ಶ್ರೀಹರಿಕೋಟ (ಆಂಧ್ರ ಪ್ರದೇಶ):ಅತ್ಯಾಧುನಿಕ ಜಿಯೋ ಇಮೇಜಿಂಗ್ ಉಪಗ್ರಹ ಇಒಎಸ್-03 (Earth Observation Satellite-EOS) ಅನ್ನು ನಿಗದಿತ ಕಕ್ಷೆ ಸೇರಿಸುವಲ್ಲಿಇಸ್ರೋ ವಿಫಲವಾಗಿದೆ. ಇಂದು ಮುಂಜಾನೆ ಜಿಎಸ್ಎಲ್‌ವಿ-ಎಫ್ 10 ರಾಕೆಟ್ ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆಯಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿ ಉಡಾವಣೆಯಾಗಿದ್ದು, ಕ್ರಯೋಜೆನಿಕ್ ಹಂತದಲ್ಲಿ ವೈಫಲ್ಯ ಅನುಭವಿಸಿದೆ.
ಉಪಗ್ರಹ ಉಡಾವಣೆಗೆ ನಿನ್ನೆ (ಬುಧವಾರ) ಮುಂಜಾನೆಯಿಂದಲೇ ಇಸ್ರೋ ಸಿದ್ದತೆಗಳನ್ನು ಪ್ರಾರಂಭಿಸಿತ್ತು. ಇಒಎಸ್-03 ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿರುವ ಭೂ ಪರಿವೀಕ್ಷಣಾ ಉಪಗ್ರಹ ಇದಾಗಿದ್ದು ಜಿಎಸ್ಎಲ್ವಿ ಎಫ್-10 ಲಾಂಚಿಂಗ್ ವೆಹಿಕಲ್ ಮೂಲಕ ಜಿಯೋಸಿಂಕ್ರೊನಸ್ ಟ್ರಾನ್ಸ್‌ಫರ್ ಆರ್ಬಿಟ್‌ನಲ್ಲಿ ಇರಿಸಬೇಕಿತ್ತು.