ಕರ್ನಾಟಕ

karnataka

ಶಶಿಕಲಾಗೆ ಸೇರಿದ್ದ 100 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ ಮಾಡಿದ ಐಟಿ

ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಜಯಲಲಿತಾ ಅವರ ಆಪ್ತೆ ವಿ.ಕೆ.ಶಶಿಕಲಾ ಅವರಿಗೆ ಸಂಬಂಧಿಸಿದ ಆಸ್ತಿ ವಶಕ್ಕೆ ಪಡೆದುಕೊಳ್ಳುವಲ್ಲಿ ಐಟಿ ಇಲಾಖೆ ಯಶಸ್ವಿಯಾಗಿದೆ.

By

Published : Sep 8, 2021, 10:13 PM IST

Published : Sep 8, 2021, 10:13 PM IST

Sasikala
Sasikala

ಚೆನ್ನೈ(ತಮಿಳುನಾಡು): ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರ ಆಪ್ತೆ ವಿ.ಕೆ. ಶಶಿಕಲಾ ಅವರಿಗೆ ಸೇರಿರುವ 100 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಆದಾಯ ತೆರಿಗೆ ಇಲಾಖೆ ಜಪ್ತಿ ಮಾಡಿರುವುದಾಗಿ ತಿಳಿದು ಬಂದಿದೆ.

ಇದರಲ್ಲಿ ಪಯನೂರು ಗ್ರಾಮದ 24 ಎಕರೆಯ ಸ್ಥಳವೂ ಸೇರಿಕೊಂಡಿದೆ ಎನ್ನಲಾಗಿದೆ. 1991ರಿಂದ 1996ರ ಅವಧಿಯಲ್ಲಿ ಜಯಲಲಿತಾ ಸಿಎಂ ಆಗಿದ್ದ ಸಂದರ್ಭದಲ್ಲಿ ಈ ಆಸ್ತಿ ಗಳಿಕೆ ಮಾಡಲಾಗಿತ್ತು ಎನ್ನಲಾಗಿದೆ.

ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ವಿ.ಕೆ.ಶಶಿಕಲಾ ಈಗಾಗಲೇ ಬೆಂಗಳೂರಿನ ಜೈಲಿನಲ್ಲಿ 4 ವರ್ಷಗಳ ಕಾಲ ಜೈಲುಶಿಕ್ಷೆ ಅನುಭವಿಸಿದ್ದು ಇದೇ ವರ್ಷ ಫೆಬ್ರುವರಿ ತಿಂಗಳಲ್ಲಿ ಜೈಲಿನಿಂದ ರಿಲೀಸ್​ ಆಗಿದ್ದರು. ಕಳೆದ ವರ್ಷ ಐಟಿ ಇಲಾಖೆ ಇವರಿಗೆ ಸೇರಿದ್ದ 300 ಕೋಟಿ ರೂ. ಮೌಲ್ಯದ 65 ಆಸ್ತಿಗಳನ್ನು ವಶಕ್ಕೆ ಪಡೆದುಕೊಂಡಿತು.

ಇದನ್ನೂ ಓದಿ: ಐಸಿಸಿ ಟಿ-20 ವಿಶ್ವಕಪ್​ಗೆ ಟೀಂ ಇಂಡಿಯಾ ಪ್ರಕಟ... ಮೆಂಟರ್ ಆಗಿ ಆಯ್ಕೆಯಾದ ಎಂಎಸ್ ಧೋನಿ

2014ರಲ್ಲಿ ಕರ್ನಾಟಕದ ವಿಶೇಷ ನ್ಯಾಯಾಲಯದ ಮಾಜಿ ನ್ಯಾಯಾಧೀಶರಾದ ಜಾನ್​ ಮೈಕೆಲ್​ ಕುನ್ಹಾ ಅವರು ನೀಡಿದ್ದ ತೀರ್ಪಿನ ಆಧಾರದ ಮೇಲೆ ಜಯಲಲಿತಾ ಅವರ ಆಪ್ತ ಸಹಾಯಕಿ ಶಶಿಕಲಾ ಹಾಗೂ ಸಂಬಂಧಿಗಳಾದ ಇಳವರಸಿ, ಸುಧಾಕರನ್​ ಅವರಿಗೆ ಸೇರಿದ್ದ 11 ಆಸ್ತಿಗಳ ಪಟ್ಟಿ ಮಾಡಲಾಗಿತ್ತು. ಇದೀಗ 100 ಕೋಟಿ ರೂ. ಮೌಲ್ಯದ ಆಸ್ತಿ ವಶಕ್ಕೆ ಪಡೆದುಕೊಳ್ಳುವಲ್ಲಿ ಐಟಿ ಇಲಾಖೆ ಯಶಸ್ವಿಯಾಗಿದೆ.

ABOUT THE AUTHOR

...view details