ನವದೆಹಲಿ: ಟೆಕ್ ದೈತ್ಯ ಕಂಪನಿಯಾದ ಆ್ಯಪಲ್ ಭಾರತದಲ್ಲಿ ಹೊಸ ಐಫೋನ್ 16 ಉತ್ಪಾದನೆಗೆ ಯೋಜಿಸುತ್ತಿದೆ. ಈ ನಿಟ್ಟಿನಲ್ಲಿ ಮೂರು ಕಂಪನಿಗಳೊಂದಿಗೆ ಆ್ಯಪಲ್ ಭೂಮಿ ಮಂಜೂರಿಗಾಗಿ ಅರ್ಜಿ ಸಲ್ಲಿಸಿದೆ. ಒಟ್ಟಾರೆ ಸುಮಾರು 23 ಎಕರೆ ಜಾಗದಲ್ಲಿ ಐಫೋನ್ ಘಟಕ ಸ್ಥಾಪಿಸಲು ಕಂಪನಿಗಳು ಮುಂದಾಗಿದ್ದು, 2,800 ಕೋಟಿ ರೂ.ಗಳನ್ನು ಹೂಡಿಕೆ ಮಾಡಲಿವೆ.
ಕೊರಿಯಾದಲ್ಲಿ ನಡೆದ ಸಭೆಯಲ್ಲಿ ಆ್ಯಪಲ್ ಮತ್ತು ಇದಕ್ಕೆ ಸಂಬಂಧಿತ ಕಂಪನಿಗಳು ಭಾರತದಲ್ಲಿ ಹೂಡಿಕೆ ಪ್ರಸ್ತಾಪವನ್ನು ಮಾಡಿವೆ. ಗ್ರೇಟರ್ ನೋಯ್ಡಾದ ಯಮುನಾ ಎಕ್ಸ್‌ಪ್ರೆಸ್‌ವೇ ಇಂಡಸ್ಟ್ರಿಯಲ್ ಡೆವಲಪ್‌ಮೆಂಟ್ ಅಥಾರಿಟಿ (YEIDA)ಯ ಸೆಕ್ಟರ್ 29ರಲ್ಲಿ 5 ಎಕರೆ ಭೂಮಿಯಲ್ಲಿ ತನ್ನ ಉತ್ಪನ್ನವನ್ನು ತಯಾರಿಸಲು ಇಂಕ್ ತಯಾರಿಕಾ ಕಂಪನಿಯಾದ ಸಿಕೊ ಅಡ್ವಾನ್ಸ್ ಲಿಮಿಟೆಡ್ ತನ್ನ ಇಚ್ಛೆಯನ್ನು ವ್ಯಕ್ತಪಡಿಸಿದೆ.