ಹೈದರಾಬಾದ್: ಹೊಸ ಸಂವಾದಗಳು ವಿದೇಶಾಂಗ ನೀತಿಯನ್ನು ಪ್ರಜಾಪ್ರಭುತ್ವಗೊಳಿಸಿದೆ ಹಾಗೆ ಇದರಿಂದಾಗಿ ಭಾರತದ ಅಂತಾರಾಷ್ಟ್ರೀಯ ಬ್ರ್ಯಾಂಡಿಂಗ್ ಕೂಡ ಹೆಚ್ಚಾಗಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.
ನಾವು ಇಂದು ಗಂಭೀರ ಘಟನೆಗಳನ್ನು ಹೊಂದಿರುವ ದೇಶವಾಗಿ ಕಾಣುತ್ತಿದ್ದೇವೆ. ವಿಭಿನ್ನ ಜನರು ಬಂದು ಮಾತನಾಡುತ್ತಿದ್ದಾರೆ. ಅಂತಾರಾಷ್ಟ್ರೀಯ ಖ್ಯಾತಿಯ ವಿಷಯದಲ್ಲಿ ನಮಗೆ ಅಗಾಧವಾಗಿ ಇದು ಸಹಾಯ ಮಾಡಿದೆ ಎಂದು ನಾನು ಭಾವಿಸುತ್ತೇನೆ ಎಂದು ಜಾಗತಿಕ ತಂತ್ರಜ್ಞಾನ ಶೃಂಗಸಭೆಯಲ್ಲಿ ಜೈಶಂಕರ್ ತಿಳಿಸಿದರು.