ಕರ್ನಾಟಕ

karnataka

ETV Bharat / bharat

2015ರ ಭ್ರಷ್ಟಾಚಾರ ಕೇಸ್​: ಮೂವರು HUDD ಅಧಿಕಾರಿಗಳ ಅಮಾನತು

ಎಚ್‌ಯುಡಿಡಿ ಹಿರಿಯ ಪಟ್ಟಣ ಯೋಜನಾ ಉಸ್ತುವಾರಿ ಹಮೀದ್ ಅಹ್ಮದ್ ವಾನಿ, ಶ್ರೀನಗರ ಅಭಿವೃದ್ಧಿ ಪ್ರಾಧಿಕಾರ ಫರ್ಜಾನಾ ನಕಾಶ್‌ಬಂದಿ ಮತ್ತು ಜಮ್ಮು-ಕಾಶ್ಮೀರ ಕೆರೆ ಜಲಮಾರ್ಗ ಅಭಿವೃದ್ಧಿ ಪ್ರಾಧಿಕಾರದ ಕಾರ್ಯನಿರ್ವಾಹಕ ಇಂಜಿನಿಯರ್ ಫಿರೋಜ್ ಅಹ್ಮದ್ ಮಿರ್​ನನ್ನು ಅಮಾನತು ಮಾಡಿ ಎಚ್‌ಯುಡಿಡಿ ಪ್ರಧಾನ ಕಾರ್ಯದರ್ಶಿ ಧೀರಜ್ ಗುಪ್ತಾ ಆದೇಶ ಹೊರಡಿಸಿದ್ದಾರೆ.

By

Published : Jun 22, 2021, 8:30 PM IST

HUDD
2015ರ ಭ್ರಷ್ಟಾಚಾರ ಕೇಸ್

ಜಮ್ಮು: 2015ರಲ್ಲಿ ಭ್ರಷ್ಟಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ ನಿಗ್ರಹ ದಳದಿಂದ ಕೇಸು ದಾಖಲಾಗಿರುವ ವಸತಿ ಮತ್ತು ನಗರಾಭಿವೃದ್ಧಿ ಇಲಾಖೆಯ (ಎಚ್‌ಯುಡಿಡಿ) ಮೂವರು ಹಿರಿಯ ಅಧಿಕಾರಿಗಳನ್ನು ಜಮ್ಮು ಮತ್ತು ಕಾಶ್ಮೀರ ಸರ್ಕಾರ ಅಮಾನತುಗೊಳಿಸಿ ಅಧಿಕೃತ ಆದೇಶ ಹೊರಡಿಸಿದೆ.

ಎಚ್‌ಯುಡಿಡಿಯ ಹಿರಿಯ ಪಟ್ಟಣ ಯೋಜನಾ ಉಸ್ತುವಾರಿ ಹಮೀದ್ ಅಹ್ಮದ್ ವಾನಿ, ಶ್ರೀನಗರ ಅಭಿವೃದ್ಧಿ ಪ್ರಾಧಿಕಾರ ಫರ್ಜಾನಾ ನಕಾಶ್‌ಬಂದಿ ಮತ್ತು ಜಮ್ಮು-ಕಾಶ್ಮೀರ ಕೆರೆ ಜಲಮಾರ್ಗ ಅಭಿವೃದ್ಧಿ ಪ್ರಾಧಿಕಾರದ ಕಾರ್ಯನಿರ್ವಾಹಕ ಇಂಜಿನಿಯರ್ ಫಿರೋಜ್ ಅಹ್ಮದ್ ಮಿರ್​ನನ್ನು ಅಮಾನತು ಮಾಡಿ ಎಚ್‌ಯುಡಿಡಿಯ ಪ್ರಧಾನ ಕಾರ್ಯದರ್ಶಿ ಧೀರಜ್ ಗುಪ್ತಾ ಆದೇಶ ಹೊರಡಿಸಿದ್ದಾರೆ.

2015ರಲ್ಲಿ ಈ ಮೂವರು ಅಧಿಕಾರಿಗಳ ವಿರುದ್ಧ ವಿಜಿಲೆನ್ಸ್​ ಆಫ್​ ಕಾಶ್ಮೀರ ಅಂದರೆ ಈಗಿನ ಎಸಿಬಿ ಭ್ರಷ್ಟಾಚಾರ ಪ್ರಕರಣ ದಾಖಲಿಸಿತ್ತು. ಹಮೀದ್ ಅಹ್ಮದ್ ವಾನಿ ಆಗ ಶ್ರೀನಗರ ಮಹಾನಗರ ಪಾಲಿಕೆಯ ಜಂಟಿ ಆಯುಕ್ತರಾಗಿದ್ದರು. ನಕಾಶ್‌ ಬಂದಿ ನಗರ ಅಭಿವೃದ್ಧಿ ಪ್ರಾಧಿಕಾರದ (ಎಸ್‌ಡಿಎ) ವಿಭಾಗೀಯ ಪಟ್ಟಣ ಯೋಜಕರಾಗಿದ್ದರು. ಇನ್ನು ಫಿರೋಜ್ ಅಹ್ಮದ್ ಮಿರ್ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು.

ABOUT THE AUTHOR

...view details