ಕರ್ನಾಟಕ

karnataka

ETV Bharat / bharat

ರೈಲು ಬರುವುದು ನೋಡಿ ಸೇತುವೆಯಿಂದ ಜಿಗಿದು ಬಾಲಕಿ ಸಾವು.. ಇಬ್ಬರಿಗೆ ಗಾಯ - ರೈಲ್ವೆ ಸೇತುವೆ

ರೈಲ್ವೆ ಸೇತುವೆಯಿಂದ ಜಿಗಿದ ಪರಿಣಾಮ ಓರ್ವ ಬಾಲಕಿ ಮೃತಪಟ್ಟು, ಇಬ್ಬರು ಗಾಯಗೊಂಡ ಘಟನೆ ಜಮ್ಮು ಮತ್ತು ಕಾಶ್ಮೀರದಲ್ಲಿ ಜರುಗಿದೆ.

jammu-girl-killed-two-siblings-injured-after-allegedly-jumping-off-railway-bridge
ರೈಲು ಬರುವುದು ನೋಡಿ ಸೇತುವೆಯಿಂದ ಜಿಗಿದು ಬಾಲಕಿ ಸಾವು... ಇಬ್ಬರಿಗೆ ಗಾಯ

By

Published : Nov 23, 2022, 10:47 PM IST

ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ರೈಲು ಬರುತ್ತಿರುವುದನ್ನು ಕಂಡ ಒಂದೇ ಕುಟುಂಬದ ಮೂವರು ಮಕ್ಕಳು ರೈಲ್ವೆ ಸೇತುವೆಯಿಂದ ಜಿಗಿದ ಘಟನೆ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದಿದೆ. ಈ ಘಟನೆ ಓರ್ವ ಬಾಲಕಿ ಮೃತಪಟ್ಟಿದ್ದು, ಮತ್ತಿಬ್ಬರು ಗಾಯಗೊಂಡ ಆಸ್ಪತ್ರೆ ಸೇರಿದ್ದಾರೆ.

11 ವರ್ಷದ ಹಾದಿಯಾ ಫಾತಿಮಾ ಮೃತ ಬಾಲಕಿಯಾಗಿದ್ದು, ಆಕೆಯ ಸಹೋದರ ಮೊಹಿಯುದ್ದೀನ್ (12) ಮತ್ತು ಸಹೋದರಿ ಅಲಿಯಾ (6) ಗಾಯಗೊಂಡಿದ್ದಾರೆ. ಈ ಮೂವರು ಒಡಹುಟ್ಟಿದವರಾಗಿದ್ದಾರೆ.

ಇಲ್ಲಿನ ಬಜಾಲ್ಟಾ ಪ್ರದೇಶದಲ್ಲಿ ಸಹೋದರ ಮತ್ತು ಇಬ್ಬರು ಸಹೋದರಿಯರು ಕೂಡಿಕೊಂಡು ರೈಲ್ವೆ ಹಳಿ ಮಾರ್ಗವಾಗಿ ಶಾಲೆಗೆ ಹೋಗುತ್ತಿದ್ದರು. ಈ ವೇಳೆ ರೈಲು ಬರುತ್ತಿರುವುದನ್ನು ಗಮನಿಸಿದ ಮೂವರು ಕೂಡ ಗಾಬರಿಗೊಂಡು ಸೇತುವೆಯಿಂದ ಜಿಗಿದಿದ್ದಾರೆ ಎಂದು ತಿಳಿದು ಬಂದಿದೆ. ಪರಿಣಾಮ ಬಾಲಕಿ ಫಾತಿಮಾ ಸ್ಥಳದಲ್ಲೇ ಮೃತಪಟ್ಟಿದ್ದರೆ, ಉಳಿದ ಇಬ್ಬರು ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ:ಹೊರನಾಡಿಗೆ ತೆರಳುತ್ತಿದ್ದಾಗ ಜೀಪ್ ಪಲ್ಟಿ: ಚಾಲಕಿ ಸ್ಥಳದಲ್ಲೇ ಸಾವು

ABOUT THE AUTHOR

...view details