ಕರ್ನಾಟಕ

karnataka

ETV Bharat / bharat

ಭಾರತದಲ್ಲಿ ಆಗಸ್ಟ್ ತಿಂಗಳ ವ್ಯಾಕ್ಸಿನೇಷನ್ ಪ್ರಮಾಣ G7 ರಾಷ್ಟ್ರಗಳಿಗಿಂತಲೂ ಹೆಚ್ಚು.. - ಕೇಂದ್ರ ಸರ್ಕಾರ

ಜಿ7 ರಾಷ್ಟ್ರಗಳಾದ ಕೆನಡಾ, ಯುನೈಟೆಡ್​ ಕಿಂಗ್​ಡಮ್​, ಅಮೆರಿಕ, ಇಟಲಿ, ಜರ್ಮನಿ, ಫ್ರಾನ್ಸ್ ಮತ್ತು ಜಪಾನ್ ದೇಶಗಳೆಲ್ಲವನ್ನೂ ಒಟ್ಟು ಸೇರಿಸಿದರೂ ಈ ತಿಂಗಳ ವ್ಯಾಕ್ಸಿನೇಷನ್​ನಲ್ಲಿ ನಾವೇ ಮುಂಚೂಣಿಯಲ್ಲಿದ್ದೇವೆ ಎಂದು ಅಂಕಿ-ಅಂಶಗಳ ಸಮೇತ ಪೋಸ್ಟ್ ಮಾಡಿದೆ..

Vaccination
Vaccination

By

Published : Sep 5, 2021, 5:09 PM IST

ನವದೆಹಲಿ :ಆಗಸ್ಟ್‌ ತಿಂಗಳಿನಲ್ಲಿ ದಾಖಲೆಯ ಮಟ್ಟದಲ್ಲಿ ಭಾರತದಾದ್ಯಂತ ಕೋವಿಡ್​ ಲಸಿಕೆ ನೀಡಲಾಗಿದೆ. ಈ ಪ್ರಮಾಣವು ಎಲ್ಲಾ ಜಿ7 ರಾಷ್ಟ್ರಗಳಿಗಿಂತಲೂ ಹೆಚ್ಚಿದ್ದು, ಜಾಗತಿಕ ಭೂಪಟದಲ್ಲಿ ಭಾರತವು ಮುಂಚೂಣಿಯಲ್ಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಭಾರತ ಸರ್ಕಾರದ MyGovIndia ಅಧಿಕೃತ ಟ್ವಟರ್​ ಖಾತೆಯಲ್ಲಿ ಈ ವಿಚಾರವನ್ನು ಹಂಚಿಕೊಂಡಿರುವ ಕೇಂದ್ರ, ಆಗಸ್ಟ್​ನಲ್ಲಿ 180 ಮಿಲಿಯನ್‌ಗಿಂತ ಹೆಚ್ಚಿನ ಕೋವಿಡ್ ಲಸಿಕೆಯ ಡೋಸ್​ಗಳನ್ನು ನೀಡಲಾಗಿದೆ. ಜಿ7 ರಾಷ್ಟ್ರಗಳಾದ ಕೆನಡಾ, ಯುನೈಟೆಡ್​ ಕಿಂಗ್​ಡಮ್​, ಅಮೆರಿಕ, ಇಟಲಿ, ಜರ್ಮನಿ, ಫ್ರಾನ್ಸ್ ಮತ್ತು ಜಪಾನ್ ದೇಶಗಳೆಲ್ಲವನ್ನೂ ಒಟ್ಟು ಸೇರಿಸಿದರೂ ಈ ತಿಂಗಳ ವ್ಯಾಕ್ಸಿನೇಷನ್​ನಲ್ಲಿ ನಾವೇ ಮುಂಚೂಣಿಯಲ್ಲಿದ್ದೇವೆ ಎಂದು ಅಂಕಿ-ಅಂಶಗಳ ಸಮೇತ ಪೋಸ್ಟ್ ಮಾಡಿದೆ.

ಆರೋಗ್ಯ ಇಲಾಖೆ ಟ್ವೀಟ್​

ಜನವರಿ 16ರಂದು ದೇಶಾದ್ಯಂತ ಕೊರೊನಾ ಲಸಿಕಾ ಅಭಿಯಾನ ಆರಂಭಿಸಲಾಗಿದೆ. ಈವರೆಗೆ ಒಟ್ಟು 68.46 ಕೋಟಿಗೂ ಹೆಚ್ಚು ಡೋಸ್​ಗಳನ್ನು ಜನರಿಗೆ ನೀಡಲಾಗಿದೆ. ಈ ಪೈಕಿ 18-44 ವರ್ಷದ ಶೇ.49.8 ಮಂದಿ, 45-60 ವರ್ಷದ ಶೇ.30.1 ಜನರು ಹಾಗೂ 60 ವರ್ಷ ಮೇಲ್ಪಟ್ಟ ಶೇ.20.1ರಷ್ಟು ಜನರು ವ್ಯಾಕ್ಸಿನ್​ ಹಾಕಿಸಿಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ABOUT THE AUTHOR

...view details