೋ ತಮಗೆ ರಕ್ಷಣಗೆ ನೀಡುವಂತೆ ಪೊಲೀಸರಿಗೆ ಮನವಿ ಮಾಡಿದ್ದರು.

ಬರಾರಿ ಬಜಾರ್‌ನಲ್ಲಿ ಜೆಡಿಯು ಮುಖಂಡ ಕೈಲಾಶ್ ಮಹತೋ ಅವರನ್ನು ಗುಂಡಿಕ್ಕಿ ಕೊಂದ ನಂತರ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು. ಗುಂಡು ತಗುಲಿದ ನಂತರ ಸ್ಥಳೀಯರು ಕೈಲಾಶ್ ಮಹತೋನನ್ನು ಬರಾರಿ ರೆಫರಲ್ ಆಸ್ಪತ್ರೆಗೆ ಕರೆದೊಯ್ದಾಗ ಅಲ್ಲಿಯ ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದರು. ಕೈಲಾಶ್ ಮಹತೋ ಜೆಡಿಯುನಲ್ಲಿ ಕತಿಹಾರ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿದ್ದರು.

ಜೆಡಿಯು ನಾಯಕ ಮಹತೋ ಮೇಲೆ ನಾಲ್ಕೈದು ಬಾರಿ ಗುಂಡಿನ ದಾಳಿ ನಡೆದಿದೆ. ಸದ್ಯ ಪೊಲೀಸರು ಸಂಪೂರ್ಣ ತನಿಖೆಯಲ್ಲಿ ತೊಡಗಿದ್ದಾರೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕತಿಹಾರ್ ಸದರ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಆರೋಪಿಗಳ ಪತ್ತೆ ಕಾರ್ಯ ನಡೆಯುತ್ತಿದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಮತ್ತಷ್ಟು ಮಾಹಿತಿ ನೀಡಲಾಗುವುದು ಎಂದು ಕತಿಹಾರ್​ದ ಎಸ್​ಡಿಪಿಒ ಓಂಪ್ರಕಾಶ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಘಟನೆಗೆ ಸ್ಥಳೀಯ ಶಾಸಕ ಖಂಡನೆ: ಕೈಲಾಶ್ ಮಹತೋ ಅವರನ್ನು ಮಾರುಕಟ್ಟೆಯ ಮಧ್ಯದಲ್ಲಿ ಗುಂಡಿಕ್ಕಿ ಕೊಂದ ಘಟನೆಯನ್ನು ಬರಾರಿ ವಿಧಾನಸಭಾ ಕ್ಷೇತ್ರದ ಜೆಡಿಯು ಶಾಸಕ ವಿಜಯ್ ಸಿಂಗ್ ಖಂಡಿಸಿದ್ದಾರೆ. ಇದು ಅತ್ಯಂತ ಖಂಡನೀಯ ಕೃತ್ಯವಾಗಿದ್ದು, ಆರೋಪಿಗಳನ್ನು ಆದಷ್ಟು ಬೇಗ ಬಂಧಿಸಬೇಕು ಎಂದು ಆಗ್ರಹಿಸಿದರು.

ಅಂತಹ ಅಪರಾಧಿಗಳನ್ನು ಬಿಡಬಾರದು. ಪ್ರಸ್ತುತ, ಘಟನೆಯ ಹಿಂದಿನ ಕಾರಣಗಳು ಸ್ಪಷ್ಟವಾಗಿ ತಿಳಿದುಬಂದಿಲ್ಲ. ಕುಟುಂಬ ಸದಸ್ಯರಿಗೆ ಮಾಹಿತಿ ನೀಡಲಾಗಿದೆ. ಬರಾರಿ ಪೊಲೀಸ್ ಠಾಣೆಯ ಪೊಲೀಸರು ಸಹ ತನಿಖೆ ಕೈಗೊಂಡಿದ್ದಾರೆ ಎಂದು ಶಾಸಕರು ಹೇಳಿದರು. ಈ ಘಟನೆ ಕುರಿತು ಬರಾರಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಶೋಧ ಕಾರ್ಯ ಕೈಗೊಂಡಿದ್ದಾರೆ.

ಓದಿ:ಪತ್ನಿಯನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ ಪತಿ... ಮಕ್ಕಳ ಮೇಲೆಯೂ ಹಲ್ಲೆ

ABOUT THE AUTHOR

...view details