ಕರ್ನಾಟಕ

karnataka

ಎನ್ಐಟಿ ರೌರ್ಕೆಲದಲ್ಲಿ ಇಸ್ರೋ ಸ್ಥಾಪಿಸಲಿದೆ ಎಸ್-ಟಿಐಸಿ: ಇದರ ಉದ್ದೇಶವೇನು?

ತಜ್ಞ ಅಧ್ಯಾಪಕರು, ಇಸ್ರೋ ಮತ್ತು ಹಾಗೂ ಹಲವು ಮಾರ್ಗದರ್ಶಕರಿಂದ ಮಾರ್ಗದರ್ಶನ ಪಡೆದು ವಿದ್ಯಾರ್ಥಿಗಳು ಮತ್ತು ಸಂಶೋಧನಾ ವಿದ್ವಾಂಸರುಗಳು ಇಸ್ರೋ ನೀಡಿದ ಯೋಜನೆಗಳನ್ನು ಇಲ್ಲಿ ಕಾರ್ಯಗತಗೊಳಿಸಲಿದ್ದಾರೆ ಎಂದು ಇಸ್ರೋ ಅಧ್ಯಕ್ಷ ಶಿವನ್ ಹೇಳಿದ್ದಾರೆ.

By

Published : Mar 19, 2021, 4:04 PM IST

Published : Mar 19, 2021, 4:04 PM IST

ISRO to set up 'Space Technology Incubation Center' at NIT Rourkela
ಎನ್ಐಟಿ ರೌರ್ಕೆಲದಲ್ಲಿ ಇಸ್ರೋ ಸ್ಥಾಪಿಸಲಿದೆ ಎಸ್-ಟಿಐಸಿ

ರೌರ್ಕೆಲ: ಇಲ್ಲಿನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎನ್‌ಐಟಿ) ಯಲ್ಲಿ 'ಸ್ಪೇಸ್ ಟೆಕ್ನಾಲಜಿ ಇನ್ಕ್ಯುಬೇಷನ್ ಸೆಂಟರ್' (ಎಸ್-ಟಿಐಸಿ) ಸ್ಥಾಪಿಸುತ್ತೇವೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತಿಳಿಸಿದೆ.

ಬಾಹ್ಯಾಕಾಶ ತಂತ್ರಜ್ಞಾನ ಸಂಶೋಧನೆ ಮತ್ತು ಉತ್ಪನ್ನ ಅಭಿವೃದ್ಧಿಯನ್ನು ಕೈಗೊಳ್ಳುವುದು S-TIC ಸ್ಥಾಪಿಸುವ ಗುರಿ ಎಂದು ಇಸ್ರೋ ತಿಳಿಸಿದೆ. ಇಲ್ಲಿ ಸ್ಥಾಪನೆ ಆಗುವ ಕೇಂದ್ರದ ಮುಖಾಂತರ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲದೇ ಒಡಿಶಾ, ಪಶ್ಚಿಮ ಬಂಗಾಳ, ಬಿಹಾರ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿ ಸ್ಟಾರ್ಟ್ಅಪ್, ಸಾಮರ್ಥ್ಯ ವೃದ್ಧಿ ಮತ್ತು ಬಾಹ್ಯಾಕಾಶ ತಂತ್ರಜ್ಞಾನದ ಸಂಶೋಧನೆಗಳನ್ನು ಉತ್ತೇಜಿಸುತ್ತದೆ ಎಂದು ಹೇಳಿದೆ.

ಈ ಉದ್ದೇಶಗಳನ್ನು ಪೂರೈಸುವ ಸಂಬಂಧ ಎನ್ಐಟಿ ರೌರ್ಕೆಲ ಅತ್ಯಾಧುನಿಕ ಪ್ರಯೋಗಾಲಯಗಳು, ತಜ್ಞ ಅಧ್ಯಾಪಕರ ಸೌಲಭ್ಯ ಒದಗಿಸಲಿದೆ. ಇನ್ನು ಬಾಹ್ಯಾಕಾಶ ತಂತ್ರಜ್ಞಾನಕ್ಕೆ ಸಂಬಂಧಿಸಿದ ಸಂಶೋಧನೆಗೆ ಇದು ಸಹಕಾರಿಯಾಗಲಿದ್ದು, ಎಸ್-ಟಿಐಸಿಯ ಉತ್ಪನ್ನಗಳನ್ನು ಭವಿಷ್ಯದ ಬಾಹ್ಯಾಕಾಶ ಯಾತ್ರೆಗಳಲ್ಲಿ ಬಳಸಿಕೊಳ್ಳಲಾಗುವುದು. ಬಾಹ್ಯಾಕಾಶ ತಂತ್ರಜ್ಞಾನ ಮತ್ತು ಅಪ್ಲಿಕೇಶನ್‌ಗಳ ಡೊಮೇನ್‌ನಲ್ಲಿ 'ಆತ್ಮನಿರ್ಭರ್ ಭಾರತ್ ಅಭಿಯಾನ್' ಮೂಲಕ ರಾಷ್ಟ್ರ ನಿರ್ಮಾಣಕ್ಕೆ ಇದು ಸಹಾಯ ಮಾಡುತ್ತದೆ ಎಂದು ಇಸ್ರೋ ಅಧ್ಯಕ್ಷರ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಎಸ್-ಟಿಐಸಿ ಸ್ಥಾಪಿಸಲು ಇಸ್ರೋ ಎರಡು ವರ್ಷಗಳವರೆಗೆ ವಾರ್ಷಿಕ 2 ಕೋಟಿ ರೂ.ಗಳ ಅನುದಾನವನ್ನು ಈ ಸಂಸ್ಥೆಗೆ ನೀಡಲಿದೆ. ಎಸ್-ಟಿಐಸಿ ಸ್ಥಾಪಿಸಲು ಇಸ್ರೋ ಮತ್ತು ಎನ್ಐಟಿ ರೌರ್ಕೆಲ ನಡುವಿನ ಒಪ್ಪಂದಕ್ಕೆ ಮಾರ್ಚ್ 18, 2021 ರಂದು ಸಹಿ ಹಾಕಲಾಯಿತು. ಇಸ್ರೋ ಜೊತೆಗಿನ ಈ ಸಹಯೋಗವು ಸಂಶೋಧನೆ ಮತ್ತು ಅಭಿವೃದ್ಧಿಯ ಜೊತೆಗೆ ಬಾಹ್ಯಾಕಾಶ ಪ್ರಾರಂಭದ ಹೊಸ ಅವಕಾಶಗಳನ್ನು ತೆರೆಯಲಿದೆ.

ABOUT THE AUTHOR

...view details