ಕರ್ನಾಟಕ

karnataka

ETV Bharat / bharat

ಪುರಿ ಜಗನ್ನಾಥ ದೇವಾಲಯಲ್ಲಿ ಇಂದು 'ಅಧರ್ ಪಾನ' ಸಂಭ್ರಮ: ಏನಿದರ ವಿಶೇಷತೆ?

ವಿಶ್ವ ವಿಖ್ಯಾತ ಪುರಿ ಜಗನ್ನಾಥ ದೇವಾಲಯಲ್ಲಿ ಏಕಾದಶಿ ದಿನವಾದ ಇಂದು ಅಧರ್ ಪಾನ ಎಂಬ ಪೂಜಾ ಕಾರ್ಯಕ್ರಮ ನೆರವೇರಿಸಲಾಗುತ್ತದೆ. ಸ್ಥಳೀಯ ಭಾಷೆಯಲ್ಲಿ ಅಧರ್ ಎಂದರೆ ತುಟಿಗಳು ಮತ್ತು ಪಾನ ಎಂದರೆ ಸಿಹಿ - ಪರಿಮಳಯುಕ್ತ ಪಾನೀಯ. ಈ ಪಾನೀಯವನ್ನು ಹಾಲು, ಸಕ್ಕರೆ, ಬೆಣ್ಣೆ, ಬಾಳೆಹಣ್ಣು, ಕರ್ಪೂರ, ಒಣ ಹಣ್ಣುಗಳು, ಕರಿಮೆಣಸು ಇತ್ಯಾದಿಗಳಿಂದ ತಯಾರಿಸಲಾಗುತ್ತದೆ.

Lord Jagannath temple
ಪುರಿ ಜಗನ್ನಾಥ ದೇವಾಲಯ

By

Published : Jul 19, 2021, 6:36 AM IST

Updated : Jul 19, 2021, 9:43 AM IST

ಒಡಿಶಾ: ಇಲ್ಲಿನ ಪುರಾಣ ಪ್ರಸಿದ್ಧ, ವಿಶ್ವ ವಿಖ್ಯಾತ ಪುರಿ ಜಗನ್ನಾಥ ದೇವಾಲಯಲ್ಲಿಏಕಾದಶಿ ದಿನವಾದ ಇಂದು ಅಧರ್ ಪಾನ ಎಂಬ ಪೂಜಾ ಕಾರ್ಯಕ್ರಮ ನೆರವೇರಿಸಲಾಗುತ್ತದೆ. ಈ ದಿನ ಭಗವಾನ್ ಜಗನ್ನಾಥ್, ಬಾಲಭದ್ರ ಮತ್ತು ಸುಭದ್ರ ದೇವಿಗೆ ಪಾನಾ ಎಂಬ ಪಾನೀಯವನ್ನು ಅರ್ಪಿಸಲಾಗುತ್ತದೆ.

ಸ್ಥಳೀಯ ಭಾಷೆಯಲ್ಲಿ ಅಧರ್ ಎಂದರೆ ತುಟಿಗಳು ಮತ್ತು ಪಾನ ಎಂದರೆ ಸಿಹಿ - ಪರಿಮಳಯುಕ್ತ ಪಾನೀಯ. ಈ ಪಾನೀಯವನ್ನು ಹಾಲು, ಸಕ್ಕರೆ, ಬೆಣ್ಣೆ, ಬಾಳೆಹಣ್ಣು, ಕರ್ಪೂರ, ಒಣ ಹಣ್ಣುಗಳು, ಕರಿಮೆಣಸು ಇತ್ಯಾದಿಗಳಿಂದ ತಯಾರಿಸಲಾಗುತ್ತದೆ. ಈ ಎಲ್ಲ ಪದಾರ್ಥಗಳ ಹೊರತಾಗಿ ತುಳಸಿ ಮುಂತಾದ ಗಿಡಮೂಲಿಕೆ ಸಸ್ಯಗಳನ್ನು ಸಹ ಈ ವಿಶೇಷ ಪಾನೀಯದಲ್ಲಿ ಬೆರೆಸಲಾಗುತ್ತದೆ.

ಇನ್ನು ಈ ಪಾನೀಯವನ್ನು ಮೂರು ದೇವತೆಗಳ ವಿಗ್ರಹ ಮುಂದೆ ಬೃಹದಾಕಾರದ ಪಾತ್ರೆಯಲ್ಲಿ ಇಟ್ಟು ಅರ್ಪಿಸಲಾಗುತ್ತದೆ. ಪೂಜೆಯ ಸಮಯದಲ್ಲಿ ಈ ಪಾನೀಯವನ್ನು ಮಣ್ಣಿನಿಂದ ಮಾಡಿದ 9 ಮಡಕೆಗಳಲ್ಲಿ ತುಂಬಿಸಲಾಗುತ್ತದೆ. ಪ್ರತಿ ದೇವತೆಗೆ 3 ಪಾನೀಯಗಳನ್ನು ತುಂಬಿದ ಮಡಕೆಗಳನ್ನು ಸಮರ್ಪಿಸುವುದು ಇಲ್ಲಿನ ವಾಡಿಕೆ.

ಪುರಿ ಜಗನ್ನಾಥ ದೇವಾಲಯ

ರಾಘವದಾಸ್ ಮಠ, ದೊಡ್ಡ ಒಡಿಯಾ ಮಠ ಮತ್ತು ದೇವಾಲಯ ಆಡಳಿತ ಮಂಡಳಿ ಒಟ್ಟಾಗಿ ಸೇರಿ ಪಾನೀಯ ತಯಾರಿಗೆ ಸಹಕರಿಸುತ್ತಾರೆ. ಇನ್ನು ಪುರೋಹಿತರು ಈ ಪಾನೀಯವನ್ನು ಭಗವಂತನಿಗೆ 'ಶೋಡಾಶ್ ಉಪಚಾರ್ ಪೂಜೆ' (ಪೂಜೆಯ ಹೆಸರು) ಸಮಯದಲ್ಲಿ ಅರ್ಪಿಸುತ್ತಾರೆ. ಪೂಜೆ ಮುಗಿದ ನಂತರ, ಸೇವಕರು ಮಣ್ಣಿನ ಮಡಕೆಗಳನ್ನು ಮುರಿದು ಪಾನವನ್ನು ರಥದಾದ್ಯಂತ ಹರಡುತ್ತಾರೆ. ಇದನ್ನು ಕುಡಿಯುವುದರಿಂದ ಮೋಕ್ಷಕ್ಕೆ ಕಾರಣವಾಗುತ್ತದೆ ಎಂಬುದು ಭಕ್ತರ ನಂಬಿಕೆ.

Last Updated : Jul 19, 2021, 9:43 AM IST

ABOUT THE AUTHOR

...view details