ಕರ್ನಾಟಕ

karnataka

ETV Bharat / bharat

ರಾಜೀವ್ ಗಾಂಧಿ: ದೇಶ ಕಂಡ ವರ್ಚಸ್ವಿ ನಾಯಕನ ಬಗ್ಗೆ ಕುತೂಹಲಕಾರಿ ಸಂಗತಿಗಳು.. - ರಾಜೀವ್ ಗಾಂಧಿ ವೀರಭೂಮಿ

ಇಂದು ಭಾರತ ಕಂಡ ಅತ್ಯಂತ ವರ್ಚಸ್ವಿ ರಾಜಕಾರಣಿ, ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಅವರ 77ನೇ ಜನ್ಮದಿನಾಚರಣೆ. ಈ ಹಿನ್ನೆಲೆಯಲ್ಲಿ ಅಪರೂಪದ ವ್ಯಕ್ತಿತ್ವ ಹೊಂದಿದ್ದ ನಾಯಕನ ಬಗ್ಗೆ ಕೆಲವು ಆಸಕ್ತಿದಾಯಕ ವಿಚಾರಗಳು ಇಲ್ಲಿವೆ.

Rajiv Gandhi
ರಾಜೀವ್ ಗಾಂಧಿ

By

Published : Aug 20, 2021, 9:54 AM IST

ಇಂದು ದೇಶಾದ್ಯಂತ ದಿ.ರಾಜೀವ್ ಗಾಂಧಿ ಅವರ 77ನೇ ಜನ್ಮದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಈ ದಿನವನ್ನು ಕಾಂಗ್ರೆಸ್​ ಪಕ್ಷ 'ಸದ್ಭಾವನ ದಿವಸ್' ಎಂದು ಆಚರಣೆ ಮಾಡುತ್ತದೆ. ಸದ್ಭಾವನ ದಿವಸವು ರಾಷ್ಟ್ರೀಯ ಏಕೀಕರಣ ಮತ್ತು ವಿವಿಧ ಸಮುದಾಯಗಳ ನಡುವೆ ಶಾಂತಿಯನ್ನು ಉತ್ತೇಜಿಸುವ ಗುರಿ ಹೊಂದಿದೆ.

40ನೇ ವಯಸ್ಸಿನಲ್ಲಿ ಪ್ರಧಾನಿ ಹುದ್ದೆ

ಭಾರತದ ಮೊದಲ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ ಸಾವಿನ ನಂತರ ರಾಜೀವ್​ ಗಾಂಧಿ ಅವರು ಉತ್ತರಾಧಿಕಾರಿಯಾಗಿ ಆಯ್ಕೆಯಾದರು. ಕೇವಲ 40 ನೇ ವಯಸ್ಸಿನಲ್ಲಿ ದೇಶದ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ ಮಾಡಿದರು.

ಮೆಕ್ಯಾನಿಕಲ್ ಎಂಜಿನಿಯರಿಂಗ್ ಶಿಕ್ಷಣ ಅರ್ಧಕ್ಕೆ ಮೊಟಕು

ರಾಜೀವ್​ ಗಾಂಧಿ ತಮ್ಮ ಬಾಲ್ಯದ ಶಿಕ್ಷಣವನ್ನು ಡೆಹ್ರಾಡೂನ್​ನ ವೆಲ್ಹಾಮ್ ಪ್ರೆಪ್‌ನಲ್ಲಿ ಮುಗಿಸಿದರು. ಆ ಬಳಿಕ ಹೆಚ್ಚಿನ ವಿದ್ಯಾಭ್ಯಾಸಕ್ಕೆಂದು ಕೇಂಬ್ರಿಡ್ಜ್‌ನ ಟ್ರಿನಿಟಿ ಕಾಲೇಜಿಗೆ ಸೇರಿದರು. ಅಲ್ಲಿಂದ ಉನ್ನತ ಶಿಕ್ಷಣಕ್ಕಾಗಿ ಲಂಡನ್​ನ ಇಂಪೀರಿಯಲ್ ಕಾಲೇಜು ಸೇರಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಕೋರ್ಸ್‌ ಆಯ್ಕೆ ಮಾಡಿಕೊಂಡರು. ಆದರೆ ಶಿಕ್ಷಣವನ್ನು ಅವರು ಪೂರ್ಣಗೊಳಿಸಲಿಲ್ಲ.

ಅಲ್ಬಿನಾ ಮೈನೊ ಜೊತೆ ಪ್ರೀತಿ

ಈ ಸಂದರ್ಭದಲ್ಲಿ ರಾಜೀವ್ ಗಾಂಧಿ ಎಡ್ವಿಜ್ ಆಂಟೋನಿಯಾ ಅಲ್ಬಿನಾ ಮೈನೊ ಅವರನ್ನು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಭೇಟಿಯಾದರು. ಇವರ ಈ ಭೇಟಿ ಪ್ರೀತಿಗೆ ತಿರುಗಿ ಬಳಿಕ 1968ರಲ್ಲಿ ವಿವಾಹವಾದರು. ಆ ನಂತರ ಆಕೆಗೆ ಸೋನಿಯಾ ಗಾಂಧಿ ಎಂದು ಮರುನಾಮಕರಣ ಮಾಡಲಾಯಿತು.

ಪೈಲಟ್‌ ಆಗಿ ಇಂಡಿಯನ್ ಏರ್‌ಲೈನ್ಸ್‌ನಲ್ಲಿ ಉದ್ಯೋಗ

ರಾಜೀವ್ ಗಾಂಧಿ ಸಂಗೀತದ ಬಗ್ಗೆ ಅಪಾರ ಒಲವು ಹೊಂದಿದ್ದರು. ಪಾಶ್ಚಾತ್ಯ, ಹಿಂದೂಸ್ತಾನಿ, ಶಾಸ್ತ್ರೀಯ ಸಂಗೀತವೆಂದರೆ ಅವರಿಗೆ ಅಚ್ಚುಮೆಚ್ಚು. ಅಷ್ಟೇ ಅಲ್ಲದೆ, ಛಾಯಾಗ್ರಹಣದ ಬಗೆಗೂ ಉತ್ಸುಕರಾಗಿದ್ದರು. ರಾಜೀವ್ ಗಾಂಧಿ ಮೊದಮೊದಲು ರಾಜಕೀಯದಲ್ಲಿ ಆಸಕ್ತಿ ಹೊಂದಿರಲಿಲ್ಲ. ಅವರು ವೃತ್ತಿಯಲ್ಲಿ ಪೈಲಟ್ ಆಗಿ, 1970 ರಲ್ಲಿ ಇಂಡಿಯನ್ ಏರ್‌ಲೈನ್ಸ್‌ನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಪೈಲಟ್ ಆಗಿ ತನ್ನ ವೃತ್ತಿಜೀವನವನ್ನು ತ್ಯಜಿಸಲು ಹಿಂಜರಿದರೂ ಸಹ ಕೆಲ ಸನ್ನಿವೇಶದಿಂದ ಅವರು ರಾಜಕೀಯ ಪ್ರವೇಶಿಸಬೇಕಾಯಿತು. ಮುಖ್ಯವಾಗಿ ಅವರ ಸಹೋದರ ಸಂಜಯ್​ ಗಾಂಧಿ 1980 ರಲ್ಲಿ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ ನಂತರ ಅವರು ಈ ನಿರ್ಧಾರಕ್ಕೆ ಬಂದಿದ್ದರು.

ಪಕ್ಷಾಂತರ ವಿರೋಧಿ ಕಾನೂನು ರಚನೆ

ಸಂಜಯ್​ ಗಾಂಧಿ ನಿಧನದ ಬಳಿಕ ರಾಜೀವ್ ಗಾಂಧಿ ತನ್ನ ಸಹೋದರನ ಕ್ಷೇತ್ರವಾದ ಅಮೇಥಿಯಿಂದ ಚುನಾವಣೆಗೆ ಸ್ಪರ್ಧಿಸಿದರು. ಅಷ್ಟೇ ಅಲ್ಲದೆ, 1981 ರಲ್ಲಿ ಭಾರತೀಯ ಯುವ ಕಾಂಗ್ರೆಸ್ ಅಧ್ಯಕ್ಷರಾದರು. ರಾಜೀವ್ ಗಾಂಧಿ ಅವರು ದೇಶದಿಂದ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುವ ಭರವಸೆ ನೀಡಿದ್ದಕ್ಕಾಗಿ "ಮಿಸ್ಟರ್​ ಕ್ಲೀನ್" ಎಂಬ ಬಿರುದನ್ನು ಪಡೆದರು. ರಾಜೀವ್ ಗಾಂಧಿ ಪ್ರಧಾನಿಯಾಗಿದ್ದ ಅವಧಿಯಲ್ಲಿ 1985ರಲ್ಲಿ ಪಕ್ಷಾಂತರ ವಿರೋಧಿ ಕಾನೂನನ್ನು ಅಂಗೀಕರಿಸಿದರು. ಅದರ ಪ್ರಕಾರ ಚುನಾಯಿತ ಸಂಸತ್ ಸದಸ್ಯರು ಮುಂದಿನ ಚುನಾವಣೆಯವರೆಗೆ ವಿರೋಧ ಪಕ್ಷಕ್ಕೆ ಸೇರಲು ಸಾಧ್ಯವಿರಲಿಲ್ಲ.

ಎಲ್‌ಟಿಟಿಇ(LTTE) ಯಿಂದ ಹತ್ಯೆ

ರಾಜೀವ್ ಗಾಂಧಿ ಅವರನ್ನು ಭಾರತ ಕಂಡ ಅತ್ಯಂತ ವರ್ಚಸ್ಸಿನ ಪ್ರಧಾನಮಂತ್ರಿ ಎಂದು ಇಂದಿಗೂ ನೆನಪಿಸಿಕೊಳ್ಳಲಾಗುತ್ತದೆ. 20 ಆಗಸ್ಟ್ 1944ರಂದು ಜನಿಸಿದ ರಾಜೀವ್ ಗಾಂಧಿ, ಅಕ್ಟೋಬರ್ 1984 ರಲ್ಲಿ ಅಧಿಕಾರ ವಹಿಸಿಕೊಂಡಾಗ ಭಾರತದ ಅತ್ಯಂತ ಕಿರಿಯ ಪ್ರಧಾನ ಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. 2 ಡಿಸೆಂಬರ್ 1989 ರವರೆಗೆ ಅವರು ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು.
ಮೇ 1991 ರಲ್ಲಿ ತಮಿಳುನಾಡಿನ ಶ್ರೀಪೆರುಂಬುದೂರಿನಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಲಿಬರೇಶನ್ ಟೈಗರ್ಸ್ ಆಫ್ ತಮಿಳು ಈಲಂ (ಎಲ್‌ಟಿಟಿಇ) ಉಗ್ರರು ಆತ್ಮಾಹುತಿ ಬಾಂಬರ್ ಮೂಲಕ ರಾಜೀವ್ ಗಾಂಧಿ ಅವರನ್ನು ಹತ್ಯೆ ಮಾಡಿದ್ದರು.

ABOUT THE AUTHOR

...view details