ಕರ್ನಾಟಕ

karnataka

ETV Bharat / bharat

ನ.19 ಅಂತಾರಾಷ್ಟ್ರೀಯ ಪುರುಷರ ದಿನ: ಸಮ ಸಮಾಜಕ್ಕೆ ತೊಡಬೇಕಿದೆ ಪಣ - Mens day

ಪುರುಷರ ದಿನ ಎಂದರೆ ಅದೊಂದು ದಿನವನ್ನಾಗಿ ಮಾತ್ರ ಆಚರಣೆ ಮಾಡುವ ಬದಲು, ಡಾ. ಟೀಲುಕ್ಸಿಂಗ್ ಅವರು ವಿಶ್ವದಾದ್ಯಂತ ಪುರುಷರು ಮತ್ತು ಹುಡುಗರ ಮೇಲೆ ಪರಿಣಾಮ ಬೀರುವ ಸಮಸ್ಯೆಗಳನ್ನು ಪ್ರತಿಬಿಂಬಿಸುವ ದಿನವಾಗಿ ಅಂತಾರಾಷ್ಟ್ರೀಯ ಪುರುಷರ ದಿನವನ್ನು ಪ್ರಚಾರ ಮಾಡಿದರು. ಈ ದಿನವು ಪುರುಷರಿಗೆ ತಮ್ಮ ಜೀವನದಲ್ಲಿ ಮೌಲ್ಯಗಳು, ಪಾತ್ರ ಮತ್ತು ಜವಾಬ್ದಾರಿಗಳನ್ನು ಕಲಿಸಲು ಪ್ರೋತ್ಸಾಹಿಸುತ್ತಿದೆ.

international-mens-day-2020
ನ.19 ಅಂತಾರಾಷ್ಟ್ರೀಯ ಪುರುಷರ ದಿನ

By

Published : Nov 19, 2020, 6:06 AM IST

ನವದೆಹಲಿ: ನವೆಂಬರ್ 19 ರಂದು, ಭಾರತ ಮತ್ತು ಇತರ 80ಕ್ಕೂ ಹೆಚ್ಚು ದೇಶಗಳು ವಾರ್ಷಿಕ ಅಂತಾರಾಷ್ಟ್ರೀಯ ಪುರುಷರ ದಿನಾಚರಣೆಯನ್ನು ಆಚರಿಸಲಿವೆ. ಪುರುಷರು ತಂದೆ, ಸಹೋದರ, ಚಿಕ್ಕಪ್ಪ, ಸೋದರಳಿಯ, ಗಂಡ ಅಥವಾ ಸ್ನೇಹಿತರಾಗಿಯೂ ಪ್ರತಿಬಿಂಬಿತರಾಗಿದ್ದಾರೆ. ಈ ಪಾತ್ರಗಳ ಮೂಲಕವೇ ಸಮಾಜಕ್ಕೆ ತಮ್ಮ ಕೊಡುಗೆ ನೀಡುತ್ತಾರೆ.

ಈ ಅಂತಾರಾಷ್ಟ್ರೀಯ ದಿನಾಚರಣೆಯ ಮುಖ್ಯ ಉದ್ದೇಶ ಎಂದರೆ, ಪುರುಷರು ಹಾಗೂ ಯುವಕರು ಎದುರಿಸುತ್ತಿರುವ ಸಾಮಾಜಿಕ ಸಮಸ್ಯೆಗಳನ್ನು ಎತ್ತಿ ತೋರಿಸುವುದರ ಜೊತೆಗೆ ಪುರಷತ್ವವನ್ನು ಜಗತ್ತಿಗೆ ತೋರುವ ಸಕಾರಾತ್ಮಕ ಮೌಲ್ಯ ಸಾಕಾರಗೊಳಿಸುವುದೇ ಆಗಿದೆ.

ಹೀಗಾಗಿ ಈ ವರ್ಷದ ಪುರುಷರ ದಿನವನ್ನು ‘ಪುರುಷರು ಹಾಗೂ ಹುಡುಗರಿಗೆ ಉತ್ತಮ ಆರೋಗ್ಯ’ ಎಂಬ ಥೀಮ್​​ನಡಿ ಅವರ ಮಾನಸಿಕ ಆರೋಗ್ಯವನ್ನು ಕೇಂದ್ರೀಕರಿಸಿ, ಲಿಂಗ ಸಂಬಂಧಗಳ ಸುಧಾರಣೆ, ಲಿಂಗ ಸಮಾನತೆ ಮತ್ತು ಸಕಾರಾತ್ಮಕ ಪುರುಷರ ರೋಲ್ ಮಾಡೆಲ್​ಗಳನ್ನು ಪ್ರತಿನಿಧಿಸುವುದಾಗಿದೆ.

ಪುರುಷರ ದಿನ ಹುಟ್ಟಿಕೊಂಡಿದ್ದು ಹೇಗೆ..?

1992ರಲ್ಲಿ ಥಾಮಸ್ ಓಸ್ಟರ್ ಅಂತಾರಾಷ್ಟ್ರೀಯ ಪುರುಷರ ದಿನವನ್ನು ಆರಂಭಿಸಿದರು. ಆದರೆ 1999ರಲ್ಲಿ ಅದರ ಪ್ರಾಮುಖ್ಯತೆಯ ದಿನವನ್ನು ಟ್ರಿನಿಡಾಟ್​ ಮತ್ತು ಟೊಬಾಗೋದಲ್ಲಿ ವೆಸ್ಟ್ ಇಂಡೀಸ್ ವಿಶ್ವವಿದ್ಯಾಲಯದ ಇತಿಹಾಸ ಉಪನ್ಯಾಸಕ ಡಾ. ಜೆರೋಮ್ ಟೆಲುಕ್ಸಿಂಗ್ ಅವರು ಪುನರುಜ್ಜೀವಗೊಳಿಸಿದರು.

ಡಾ. ಜೆರೋಮ್ ಟೆಲುಕ್ಸಿಂಗ್ ಅವರ ತಂದೆಯ ಹುಟ್ಟುಹಬ್ಬವನ್ನು ಅಂತಾರಾಷ್ಟ್ರೀಯ ಪುರುಷರ ದಿನವನ್ನಾಗಿ ಆಚರಿಸಲು ನಿರ್ಧರಿಸಲಾಯಿತು. ಅಲ್ಲದೇ ದಶಕದ ಹಿಂದೆ ಇದೇ ದಿನದಂದು ಟ್ರಿನಿಡಾಟ್​ ಹಾಗೂ ಟೊಬಾಗೋ ದೇಶದ ಫುಟ್ಬಾಲ್​ ತಂಡವು ವಿಶ್ವಕಪ್ ಆಡುವಲ್ಲಿ ಅರ್ಹತೆ ಪಡೆದುಕೊಂಡಿತ್ತು.

ಪುರುಷರ ದಿನ ಎಂದರೆ ಲಿಂಗತ್ವ ದಿನವನ್ನಾಗಿ ಆಚರಿಸುವ ಮಾಡುವ ಬದಲು, ಡಾ. ಟೀಲುಕ್ಸಿಂಗ್ ಅವರು ವಿಶ್ವದಾದ್ಯಂತ ಪುರುಷರು ಮತ್ತು ಹುಡುಗರ ಮೇಲೆ ಪರಿಣಾಮ ಬೀರುವ ಸಮಸ್ಯೆಗಳನ್ನು ಪ್ರತಿಬಿಂಬಿಸುವ ದಿನವಾಗಿ ಅಂತಾರಾಷ್ಟ್ರೀಯ ಪುರುಷರ ದಿನವನ್ನು ಪ್ರಚಾರ ಮಾಡಿದರು. ಪ್ರತಿ ವರ್ಷ ನವೆಂಬರ್ 19ರ ದಿನವನ್ನು ಅವರು ಮೂವೆಂಬರ್‌ ಎಂದು ಕರೆದರು. ಅಲ್ಲಿ ಪುರುಷರು ಅಥವಾ ಮೊ ಬ್ರದರ್ಸ್ ತಲೆ ಕೂದಲು ಮತ್ತು ಗಡ್ಡ ಮೀಸೆಯನ್ನು ತೆಗೆಸದೇ ಪುರುಷರ ಆರೋಗ್ಯಕ್ಕಾಗಿ ಹಣವನ್ನು ಸಂಗ್ರಹಿಸಲು ಮುಂದಾಗುತ್ತಾರೆ.

ಭಾರತದಲ್ಲಿ ಅಂತಾರಾಷ್ಟ್ರೀಯ ಪುರುಷರ ದಿನಾಚರಣೆ

2007ರಲ್ಲಿ ಭಾರತವು ಮೊದಲ ಬಾರಿಗೆ ಅಂತಾರಾಷ್ಟ್ರೀಯ ಪುರುಷರ ದಿನವನ್ನು ಆಚರಿಸಿತು. ಅಂದಿನಿಂದ ಪ್ರತಿ ವರ್ಷ ನವೆಂಬರ್ 19ರಂದು ಅಂತಾರಾಷ್ಟ್ರೀಯ ಪುರುಷರ ದಿನವನ್ನು ಆಚರಿಸಲಾಗುತ್ತದೆ. ದಿನವನ್ನು ಜಗತ್ತಿನಾದ್ಯಂತ ಪುರುಷರಿಗೆ ಸಮರ್ಪಿಸಲಾಗಿದೆ. ಪುರುಷರಿಗೆ ವಿಶೇಷ ಚಿಕಿತ್ಸೆ ನೀಡಲು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಇದು ಭಾರತದಲ್ಲಿ ಅಷ್ಟೊಂದು ಜನಪ್ರಿಯವಾಗಿಲ್ಲ. ಆದರೆ, ಕ್ರಮೇಣ ಈ ದಿನವನ್ನು ಆಚರಿಸಲು ಒತ್ತು ನೀಡಲಾಗುತ್ತಿದೆ. ಖಾಸಗಿ ಸಂಸ್ಥೆಗಳು, ಎನ್‌ಜಿಒಗಳು ಮತ್ತು ನಾಗರಿಕ ಸಂಘಗಳು ಹಕ್ಕುಗಳಿಗಾಗಿ ಧ್ವನಿ ಎತ್ತಲು ಮುಂದೆ ಬರಲು ಜನರನ್ನು ಪ್ರೋತ್ಸಾಹಿಸುತ್ತಿವೆ.

ಲಿಂಗ ಸಮಾನತೆಯ ಜಗತ್ತಿನಲ್ಲಿ ಅಂತಾರಾಷ್ಟ್ರೀಯ ಪುರುಷರ ದಿನದ ಪ್ರಾಮುಖ್ಯತೆ

ಸಮಾಜ, ಸಮುದಾಯ, ಕುಟುಂಬ, ಶಿಶುಪಾಲನಾ ಮತ್ತು ಪರಿಸರಕ್ಕೆ ಪುರುಷರ ಸಕಾರಾತ್ಮಕ ಕೊಡುಗೆಯ ಆಚರಣೆ

ಪುರುಷರ ಆರೋಗ್ಯ ಮತ್ತು ಯೋಗಕ್ಷೇಮದ ಮೇಲೆ ಕೇಂದ್ರೀಕರಿಸಲು ಸಾಮಾಜಿಕ, ಭಾವನಾತ್ಮಕ, ದೈಹಿಕ ಮತ್ತು ಆಧ್ಯಾತ್ಮಿಕ ಎಲ್ಲ ಅಂಶಗಳನ್ನು ಈ ದಿನ ಒಳಗೊಂಡಿದೆ.

ಪುರುಷರ ವಿರುದ್ಧದ ತಾರತಮ್ಯ ಎತ್ತಿ ತೋರಿಸುವುದು ಈ ದಿನದ ಪ್ರಮುಖ ಉದ್ದೇಶ

ಲಿಂಗ ಸಂಬಂಧಗಳನ್ನು ಸುಧಾರಿಸಲು ಮತ್ತು ಲಿಂಗ ಸಮಾನತೆ ಉತ್ತೇಜಿಸಲು ಆಚರಣೆ ಮೂಲಕ ಜಾಗೃತಿ

ಪುರುಷರು ಎದುರಿಸುತ್ತಿರುವ ಸಾಮಾಜಿಕ ಸಮಸ್ಯೆಗಳ ಕುರಿತು ಕೆಲವು ಪ್ರಮುಖ ಅಂಕಿ- ಅಂಶಗಳು ಹೀಗಿವೆ

ಪುರುಷರ ಆತ್ಮಹತ್ಯೆ ಪ್ರಮಾಣ ಇಷ್ಟು!

ಎನ್‌ಸಿಆರ್‌ಬಿ ವರದಿಯ ಪ್ರಕಾರ 2019ರಲ್ಲಿ ಪ್ರತಿ 100 ಆತ್ಮಹತ್ಯೆ ಸಾವುಗಳಲ್ಲಿ 70.2ರಷ್ಟು ಪುರುಷರು ಮೃತಪಟ್ಟಿದ್ದರೆ ಮಹಿಳೆಯರ ಪ್ರಮಾಣ ಕೇವಲ 29.8 ಮಹಿಳೆಯರದ್ದಾಗಿದೆ ಎಂದು ಪೊಲೀಸರು ದಾಖಲಿಸಿದ ಪ್ರಕರಣಗಳಿಂದ ಮಾಹಿತಿ ಸಂಗ್ರಹಿಸುವ ಎನ್‌ಸಿಆರ್‌ಬಿ ಹೇಳಿದೆ. ಆತ್ಮಹತ್ಯೆಗೆ ಶರಣಾಗುವ ಪುರುಷರಲ್ಲಿ ಸುಮಾರು 68.4ರಷ್ಟು ಮಂದಿ ವಿವಾಹವಾದರು, ಆದರೆ, ಅನುಪಾತವು ಸ್ತ್ರೀ ಸಂತ್ರಸ್ತರಿಗೆ ಶೇಕಡಾ 62.5 ರಷ್ಟಿದೆ ಎಂದು ಡೇಟಾ ತೋರಿಸಿದೆ.

ಯಾತಕ್ಕಾಗಿ ಆತ್ಮಹತ್ಯೆ?

ಡ್ರಗ್ಸ್​ ಮತ್ತು ಮದ್ಯ ಸೇವನೆ ದಾಸರಾಗುವ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡವರಲ್ಲಿ ಶೇ. 95ಕ್ಕಿಂತ ಹೆಚ್ಚು ಪುರುಷರು ಆಗಿದ್ದಾರೆ. 2019ರಲ್ಲಿ, ಮಾದಕ ದ್ರವ್ಯ ಸೇವನೆ / ಮದ್ಯ ವ್ಯಸನದಿಂದಾಗಿ ಒಟ್ಟು 7,860 ಆತ್ಮಹತ್ಯೆ ಪ್ರಕರಣಗಳು ಒಳಗಾಗಿದ್ದು, ಇದರಲ್ಲಿ 7,719 ಪುರುಷರು. ಇದು 2010 ರಿಂದ 2019ರ ಅವಧಿಯಲ್ಲಿ ಅತಿ ಹೆಚ್ಚು ಸಂಭವಿಸಿದೆ.

ಡಬ್ಲ್ಯುಎಚ್‌ಓ ಪ್ರಕಾರ, ಲಿವರ್ ಸಿರೋಸಿಸ್, ಕ್ಯಾನ್ಸರ್ ಅಥವಾ ಕುಡಿದು ವಾಹನ ಚಲಾಯಿಸುವುದರಿಂದ ಉಂಟಾಗುವ ರಸ್ತೆ ಅಪಘಾತಗಳಿಗೆ ಕಾರಣವಾಗುವ ಮೂಲಕ ಪ್ರತಿವರ್ಷ 2.6 ಲಕ್ಷ ಭಾರತೀಯರನ್ನು ಮದ್ಯಪಾನ ಬಲಿ ಪಡೆದಿದೆ.

ಪುರುಷರ ಒಟ್ಟು ಜೀವಿತಾವಧಿ

ಪುರುಷರ ಒಟ್ಟಾರೆ ಜೀವಿತಾವಧಿ ಹುಟ್ಟಿನಿಂದ 69 ವರ್ಷಗಳು, ಮಹಿಳೆಯರು 70.4 ವರ್ಷಗಳು ಮತ್ತು ಪುರುಷರು 67.8 ವರ್ಷಗಳು ಎಂದು ನಿರೀಕ್ಷಿಸಲಾಗಿದೆ ಎಂದು 2013-17ರ ಇತ್ತೀಚಿನ ಮಾದರಿ ನೋಂದಣಿ ಸಮೀಕ್ಷೆ (ಎಸ್‌ಆರ್‌ಎಸ್)ಯಿಂದ ತಿಳಿದು ಬಂದಿದೆ. ಪುರುಷರ ಜೀವಿತಾವಧಿ ಯಾವಾಗಲೂ ಭಾರತದಲ್ಲಿ ಮಹಿಳೆಯರಿಗಿಂತ ಕಡಿಮೆಯೇ ಇದೆ.

ಭಾರತದ ವಿವಾಹ ಮಾರುಕಟ್ಟೆಯಲ್ಲಿ ಪುರುಷರೇ ಮೇಲು

ಭಾರತದಲ್ಲಿ 1000 ಪುರುಷರಿಗೆ ಇಂತಿಷ್ಟು ಮಹಿಳೆಯರು ಎಂದು ಲಿಂಗಾನುಪಾತದ ಲೆಕ್ಕ ಹಾಕಲಾಗುತ್ತದೆ. 2011ರ ಜನಗಣತಿ ಪ್ರಕಾರ 1000 ಪುರುಷರಿಗೆ 940 ಮಹಿಳೆಯರಿದ್ದಾರೆ. ಇದು 2001ರಲ್ಲಿ 933 ರಷ್ಟಿತ್ತು. ಆದರೆ, ಭಾರತದಲ್ಲಿ ಇಂದಿಗೂ ಹೆಣ್ಣು ಭ್ರೂಣ ಹತ್ಯೆ ಪ್ರಚಲಿತದಲ್ಲಿರುವುದರಿಂದ ಪುರುಷರ ಸಂಖ್ಯೆಯಲ್ಲಿ ಮಾತ್ರ ಗಣನೀಯ ಏರಿಕೆ ಕಂಡು ಬರುತ್ತಿದೆ.

ಪುರುಷರು ಹೆಚ್ಚಾಗಿ ಕಡಿಮೆ ಸಾಮಾಜಿಕ ಆರ್ಥಿಕ ವರ್ಗದಿಂದ ಬಂದವರು, ಉದ್ಯೋಗ ಇಲ್ಲದವರು, ಅವರು ಕೆಲಸ ಮಾಡುತ್ತಿರುವ ಸಮುದಾಯಗಳೊಂದಿಗೆ ಕೆಲವು ಸಂಬಂಧಗಳನ್ನು ಹೊಂದಿರುವ ಸಾಕಷ್ಟು ಅಲೆಮಾರಿ ಅಥವಾ ಅಸ್ಥಿರ ಜೀವನಶೈಲಿಯನ್ನು ನಡೆಸುತ್ತಿರುತ್ತಾರೆ. ಒಟ್ಟಾರೆಯಾಗಿ ಈ ಹೆಚ್ಚುವರಿ ಯುವ ಸಮುದಾಯದ ಪುರುಷರನ್ನು ಸಾಮಾಜಿಕ ಸ್ಪರ್ಧೆಯಲ್ಲಿ ಸೋತವರು ಎಂದು ಪರಿಗಣಿಸಬಹುದು.

ಕೋವಿಡ್ -19 ಪುರುಷರ ಆರೋಗ್ಯ

ಕೋವಿಡ್​​-19ನಿಂದ ಪುರುಷರು ಮತ್ತು ಮಹಿಳೆಯರು ವಿಭಿನ್ನವಾಗಿ ಪರಿಣಾಮ ಎದುರಿಸಿದ್ದಾರೆ. ಈ ಖಾಯಿಲೆಯಿಂದ ಪುರುಷರ ಸಾವಿಗೀಡಾಗಿರುವುದೇ ಹೆಚ್ಚು, ಆದರೆ ಮಹಿಳೆಯರು ಸಹ ಇದರಿಂದ ತೊಂದರೆಗೆ ಸಿಲುಕಿದ್ದಾರೆ. ಇದರಿಂದ ಲೈಂಗಿಕ ಮತ್ತು ಲಿಂಗ ವ್ಯತ್ಯಾಸಗಳು ಪುರುಷರ ಮೇಲೆ ಹೇಗೆ ವಿಭಿನ್ನವಾಗಿ ಪರಿಣಾಮ ಬೀರುತ್ತವೆ ಎಂಬುದನ್ನು ತೋರಿಸುತ್ತದೆ.

ಪುರುಷರಲ್ಲಿನ ಕಡಿಮೆ ರೋಗ ನಿರೋಧಕ ಶಕ್ತಿ, ಧೂಮಪಾನ ಮತ್ತು ಮದ್ಯಪಾನದ ಅಭ್ಯಾಸ ಸೇರಿದಂತೆ ಪುರುಷತ್ವಕ್ಕೆ ಸಂಬಂಧಿಸಿದ ಅಭ್ಯಾಸಗಳು ಮತ್ತು ನಡವಳಿಕೆಗಳು ಸೇರಿದಂತೆ, ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಕೆ ಇನ್ನಿತರ ಸಾಮಾಜಿಕ ಆರೋಗ್ಯದಲ್ಲಿ ಕಡಿಮೆ ತೊಡಗುವುದರಿಂದ ಕೋವಿಡ್​​​ ಸೋಂಕಿನಲ್ಲಿ ಸಾವಿನ ಪ್ರಮಾಣ ಏರಿಕೆಯಾಗಿರಬಹುದು.

ಹೃದಯರಕ್ತನಾಳದ ಕಾಯಿಲೆ, ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಂತಹ ಸಮಸ್ಯೆಗಳು ಮಹಿಳೆಯರಿಗಿಂತ ಪುರುಷರಲ್ಲಿ ಹೆಚ್ಚು ಎನ್ನಲಾಗುತ್ತಿದೆ.

ಕೆಲಸ ಸಂಬಂಧಿತ ಒತ್ತಡ

ವಿಶ್ವದ ಅರ್ಧಕ್ಕಿಂತ ಹೆಚ್ಚು ಪುರುಷರು ಕೆಲಸ - ಸಂಬಂಧಿತ ಒತ್ತಡದಿಂದ ಬಳಲುತ್ತಿದ್ದಾರೆ ಎಂದು ಅಧ್ಯಯನಗಳು ತೋರಿಸುತ್ತಿವೆ. ಅವರಲ್ಲಿ ಕೆಲವರು ತಮ್ಮ ಒತ್ತಡವನ್ನು ನಿಯಂತ್ರಿಸಲಾಗುವುದಿಲ್ಲ ಎಂದು ಉಲ್ಲೇಖಿಸುತ್ತಾರೆ. ಜಾಗತಿಕ ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ತುಂಬಾ ಅನಿಶ್ಚಿತತೆಯೊಂದಿಗೆ ಈ ವರ್ಷದಲ್ಲಿ ಮಾನಸಿಕ ಆರೋಗ್ಯ ಚರ್ಚಿಸಲು ಮತ್ತು ದುಃಖ ಅಥವಾ ಆತಂಕದ ಸಾಮಾನ್ಯ ಭಾವನೆಗಳನ್ನು ಸಮತೋಲನದಲ್ಲಿಡಲು ಸಹಾಯ ಮಾಡುವ ನಿಟ್ಟಿನಲ್ಲಿ ಕೆಲಸದ ಸ್ಥಳಗಳು ಕಾರ್ಯನಿರ್ವಹಿಸುತ್ತಿವೆ.

ABOUT THE AUTHOR

...view details