ಶ್ರೀಹರಿಕೋಟ(ಆಂಧ್ರಪ್ರದೇಶ):ಮಹತ್ವಾಕಾಂಕ್ಷೆಯ ಭೂ ಸರ್ವೇಕ್ಷಣಾ ಉಪಗ್ರಹ EOS-04 ಸೇರಿದಂತೆ ಮತ್ತೆರಡು ಉಪಗ್ರಹಗಳಿದ್ದ ಪಿಎಸ್‌ಎಲ್‌ವಿ ಸಿ-52 ರಾಕೆಟ್ ಅನ್ನು ಇಂದು ಬೆಳ್ಳಬೆಳಗ್ಗೆ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಇಸ್ರೋ ಯಶಸ್ವಿಯಾಗಿ ಉಡ್ಡಯನ ಮಾಡಿದೆ.
ಬೆಳಗ್ಗೆ 5.59ಕ್ಕೆ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಈ ರಾಕೆಟ್ ನಭಕ್ಕೆ ಚಿಮ್ಮಿತು. ಈ ಉಡ್ಡಯನದ 25 ಗಂಟೆಗಳ ಕೌಂಟ್‌ಡೌನ್ ಮುಗಿಯುತ್ತಿದ್ದಂತೆ ನಿಗದಿಯಂತೆ ಇಸ್ರೋದ ನಂಬಿಕಸ್ಥ ರಾಕೆಟ್ ಪಿಎಸ್‌ಎಲ್‌ವಿ ಬಾಹ್ಯಾಕಾಶದತ್ತ ಪ್ರಯಾಣ ನಡೆಸಿತು.
ಬಾಹ್ಯಾಕಾಶದತ್ತ ಪ್ರಯಾಣ ಬೆಳೆಸಿದ ಪಿಎಸ್‌ಎಲ್‌ವಿ ಸಿ-52 ರಾಕೆಟ್ ಉಪಗ್ರಹ EOS-04 10 ವರ್ಷಗಳಷ್ಟು ಬಾಳ್ವಿಕೆ ಇರಲಿದೆ. ಈ ಭೂ ವೀಕ್ಷಣಾ ಉಪಗ್ರಹ ಕೃಷಿ, ಅರಣ್ಯ ಮತ್ತು ತೋಟಗಳು, ಮಣ್ಣಿನ ತೇವಾಂಶ ಮತ್ತು ಜಲವಿಜ್ಞಾನ ಮತ್ತು ಪ್ರವಾಹ ಮ್ಯಾಪಿಂಗ್‌ನಂತಹ ಅಪ್ಲಿಕೇಷನ್ಗಳಿಗಾಗಿ ಕೆಲಸ ಮಾಡಲಿದೆ. ಎಂಥಹದ್ದೇ ಪ್ರತಿಕೂಲ ಹವಾಮಾನ ಪರಿಸ್ಥಿತಿಯಲ್ಲೂ ಕೂಡಾ ಉತ್ತಮ ಗುಣಮಟ್ಟದ ಚಿತ್ರಗಳನ್ನು ಭೂಮಿಗೆ ರವಾನಿಸುವಂತೆ ವಿನ್ಯಾಸ ಮಾಡಲಾಗಿದೆ.
ಇದೇ ರಾಕೆಟ್‌ನಲ್ಲಿ INSPIREsat-1 ಮತ್ತು INS-2TD ಎಂಬ ಸಣ್ಣ ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಇಸ್ರೋ ಕಳುಹಿಸಿದೆ.