ಕರ್ನಾಟಕ

karnataka

ETV Bharat / bharat

ಹಳಿ ಮೇಲೆ ವಿಡಿಯೋ ಮಾಡ್ತಿದ್ದಾಗ ಅವಘಡ : ರೈಲಿಗೆ ಸಿಲುಕಿ ಒಂದೇ ಊರಿನ ಮೂವರು ವಿದ್ಯಾರ್ಥಿಗಳು ಸಾವು - Insta reel in front of a running train

ಇನ್‌ಸ್ಟಾಗ್ರಾಮ್​ ಕ್ರೇಜ್‌ಗಾಗಿ ಒಂದೇ ಊರಿನ 3 ವಿದ್ಯಾರ್ಥಿಗಳು ರೈಲ್ವೆ ಹಳಿ ಮೇಲೆ ನಿಂತು ವಿಡಿಯೋ ಮಾಡ್ತಿದ್ದಾಗ ಮೂವರ ಪ್ರಾಣಪಕ್ಷಿ ಹಾರಿಹೋದ ಘಟನೆ ತಮಿಳುನಾಡಿದ ಚೆಂಗಲ್ಪಟ್ಟುವಿನಲ್ಲಿ ನಡೆದಿದೆ..

ಒಂದೇ ಊರಿನ ಮೂವರು ವಿದ್ಯಾರ್ಥಿಗಳು ಸಾವು
ಒಂದೇ ಊರಿನ ಮೂವರು ವಿದ್ಯಾರ್ಥಿಗಳು ಸಾವು

By

Published : Apr 8, 2022, 2:14 PM IST

ಚೆನ್ನೈ: ಕೆಲವೊಮ್ಮೆ ನಾವು ಕ್ರೇಜ್​ಗಾಗಿ ಮಾಡುವ ಎಡವಟ್ಟಿನ ಹವ್ಯಾಸಗಳೇ ನಮ್ಮ ಜೀವಕ್ಕೆ ಅಪಾಯ ತಂದು ಬಿಡುತ್ತವೆ. ಇದಕ್ಕೆ ಸಾಕ್ಷಿ ಎಂಬಂತೆ ಚೆನ್ನೈಲ್ಲೊಂದು ಘಟನೆ ನಡೆದಿದೆ. ಇನ್‌ಸ್ಟಾಗ್ರಾಮ್​ನಲ್ಲಿ ಅಪ್ಲೋಡ್ ಮಾಡಲು​ ರೈಲ್ವೆ ಹಳಿ ಮೇಲೆ ನಿಂತು ವಿಡಿಯೋ ಮಾಡುತ್ತಿದ್ದಾಗ ದಿಢೀರ್​ ಆಗಮಿಸಿದ ರೈಲಿಗೆ ಒಂದೇ ಊರಿನ ಮೂವರು ಕಾಲೇಜ್​ ವಿದ್ಯಾರ್ಥಿಗಳು ಬಲಿಯಾಗಿದ್ದಾರೆ.

ಚೆಂಗಲ್ಪಟ್ಟು ಪಕ್ಕದ ಚೆಟ್ಟಿಪುನ್ನಿಯಂ ಪ್ರದೇಶದ ಅಶೋಕ್ ಕುಮಾರ್, ಪ್ರಕಾಶ್ ಮತ್ತು ಮೋಹನ್ ಎಂಬುವರು ಮೃತ ವಿದ್ಯಾರ್ಥಿಗಳು. ಇವರು ಆಗಾಗ ಸೆಲ್ಫಿ ವಿಡಿಯೋ ಮಾಡಿ ಇನ್ ಸ್ಟಾಗ್ರಾಮ್​ನಲ್ಲಿ ಹಾಕುತ್ತಿದ್ದರು.

ಮಾರ್ಚ್ 7ರ ಸಂಜೆ ಮೂವರು ರೈಲೆ ಹಳಿ ಮೇಲೆ ನಿಂತು ವಿಡಿಯೋ ಮಾಡುತ್ತಿದ್ದಾಗ ಚೆನ್ನೈನಿಂದ ಚೆಂಗಲ್ಪಟ್ಟಿಗೆ ಬರುತ್ತಿದ್ದ ರೈಲು ಡಿಕ್ಕಿ ಹೊಡೆದಿದೆ. ಪರಿಣಾಮ ಮೂವರು ಯುವಕರ ಮೃತದೇಹ ಸ್ಥಳದಲ್ಲೇ ಚೆಲ್ಲಾಪಿಲ್ಲಿಯಾಗಿದ್ದು, ಧಾರುಣವಾಗಿ ಸಾವನ್ನಪ್ಪಿದ್ದಾರೆ.

ಚೆಂಗಲ್ಪಟ್ಟು ರೈಲ್ವೆ ಪೊಲೀಸರು ಯುವಕರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಇದನ್ನೂ ಓದಿ:ಬೆಂಗಳೂರಿನ 4 ಶಾಲೆಗಳಿಗೆ ಬಾಂಬ್ ಬೆದರಿಕೆ.. ಕಮಿಷನರ್‌ ಪಂತ್‌ ಹೀಗೆ ಹೇಳಿದರು..

ABOUT THE AUTHOR

...view details